*ಮತದಾನ ಹಾಗೂ ಚುನಾವಣೆಯ ಹಿರಿಮೆ - ಗರಿಮೆಗಳ ಬಗ್ಗೆ ಡಾ. ಬಿ. ಆರ್. ಅಂಬೇಡ್ಕರ್ ರವರು ನುಡಿದ ಆದರ್ಶ ದರ್ಶನ*


 (ಬಾಬಾಸಾಹೇಬ ಡಾ. ಭೀಮರಾವ್ ರಾಮಜಿ ಅಂಬೇಡ್ಕರ್ ಸಾಹೇಬರು ಶತಶತಮಾನಗಳ ಶೋಷಣೆ, ದಬ್ಬಾಳಿಗೆ, ಗುಲಾಮಗಿರಿಯನ್ನು ಅಂತ್ಯಗೊಳಿಸಿ, ಸಂವಿಧಾನ, ಪ್ರಜಾಪ್ರಭುತ್ವ, ಚುನಾವಣೆ ಹಾಗೂ ಮತದಾನದ ಮೂಲಕ ಜಾತ್ಯಾತೀತವಾಗಿ ದೇಶದ ಸಾಮಾನ್ಯ ಮನುಷ್ಯನು ಸಹ ದೇಶದ ಆಡಳಿತ ಪ್ರತಿನಿಧಿಯಾಗಿ ಹಕ್ಕು ಅನುಭವಿಸಿ ಮತ್ತು ಭಾದ್ಯತೆಗಳನ್ನು ನಿಭಾಯಿಸಲು ಸದವಕಾಶವನ್ನು ನೀಡಿದ್ದಾರೆ. ಪ್ರಜಾಕ್ಷೇಮಕ್ಕಾಗಿ ಹಾಗೂ ರಾಷ್ಟ್ರೋನ್ನತಿಗಾಗಿ ಪ್ರಜೆಗಳ ಪ್ರತಿನಿಧಿಗಳಾಗಿ ಪ್ರಜೆಗಳಿಂದ ಆಯ್ಕೆಯಾಗಿ ಸರ್ವರ ಕಲ್ಯಾಣ ಮಾಡಲು ಭಾರತೀಯ ಸಂವಿಧಾನ ಮಾರ್ಗದರ್ಶನ ನೀಡುತ್ತದೆ. ಮಾರ್ಕ್ಸವಾದಿ ಸಮತಾ ಸಮಾಜದ ಚಿಂತಕರಾದ ಕುವಲಯ ಶರ್ಮಾರ್ವರು ಸಹ ಧರ್ಮ, ಪ್ರಜಾಸತ್ತೆ, ಚುನಾವಣೆಗಳು ಹಾಗೂ ಸಂವಿಧಾನವನ್ನು ಆಳುವ ವರ್ಗ ಅಪೀಮು(ನಶೆ)ಗಳಾಗಿ ಉಣಬಡಿಸಿಲು ಅವಕಾಶ ನೀಡಿದೆ, ಇವುಗಳನ್ನು ಕೋಟ್ಯಾಂತರ ಭಾರತಿಯರು ತಮ್ಮ ಅಸ್ತಿತ್ವ, ಸ್ವಾಭಿಮಾನ, ರಕ್ಷಣೆ ಹಾಗೂ ಸಾಮರಸ್ಯ, ಸಮಾನತೆಗಾಗಿ ಬಳಸಿಕೊಂಡು ಭಾರತವನ್ನು ವಿಶ್ವಗುರುವಾಗಿಸಬೇಕು. ಗುಂಡು, ತುಂಡು, ಪುಡಿಗಾಸಿನ ಆಮಿಷಕ್ಕೊಳಗಾಗದೆ ಸರ್ವ ಧರ್ಮ - ಜಾತಿ ಜನರ ಆಶೋತ್ತರಗಳನ್ನು ಇಡೇರಿಸುವ ನಿಸ್ವಾರ್ಥ ಸಜ್ಜನ ರಾಜಕಾರಣಿ - ಜನನಾಯಕರನ್ನು ಮತದಾನವೆಂಬ ಬಲಿಷ್ಠ ಅಸ್ತ್ರವನ್ನು ಪ್ರಯೋಗಿಸಿ ಚುನಾಯಿಸುವುದು ಪ್ರತಿಯೊಬ್ಬ ಭಾರತೀಯ ಸತ್ಪ್ರಜೆಗಳ ಆದ್ಯ ಕರ್ತವ್ಯವಾಗಿದೆ. ಲೋಕಸಭಾ ಚುನಾವಣೆ ಕಳೆದ ಎಪ್ರಿಲ್ ತಿಂಗಳಿಂದ ಭಾರತ ದೇಶದ ಎಲ್ಲಾ ರಾಜ್ಯಗಳಲ್ಲಿ  ನಡೆಯುತಿದ್ದು ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ 7 ಮೇ 2೦24ರ ಮಂಗಳವಾರ ನಡೆಯುತ್ತಿದೆ, ಆ ಕಾರಣ ಮತದಾನ ಮಹತ್ವದ ಬಗ್ಗೆ ಡಾ. ಅಂಬೇಡ್ಕರ್ ಮತ್ತು ಶರ್ಮಾ ರವರ ಆದರ್ಶಗಳೊಂದಿಗೆ ಜನ ಜಾಗೃತಿಗಾಗಿ ಮತ್ತು ಐಕ್ಯ ರಾಷ್ಟ್ರ ನಿರ್ಮಾಣದಕ್ಕೆ ಪ್ರಜೆಗಳ ಕರ್ತವ್ಯ ಪ್ರಜ್ಞೆಯನ್ನು ಬಡಿದೆಚ್ಚರಿಸುವ ಲೇಖನ)


