*ಅಕ್ರಮ ಮಧ್ಯ ಮಾರಾಟ: ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು *


 ಅಕ್ರಮ ಮಧ್ಯ ಮಾರಾಟ: ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು



ರೋಣ:ಜಕ್ಕಲಿ ಗ್ರಾಮ ಸೇರಿದಂತೆ  ತಾಲೂಕು ವಿವಿಧ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು,ಅಬಕಾರಿ ಇಲಾಖೆಯ ಅಧಿಕಾರಿಗಳು ಮಾರಾಟ ಮಾಡುವವರ ವಿರುದ್ದ ಕಡಿವಾಣ ಹಾಕದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


ತಾಲೂಕಿನ ಪ್ರತಿ ಗ್ರಾಮಗಳಲ್ಲಿ 24 ಗಂಟೆಗಳಲ್ಲಿ ಸಾರಾಯಿ ಆಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು,ಕೆಲವು ಬಾರ್ ಗಳಲ್ಲಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಮದ್ಯ ಸಾಗಾಟ ಮಾಡುತ್ತಿದ್ದು,ಅಧಿಕಾರಿಗಳು ಕಂಡು ಕಾಣದಂತೆ ಬೇಜಾವಾಬ್ದಾರಿ ತನ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ


ಗ್ರಾಮಗಳಲ್ಲಿ ಮಧ್ಯ ಮಾರಾಟ ಮಾಡುವುದರಿಂದ ಯುವಕರು ಕುಡಿತದ ಚಟಕ್ಕೆ ಮಾರುಹೋಗಿ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ ಹಾಗೂ ಅನೇಕ ಯುವಕರು ಸಾವನ್ನಪ್ಪಿದ್ದಾರೆ.ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮಧ್ಯ ಮಾರಾಟ ಮಾಡುವವರ ವಿರುದ್ಧ ಕಡಿವಾಣ ಹಾಕಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


ಮಧ್ಯ ಮಾರಾಟದಿಂದ ಅಕ್ಕಪಕ್ಕದಲ್ಲಿ  ಇರುವ ಅಂಗಡಿಗಳಿಗೂ ಹಾಗೂ ಮನೆಗಳಿಗೂ ತುಂಬಾ  ತೊಂದರೆಯಾಗುತ್ತಿದೆ. ಪರವಾನಿಗೆ ಪಡೆಯದೇ ಕೆಲ ಬಾರುಗಳು  ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಾಯಿಕೊಡೆಯಂತೆ  ತೆಲೆ ಎತ್ತಿರುವ ಅಕ್ರಮ ಮದ್ಯ ಅಂಗಡಿಗಳಿಗೆ ಮದ್ಯ ಮಾರಟ ಸರಬರಾಜು ಮಾಡುತ್ತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿದ್ದಾರೆ.


ಅಬಕಾರಿ ಇಲಾಖೆ ಸಿಬ್ಬಂದಿಗಳಿಂದ ಕಾಟಾಚಾರಕ್ಕೆ ದಾಳಿ:ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿ  ಮಾರಾಟಗಾರರು ರಾಜಾರೋಷವಾಗಿ ತೆಲೆ ಎತ್ತಿರುವ ಅಕ್ರಮ ಮಧ್ಯ ಮಾರಾಟ ಮಾಡುವುದರಿಂದ ಜನರಿಗೆ 

ಸಾಕಷ್ಟು ತೊಂದರೆಯಾಗುತ್ತಿದೆ. ಇನ್ನೂ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಅಲ್ಲಲ್ಲಿ ದಾಳಿ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ, ವರ್ಷಕ್ಕೆ ಕೇವಲ ಬೆರಳೆಣಿಕೆಯನ್ನು ಪ್ರಕರಣಗಳು ಮಾತ್ರ ದಾಖಲಾಗಿದೆ.


ಬಾಕ್ಸ್:

ಜಕ್ಕಲಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು,ಮಧ್ಯ ಮಾರಾಟ ವಿಷಯಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಅಧಿಕಾರಿ ಅಂಬಣ್ಣ   ಅವರಿಗೆ ವಿಷಯ ತಿಳಿಸಿದರು ಹಾರಿಕೆ ಉತ್ತರ ನೀಡುತ್ತಿದ್ದು, ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


-ಅಂದಪ್ಪ ಮಾದರ

ಗ್ರಾಮಸ್ಥರು

Image Description

Post a Comment

0 Comments