*ಪ್ರಜಾ ಮತದಾನವು ಪ್ರಜ್ಞಾಪೂರ್ಣ ಸಮ ಸಮಾಜ ನಿರ್ಮಾಣಕ್ಕೆ ಅಂಕಿತ ಒತ್ತಲಿ*


*ಲೋಕಸಭಾ ಚುನಾವಣೆಯಲ್ಲಿ ಪ್ರಜೆಗಳ ಮತದಾನವು ಸರ್ವಜನ ಕಲ್ಯಾಣಕ್ಕೆ ವರದಾನವಾಗಲಿ*


*ಮತದಾನವು ಸಮ ಸಮಾನತೆಗೆ ಅಂಕಿತವಾಗಲಿ*


*"ಸಂವಿಧಾನದಲ್ಲಿ ನಾನು ನಿಮಗೆ ಮತದಾನದ ಹಕ್ಕು ಕೊಟ್ಟಿರುವುದು ರಾಜರಂತೆ ಬದುಕಲಿ ಅಂತ. ಆದರೆ, ರಾಜಕಾರಣಿಗಳ ಚಮಚಾಗಳಾಗಿ ಬದುಕಲಿ ಅಂತ ಅಲ್ಲ"* ಎಂದು ಯುವಪೀಳಿಗೆಗೆ ಹೇಳಿದ ಸಂವಿಧಾನಶಿಲ್ಪಿ ಬಾಬಾಸಾಹೇಬ ಡಾ. ಅಂಬೇಡ್ಕರ ಅವರು ಹೇಳಿದ ಮಾತು ಈಗಿನ ಸಂದರ್ಭದಲ್ಲಿ ಎಷ್ಟೊಂದು ಸಮಂಜಸವಾಗಿದೆಯಲ್ವಾ?!. ಲೋಕ ಸಭಾ ಚುನಾವಣೆಯಲ್ಲಿ ಮುತ್ತು, ರತ್ನ, ವಜ್ರ, ವೈಡೂರ್ಯಕ್ಕಿಂತಲೂ ಬಹುಪಾಲು ಬೆಲೆ ಬಾಳುವ ಅಮೂಲ್ಯ ಮತದಾನವನ್ನು ಯೋಗ್ಯ ವ್ಯಕ್ತಿ ಹಾಕಿ, ದೊರೆಗಳಂತೆ ಸ್ವಾಭಿಮಾನದಿಂದ ಬದುಕೋಣ ನಮ್ಮ ಅಸ್ತಿತ್ವಕ್ಕೆ ಭದ್ರಕೋಟೆ ಕಟ್ಟೋಣ. ಸಂವಿಧಾನದ 5 ರಿಂದ 11ರ ವರೆಗಿನ ಅನುಚ್ಛೇದಗಳು ಭಾರತೀಯ ಪ್ರಜೆಗಳಿಗೆ ನಾಗರಿಕತ್ವ - ಪ್ರಜಾಪ್ರಭುತ್ವ ದೀಕ್ಷೆಯನ್ನು ನೀಡಿದೆ. ಆ ದಿಸೆಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಹೇಳಿದ ಮತದಾನ - ಪ್ರಜಾಪ್ರಭುತ್ವದ ಹಿರಿಮೆ - ಗರಿಮೆಗಳ ಬಗ್ಗೆ ಚಿಂತನ - ಮಂಥನ ಮಾಡೋಣ.


              ಭಾರತದ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಗಳು 19ನೇ ಏಪ್ರಿಲ್ 2024 ರಿಂದ 1ನೇ ಜೂನ್ 2೦2೪ರವರೆಗೆ ನಡೆಯಲಿವೆ. ಸದ್ಯ ಇರುವ 18ನೇ ಲೋಕಸಭೆಯ 543 ಸ್ಥಾನಗಳಿಗೆ ಹೊಸ ಸದಸ್ಯರನ್ನು ಚುನಾಯಿಸಲಾಗುತ್ತದೆ. ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದ್ದು ಒಟ್ಟು 44 ದಿನಗಳ ಕಾಲ ಚುನಾವಣಾ ಚಟುವಟಿಕೆಗಳು ನಡೆಯಲಿವೆ. 4ನೇ ಜೂನ್ 2೦24ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ರಂದು ಕೊನೆಗೊಳ್ಳಲಿದೆ. 96 ಕೋಟಿ ಮತದಾರರು ಮತ ಚಲಾಯಿಸಲಿದ್ದು, 2019ರ ಚುನಾವಣೆಗಿಂತಲೂ 15 ಕೋಟಿ ಹೆಚ್ಚುವರಿ ಮತದಾರರಿದ್ದಾರೆ. 25ನೇ ಭಾರತ ಚುನಾವಣಾ ಆಯುಕ್ತರಾಗಿ 15 ಮೇ 2೦22ರಿಂದ ಮಾನ್ಯ ರಾಜೀವ್ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


               ಭಾರತ ದೇಶಕ್ಕೆ ಸಂವಿಧಾನ ನಮ್ಮ ಕಣ್ಣ ಮುಂದೆ ಬಂದಿರುವ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಪರ್ವವೂ ಪ್ರಜೆಗಳ ಮತದಾನದ ಹಬ್ಬವಾಗಿದೆ. ಬರುವ ಮುಂದಿನ ಐದು ವರ್ಷಗಳವರೆಗೆ ಭಾರತ ದೇಶ ಹಾಗೂ ಈ ದೇಶದಲ್ಲಿ ವಾಸವಾಗಿರುವ ಪ್ರತಿಯೊಬ್ಬ ಭಾರತೀಯರ ಹಿತವನ್ನು ಕಾಯುವ ಪ್ರಜಾ ನಾಯಕರನ್ನು ಆಯ್ಕೆ ಮಾಡಲು ಪ್ರಜೆಗಳೆಲ್ಲರೂ ಮತದಾನವನ್ನು ಮಾಡುವಂತಹ ಸಡಗರದ ಉತ್ಸವವಾಗಿದೆ. ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಬರುವ ಪೂರ್ವದಲ್ಲಿ ಅಂದರೆ 15 ಆಗಸ್ಟ್ 1947ರ ಮುಂಚೆ ನಮ್ಮ ದೇಶದಲ್ಲಿ 600 ಸಂಸ್ಥಾನಗಳು, 6 ಸಾವಿರ ಜಾತಿ - ಉಪಜಾತಿಗಳು, 7 ಧರ್ಮಗಳು 6 ನೂರು ಭಾಷೆಗಳು ಒಳಗೊಂಡಿರುವ ದೇಶ  ನಮ್ಮದು. ಇಷ್ಟೊಂದು ಜಾತಿ, ಧರ್ಮ, ಭಾಷೆ, ವೈವಿಧ್ಯಮಯ ಸಂಸ್ಕೃತಿ ಹೊಂದಿ, ಐಕ್ಯತೆಯನ್ನು ಕಾಪಾಡಿಕೊಂಡಿರುವ ಭಾರತ ದೇಶ ವಿಶ್ವದಲ್ಲಿ ಬೇರೊಂದು ರಾಷ್ಟ್ರವಿಲ್ಲ. ಭಾರತವನ್ನು ಅಖಂಡವಾಗಿ ಹಿಡಿದಿಟ್ಟಿರುವುದು ಸರಿದಾರರಲ್ಲಿ ಮುನ್ನಡೆಸಲು ಪ್ರತಿದಿನದ ಆಡಳಿತ ಪಾಠವನ್ನು ಹೇಳಿಕೊಟ್ಟಿರುವುದು ನಮ್ಮ 'ಭಾರತದ ಸಂವಿಧಾನ'. ಭಾರತವು ಸ್ವಾತಂತ್ರ್ಯವಾದ, ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕವಾದ ಗಣರಾಜ್ಯ ದೇಶವಾಗಿದೆ. ದೇಶದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ದೊರಕಿಸಿ ಕೊಡುವುದು ರಾಜ್ಯಾಂಗದ ಗುರಿಯಾಗಿದೆ. ಈ ದೇಶದ ಜನರೇ ಅಧಿಕಾರದ ಮೂಲ. ವಿಚಾರ ಅಭಿವ್ಯಕ್ತಿ ವ್ಯಕ್ತಿ ಗೌರವ ಸಹೋದರತೆಯನ್ನು ಬೆಳೆಸುವುದು ರಾಷ್ಟ್ರದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವುದು ದೇಶದ ಎಲ್ಲಾ ಪ್ರಜೆಗಳ - ಜನಪ್ರತಿನಿಧಿಗಳ ಕರ್ತವ್ಯವಾಗಿದೆ.


                    12ನೆಯ ಶತಮಾನದಲ್ಲಿಯೇ ಬಸವಣ್ಣರಾದಿ ಶರಣರು ವಿಶ್ವದ ಪ್ರಥಮ ಸಂಸತ್ತು ಎಂದು ಕರೆಯಲ್ಪಡುವ ಅನುಭವ ಮಂಟಪವನ್ನು ಕಟ್ಟಿ ಪ್ರಜಾಪ್ರಭುತ್ವದ ಮಹತ್ವವನ್ನು ಸಾರಿದಂತಹ ನಾಡಾಗಿದೆ. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದಂತ ಭಾರತ ಸಂವಿಧಾನವನ್ನು 26 ಜನವರಿ1950 ರಿಂದ ಅಳವಡಿಸಿಕೊಂಡು, ನವರಾಷ್ಟ್ರ ನಿರ್ಮಾಣಕ್ಕಾಗಿ 1952ರಿಂದ ಮೊದಲ ಸಾರ್ವತ್ರಿಕ ಲೋಕಸಭಾ ವುನಾವಣೆಗಳು ಪ್ರಜಾ ಮತದಾನದ ಮೂಲಕ ಯಶಸ್ವಿಯಾಗಿ ಎಲ್ಲರಿಗೂ ನ್ಯಾಯ ಒದಗಿಸುತ್ತ ಬಂದಿರುತ್ತದೆ. ಸಂವಿಧಾನದ ನಿರ್ದೇಶನದಂತೆ ದೇಶವನ್ನು ಮುನ್ನಡೆಸಲು ಚುನಾವಣೆಗಳು ನಡೆದು ರಾಷ್ಟ್ರ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಸಂವಿಧಾನವು  ದೇಶದ ಪ್ರಜೆಗಳಿಗೆ ನಾಗರಿಕತ್ವ ಪ್ರಜಾಪ್ರಭುತ್ವ ದೀಕ್ಷೆಯನ್ನು ನೀಡಿದೆ. ಸರ್ವರಿಗೂ ಸಮಾನ ಪ್ರಗತಿ, ಸಮಾನ ರಕ್ಷಣೆ ನೀಡಿದೆ. ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು, ಸರ್ಕಾರ ಯಾವುದೇ ಧರ್ಮದ ಜೊತೆಗೆ ಗುರುತಿಸಿಕೊಳ್ಳಬಾರದು, ಯಾವುದೇ ಧರ್ಮವನ್ನು ಪೋಷಿಸಬಾರದು, ಯಾವುದೇ ಧರ್ಮದ ಬಗ್ಗೆ ತಾರತಮ್ಯ ಮಾಡಬಾರದು. ಸರ್ಕಾರದ ನೀತಿಗಳು ಯಾವುದೇ ಧರ್ಮ ಪ್ರೇರಿತವಾಗಿರಬಾರದು ಎಂಬುದು ಸಂವಿಧಾನ ಹೇಳಿಕೊಟ್ಟ ಪಾಠವಾಗಿದೆ.


*ಮತದಾನ ಹಾಗೂ ಚುನಾವಣೆಯ  ಹಿರಿಮೆ - ಗರಿಮೆಗಳ ಬಗ್ಗೆ ಡಾ. ಬಿ. ಆರ್. ಅಂಬೇಡ್ಕರ್ ರವರು ನುಡಿದ ಆದರ್ಶ ದರ್ಶನ*


*"ಕೋಟಿಗಳ ಒಡೆಯರಿಗೂ ಒಂದೇ ಮತ ಹಾಕುವ ಹಕ್ಕು ; ಬಡವರಿಗೂ ಒಂದೇ ಮತ ಹಾಕುವ ಹಕ್ಕು, ನಮ್ಮ ಸಂವಿಧಾನದಲ್ಲಿ ನೀಡಲಾಗಿದೆ"* ಎಂದು ಹೇಳಿದ ವಿಶ್ವರತ್ನ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ  ಅವರ ಮಾತು ಇಂದಿಗೂ ದೇಶದ ಎಲ್ಲಾ ಚುನಾವಣೆಗಳಲ್ಲಿ ಅನುಸರಿಸಲಾಗುತ್ತಿದೆ ಎಂಬುದು ಸತ್ಯ & ಸೂಕ್ತ ಸಂಗತಿ. ರಾಜಕೀಯ ಅರಾಜಕತೆಗೆ ಆಸ್ಪದ ಕೊಡದೆ ಚುನಾವಣೆಗಳಲ್ಲಿ ಜಾಣ್ಮೆಯಿಂದ ನಮ್ಮಲ್ಲಿರುವ ಒಂದೇ ಒಂದು ಅಮೂಲ್ಯ ಮತ ಚಲಾಯಿಸೋಣ. ನೆಮ್ಮದಿಯಿಂದ ಬಾಳೋಣ.


*"ಮತದಾನವೆಂಬುದು ಮನೆಯ ಮಗಳಿದ್ದಂತೆ, ಅದನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ"* ಎಂದು ಆ ಕಾಲದಲ್ಲೇ ಹೇಳಿದ *ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ* ಅವರ ಮಾತು ಪ್ರಸ್ತುತ ದೇಶದಲ್ಲಿ ಲೋಕ ಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲಿ ಎಷ್ಟೊಂದು ಅರ್ಥಪೂರ್ಣ, ಸಕಾಲಿಕವಾಗಿದೆಯಲ್ಲವೇ? ಇಂಥಹ ವಿಚಾರಗಳಿಂದ ಭಾರತದ ಹಣೆಬರಹವನ್ನೇ ಬದಲಾಯಿಸಿದ* ಸಂವಿಧಾನಶಿಲ್ಪಿ, ವಿಶ್ವರತ್ನ ಡಾ. ಬಿ. ಆರ್. ಅಂಬೇಡ್ಕರ ನುಡಿಗಳನ್ನು ಧ್ಯಾನಿಸುತ್ತಾ, ದಕ್ಷಿಣ ಕರ್ನಾಟಕದಲ್ಲಿ ಎಪ್ರಿಲ್ ೨೬ ರಂದು ಮತದಾನ ಮಾಡಿದಾಯ್ತು. ಈಗ ಎರಡನೇ ಹಂತವಾಗಿ ಉತ್ತರ ಕರ್ನಾಟಕದಲ್ಲಿ ಮೇ ೦೭ ಲೋಕಸಭೆ ಚುನಾವಣೆ ಬಂದಿರುವಾಗ ನಾವೆಲ್ಲರೂ ಜಾಗರೂಕತೆಯಿಂದ, ಮತಿವಂತಿಕೆಯಿಂದ ಮತ ಚಲಾಯಿಸಿ ಸಕಲ ಜನಾಂಗದ ಲೇಸನು ಬಯಸುವ ಜನನಾಯಕನನ್ನು ಆರಿಸೋಣ. ಮತದಾನವು ಮಾರಾಟವಾಗಿ, ಜೀವನ ಗುಲಾಮಗಿರಿಗೆ ಬೀಳದಂತೆ ಎಚ್ಚರವಹಿಸೋಣ.


*"ಯಾವತ್ತು ಭಾರತದ ಪ್ರಜೆಗಳಿಗೆ ಮತದಾನದ ಮಹತ್ವ ತಿಳಿಯುತ್ತದೆಯೋ ಆವತ್ತು (ಅಂದು) ಭ್ರಷ್ಟ ರಾಜಕಾರಣಿಗಳು ಬಿಕಾರಿಗಳಾಗುತ್ತಾರೆ"* ಎಂದು ಹೇಳಿದ *ವಿಶ್ವರತ್ನ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ* ಅವರ ಮಾತು ಈಗ ನಮ್ಮ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಘೊಷಣೆಯಾಗಿರುವ ಸಂದರ್ಭದಲ್ಲಿ ಎಷ್ಟೋಂದು ಸೂಕ್ತವಾಗಿದೆಯಲ್ಲವೇ? ಇಂಥಹ ಆರೋಗ್ಯವಂತ ಸಮ - ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಅವರು ಹೇಳಿದ ಹಲವಾರು ವಿಚಾರಗಳನ್ನಾಧರಿಸಿದ ನಾವು ನೀಡುವ ಮತ ದಾನವಾಗಲಿ, ತುಂಡು - ಗುಂಡಿನ ಅಮಲ್ಲಿಲಿ ಅಯೋಗ್ಯರಿಗೆ  ಮತಚಲಾಯಿಸಿ ಮತ ಗಲಭೆಗೆ ಇಂಬುಕೊಡದಿರೋಣ. ಯಾರ ಒತ್ತಾಯಕ್ಕೂ ಮಣಿಯದೆ, ಆಸೆ ಆಮಿಷಗಳಿಗೆ ಬಲಿಯಾಗದೆ. ನಾಡಿನ ಸಮಗ್ರ ಅಭಿವೃದ್ಧಿ ಮಾಡುವ ಪ್ರತಿನಿಧಿಯನ್ನು ಆಯ್ಕೆಮಾಡೋಣ.


*"ದೇಶವನ್ನಾಳುವ ಪ್ರಭುಗಳು ಇನ್ನು ಮುಂದೆ ದೇವತೆಗಳ ಹೊಟ್ಟೆಯಿಂದ ಹುಟ್ಟುವುದಿಲ್ಲ. ದೇವತೆ ಒಂದು ಕಲ್ಪಕತೆ. ಅವರು ಮತದಾರರು ಹಾಕುವ ಮತದ ಪೆಟ್ಟಿಗೆಯಿಂದ ಹುಟ್ಟುತ್ತಾರೆ"* ಎಂದು ಸಂವಿಧಾನ ಜಾರಿಯಾದಾಗ ಹೇಳಿದ *ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ್* ಅವರ ಮಾತುಗಳು ಈಗ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾದ ಸಂದರ್ಭದಲ್ಲಿ ಎಷ್ಟೊಂದು ಸಾರ್ವಕಾಲಿಕ ಸತ್ಯವಾಗಿವೆ ಎಂಬುದನ್ನು ಗಮನಿಸಿದರೆ ಅವರು *ಭಾರತದ ಭಾಗ್ಯ ವಿಧಾತ* ಆಗಿದ್ದು ಆಯಾ ಸಂದರ್ಭಗಳಲ್ಲಿ ಸಾಭೀತು ಆಗುತ್ತಲೇ ಇದೆ. ಇಂಥಹ ಹಲವಾರು ಸಂಗತಿಗಳು, ಚಿಂತನೆಗಳ ವಿಶ್ವಜ್ಞಾನಿ ಅಂಬೇಡ್ಕರ್ ಅವರ ನುಡಿ ಅಮೃತ ಸವಿಯುತ, ನೆನಪಿಸಿಕೊಳ್ಳುವುದರೊಂದಿಗೆ ಪ್ರಬುದ್ಧರಾಗೋಣ*


*ಸಮ ಸಮಾಜದ ಹೋರಾಟಗಾರ ಡಾ. ಕುವಲಯ ಶರ್ಮಾರವರ ಪ್ರಜಾಸತ್ತೆಗೆ ನೀಡಿದ ಮತದಾನ ಜಾಗೃತಿ ಸಂದೇಶ*


ಮಹಾ ದುರಂತವೆಂದರೆ ಕಳೆದ ಏಳು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಭಾರತೀಯ ಪ್ರಜೆಗಳಿಗೆ ಧರ್ಮ, ಪ್ರಜಾಸತ್ತೆ, ಚುನಾವಣೆಗಳು ಹಾಗೂ ಭಾರತೀಯ ಸಂವಿಧಾನ ಈ ನಾಲ್ಕು  ನಾಡುನ್ನತಿ ಹಾಗೂ ಜೀವರಕ್ಷಕಗಳನ್ನು ಆಳುವ ವರ್ಗಗಳು ಅಪೀಮುಗಳಾಗಿ ತಿನ್ನಿಸಿ, ಭಾರತದ ಕೋಟ್ಯಾಂತರ ಪ್ರಜೆಗಳನ್ನು ನಿಷೆಯಲ್ಲಿ ಇರಿಸಿ, 'ಭಾರತ ಸಂಸದೀಯ ಪ್ರಜಾಸತ್ತೆ' ಎಂಬ ಮುಖವಾಡವನ್ನು ಧರಿಸಿ, ದೇಶದ ಕೋಟ್ಯಾಧಿಪತಿಗಳು, ಅಪರಾಧಿ ಆರೋಪ ಹೊತ್ತವರು ವಂಶಪಾರಂಪರದ (ಕುಟುಂಬ ರಾಜಕಾರಣ) ಆಳುವ ವರ್ಗಗಳು ದೇಶವನ್ನು ನಿರಾತಂಕವಾಗಿ ಆಳುತ್ತಾ ಭಾರತದ ಶ್ರೀಸಾಮಾನ್ಯ ಪ್ರಜೆಗಳನ್ನು ನರಕಾಯತನೇ ಪಡುವಂತೆ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಅರಿಯಬೇಕಾಗಿದೆ. ಈ ನಾಲ್ಕು ಅಪೀಮುಗಳ ಅಮಲಿನಿಂದ ನೊಂದು - ಬೆಂದ ಪ್ರಜಾಸ್ವಾಮ್ಯವನ್ನು ಜಾಗೃತಗೊಳಿಸಿ, ಪ್ರಜ್ಞಾವಂತರಾಗಿಸಿ, "ಪ್ರಜಾಪ್ರಭುತ್ವ"ದ ಮುಖವಾಡನ್ನು ಧರಿಸಿ, ನಿರಾತಂಕವಾಗಿ ಆಳುತ್ತಿರುವ ಶೋಷಕ ಆಳುವ ವರ್ಗಗಳನ್ನು, ಐಕ್ಯ (ಮತದಾನ) ಹೋರಾಟಗಳ ಮೂಲಕ ಪರಾಭವಗೊಳಿಸಿ, ಶ್ರಮಜೀವಿ ಕ್ರಾಂತಿಯನ್ನು ಯಶಸ್ವಿಗೊಳಿಸುವ ಗುರುತರ ಜವಾಬ್ದಾರಿಯನ್ನು ರಾಷ್ಟ್ರದ ದುಡಿಯುವ ಶೋಷಿತ ವರ್ಗ ಅರಿಯಬೇಕಿದೆ. ಇಲ್ಲಿ ಗಮನಿಸಬೇಕಾದ ಅತ್ಯಂತ ಮಹತ್ವದ ಅಂಶವೆಂದರೆ ಮೇಲೆ ವಿವರಿಸಿದ ನಾಲ್ಕು ಅಪೀಮುಗಳನ್ನು ಕ್ಷಣ - ಕ್ಷಣಕ್ಕೂ ನುಂಗುತ್ತಾ ನಿರಂತರ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಎಲ್ಲಾ ಶ್ರಮಜೀವಿಗಳು, ಪ್ರಜ್ಞಾಪೂರ್ವಕವಾಗಿ ಯೋಚಿಸಿ ಯೋಜಿಸಿ ಮತ ಚಲಾವಣೆ ಮಾಡಬೇಕು. ಭಾರತೀಯ ಸಂವಿಧಾನದಲ್ಲಿ ಎಲ್ಲಾ ಧ್ಯೇಯೋದ್ದೇಶಗಳು ಪೂರ್ವ - ಪೀಠಿಕೆಯಲ್ಲಿಯ ನವ ಉದ್ದೇಶಗಳು ಹಾಗೂ ತತ್ವ ಸೂತ್ರಗಳು, ಮೂಲಭೂತ ಹಕ್ಕುಗಳು - ಕರ್ತವ್ಯಗಳು ಎಲ್ಲವೂ ಭಾರತೀಯ ಸಂವಿಧಾನದಲ್ಲಿ ಅಂತರ್ಗತವಾಗಿರುವ ಕೇವಲ ಘೋಷಣೆಗಳಾಗಿದ್ದು, 7 ದಶಕಗಳ ಸಂವಿಧಾನದ ಆಳ್ವಿಕೆಯಲ್ಲಿ ಅವೆಲ್ಲವೂ ಕೇವಲ ಘೋಷಣೆಗಳಾಗಿಯೇ ಉಳಿದಿವೆ ಎನ್ನುವುದು ಅತ್ಯಂತ ವಿಷಾದದ ಸಂಗತಿ ಆಗಿದೆ.


                           ಆ ಮತ, ಈ ಮತ ಹತ್ತು ಹಲವಾರು ಮತದ ಗುಂಗಿನಲ್ಲಿ ದಾರಿ ತಪ್ಪದೆ, ಸರ್ವ ಮತಿಯರನ್ನು ಸರಿದಾರಿಯಲ್ಲಿ ನಡೆಸುವ ಸರ್ವ ಮತ ಸಾರಮರಸ್ಯದ ಸಾರಥಿಗೆ ಒಮ್ಮನದಿ ಮತ ಹಾಕೋಣ, ಸಾಮರಸ್ಯದ ನಾಡುದದಕ್ಕೆ ನಾಂದಿ ಹಾಡೋಣ, ಸಂಸದೀಯ ರಾಜಕೀಯ ಸಮಾನತೆಯ ತಳಪಾಯದ ಮೇಲೆ ಸರ್ವ ಕುಲ ಮತ ಜಾತಿ ಬಾಂಧವರು ಆರ್ಥಿಕ ಮತ್ತು ಸಮಾಜಿಕ ಸಮಾನತೆಯ ಮಹಲು ಕಟ್ಟಿಕೊಡಳ್ಳಲು ಈ ಲೋಕಸಭಾ ಮಹಾ ಸಮರದಲ್ಲಿ ಮತಿವಂತಿಕೆಯಿಂದ ಮತ ಚಲಾಯಿಸೋಣ, ಸರ್ವ ಭಾಷಾ ಜನಾಂಗದ ಸಕಾರಾತ್ಮಕ ರೂಡಿ, ಸಂಪ್ರದಾಯ, ಬಹುಜನ ಸಂಸ್ಕೃತಿ, ವೈಚಾರಿಕ ವ ವೈಜ್ಞಾನಿಕ ಆಚಾರಣೆ ಹಾಗೂ ವ್ಯಕ್ತಿ ಗೌರವ, ವಿಚಾರ, ಅಭಿವ್ಯಕ್ತಿಗೆ ಮನ್ನಣೆ ನೀಡುವ ಪ್ರಜಾ ನಾಯಕ, ಜನನಾಯಕ, ರಾಷ್ಟ್ರಪ್ರೇಮಿ ಸಾರಥಿಗಳನ್ನು ಸಹಮತದಿಂದ ಆಯ್ಕೆಗೊಳಿಸೋಣ. ಈಗಾಗಲೇ ಭಾರತ ದೇಶದ ಅನೇಕ ರಾಜ್ಯಗಳಲ್ಲಿ ಲೋಕ ಸಭಾ ಚುನಾವಣೆಗಳು ಯಶಕಂಡಿವೆ. ಮೊದಲನೆ ಹಂತವಾಗಿ ಎಪ್ರಿಲ್ ೨೬ರಂದು ದಕ್ಷಿಣ ಕರ್ನಾಟಕದಲ್ಲಿ ಚುನಾವಣಾ ಹಬ್ಬ ಯಶ ಕಂಡಿದ್ದು, ಬರುವ ೦7 ಮೇ 2೦24ರಂದು ನಡೆಯುವ ಉತ್ತರ ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ಬಹು ವಿವೇಕದಿಂದ ಎಚ್ಚೆತ್ತ ಮನದಿಂದ ಓಟು ಹಾಕಿ ಭ್ರಷ್ಟಾಚಾರ ರಹಿತ, ದಬ್ಬಾಳಿಕೆ ರಹಿತ,ಕೋಮು ಗಲಭೆ ಇಲ್ಲದ, ಮತಾಂಧತೆ ಇಲ್ಲದ, ಸ್ಮೇಹ ಸಹಬಾಳ್ವೆಯ ಜನಸಾಮಾನ್ಯರ ಬದುಕಿಗೆ ಆಸರೆಯಾಗುವ ನಮ್ಮ ಪ್ರತಿನಿಧಿ ಎಂದರೆ ಪ್ರಜಾಪ್ರಭುತ್ವ ಪ್ರಜಾ ಪ್ರತಿನಿಧಿಗಳಲ್ಲನ್ನು ಗೆಲ್ಲುಸೋಣ. ಹಣ, ಹೆಂಡದ ಅಲ್ಪಾಸೆಗೆ ಬಲಿಯಾಗಿ ನಮ್ಮ ಅಮೂಲ್ಯ ಮತವನ್ನು ಮಾರಿ ಮತಿಗೇಡಿಗಳಾಗದಿರೋಣ. ಶಾಸ್ವತ ನೆಮ್ಮದಿ, ವಿದ್ಯೆ (ಶಿಕ್ಷಣ), ಆರೋಗ್ಯ ಹಾಗೂ ಸರ್ವೂದಯ, ಸರ್ವಜನ ಮತ್ತು ರಾಷ್ಟ್ರ ಕಲ್ಯಾಣಕ್ಕೆ ಉಚಿತ (ಶ್ರೇಷ್ಟ) ದೀವಿಗೆ ಹಚ್ಚುವ ಸಜ್ಜನ, ನಾಡಪ್ರೇಮಿ ಪ್ರಜಾಪ್ರಭುಗಳನ್ನು ಆಯ್ದು ತರೋಣ. ದಾಸ್ಯ ವಿಮೋಚಕ, ಪ್ರಜಾಪ್ರಭುತ್ವ ಪ್ರತಿಪಾದಕ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಆದಿ ಸಮಾಜವಾದಿ, ಸಮಾತಾವಾದಿ ಮಹನೀಯರ ಕನಸುಗಳಾದ ರಾಜಕೀಯ ಪಕ್ಷ ಮತ್ತು ಮಹಾನ್ ವ್ಯಕ್ತಿಗಳಿಗಿಂತ ದೇಶ ದೊಡ್ಡದು. ದೇಶದ ಸಮಗ್ರ ಸ್ವಾತಂತ್ರ್ಯ ರಕ್ಷಣೆಯನ್ನು ಮಾಡುವುದಕ್ಕಾಗಿ ಸೂಕ್ತವ್ಯಕ್ತಿಗೆ ಮತದಾನ ಮಾಡೋಣ, ಮತ ಮೆನೆಯ ಮಗಳಿದಂತೆ, ಅದನ್ನು ಮಾರಾಟ ಮಾಡದೆ ಯೋಗ್ಯ ವ್ಯಕ್ತಿಗೆ ನೀಡಲು ದೃಢ ಸಂಕಲ್ಪ ಮಾಡೋಣ,  ನನಸು ಮಾಡೋಣ. 


 *ಜೈ ಭಾರತ  ಸಂವಿಧಾನ,* *ಜೈ ಪ್ರಜಾಪ್ರಭುತ್ವ,* *ಜೈ ಮತದಾನ,* *ಜೈ ಸರ್ವಜನ ಕಲ್ಯಾಣ,* *ಜೈ ರಾಷ್ಟ್ರಕಲ್ಯಾಣ*,* *ಜೈ ಭೀಮ್*


*ಸುಹೇಚ ಪರಮವಾಡಿ*

ಸುಭಾಷ್ ಹೇಮಣ್ಣಾ ಚವ್ಹಾಣ, ಸಮ ಸಮಾನತೆ ಚಿಂತಕರು, ಪರಮವಾಡಿ ತಾಂಡೆ, ಯಲವಿಗಿ ಅಂಚೆ, ಸವಣೂರು ತಾ, ಹಾವೇರಿ ಜಿ, ೭೯೭೫೦ ೨೬೭೨೪

Image Description

Post a Comment

0 Comments