* ಕುಟುಂಬ,ಭ್ರಷ್ಟ, ಸರ್ವಾಧಿಕಾರ ರಾಜಕಾರಣ ತೊಲಗಿಸಲು ನನಗೊಮ್ಮೆ ಅವಕಾಶ ನೀಡಿ: ಶಂಭು ಕಲ್ಲೋಳಿಕರ*


 *ಕುಟುಂಬ,ಭ್ರಷ್ಟ, ಸರ್ವಾಧಿಕಾರ ರಾಜಕಾರಣ  ತೊಲಗಿಸಲು ನನಗೊಮ್ಮೆ ಅವಕಾಶ ನೀಡಿ: ಶಂಭು ಕಲ್ಲೋಳಿಕರ* 


ರಾಯಬಾಗ: ಪ್ರಸ್ತುತ ಈ ದೇಶದ ಪ್ರಮುಖ ರಾಷ್ಟೀಯ ಪಕ್ಷಗಳಲ್ಲಿ  ಅಂಟಿಕೊಂಡಿರುವ ಕುಟುಂಬ ಭ್ರಷ್ಟ ಸರ್ವಾಧಿಕಾರ ರಾಜಕಾರಣ ತೊಲಗಿಸಲು ತಾವು ಈ ಸಂದರ್ಭದಲ್ಲಿ ನನಗೆ ಒಮ್ಮೆ ಮತ ಭೀಕ್ಷೆ ನೀಡಿ ಆಶೀರ್ವದಿಸಬೇಕೆಂದು  ಚಿಕ್ಕೋಡಿ ಲೋಕಸಭೆಯ ಪಕ್ಷೇತರ ಅಭ್ಯರ್ಥಿ ಹಾಗೂ ನಿವೃತ್ತ ಆಯ್ . ಎ. ಎಸ್. ಅಧಿಕಾರಿ ಶಂಭು ಕಲ್ಲೋಳಕರ ನುಡಿದರು. 


ತಾಲ್ಲೂಕಿನ ಹಾರೂಗೇರಿ ಪಟ್ಟಣದಲ್ಲಿ ನಿನ್ನೆ ದಿ.3 ರಂದು ಸಂಜೆ  ಹಮ್ಮಿಕೊಂಡಿದ್ದ ಸ್ವಾಭಿಮಾನಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ನಿಮ್ಮೂರಿನ ಮನೆಯ ಮಗ ಹಾಗೂ ಸಹೋದರ. ಆಯ್ ಎ ಎಸ್ ಅಂತಹ ಉನ್ನತ ಪದವಿಗೆ ರಾಜೀನಾಮೆ ನೀಡಿ ಜನರ ಸೇವೆ ಮಾಡಲು ನಾನು ರಾಜಕೀಯ ಕ್ಷೇತ್ರಕ್ಕೆ ಸ್ವಯಂ ಪ್ರೇರಣೆಯಿಂದ ಬಂದಿದ್ದೇನೆ.ಇಲ್ಲಿಯವರೆಗೆ ನಿಮ್ಮನ್ನು ಆಳ್ವಿಕೆ ಮಾಡಿದ ರಾಜಕಾರಣಿಗಳು ನಿಮ್ಮನ್ನು ಯಾಮಾರಿಸಿ ಕ್ಷೇತ್ರದ ಏಳಿಗೆ ಬಯಸದೆ ತಮ್ಮ ಏಳಿಗೆ ಮುಖ್ಯವಾಗಿಸಿಕೊಂಡು ಸರ್ವಾಧಿಕಾರಿಯಂತೆ ನಡೆದುಕೊಂಡು ಬರುತ್ತಿರುವುದು ನಿಮಗೆ ಎಲ್ಲರಿಗೂ ಗೊತ್ತಿದೆ. ಈ ಸಂದರ್ಭದಲ್ಲಿ ನೀವು ಪೂರ್ವಗ್ರಹಪೀಡಿತರಾಗದೆ ಜನಪರ ಕಾಳಜಿ ಇರಿಸಿಕೊಂಡ ನನ್ನ ಆಟೋ ರೀಕ್ಷಾ ಗುರುತಿಗೆ ಬಟನ್ ಒತ್ತುವ ಮೂಲಕ ಒಮ್ಮನದಿಂದ ಅನುಗ್ರಹಿಸಿರಿ ಎಂದು ಜನರಲ್ಲಿ ಬೇಡಿಕೊಂಡರು. ಈ ಕ್ಷೇತ್ರದಲ್ಲಿ ಪ್ರಮುಖವಾಗಿ ರೈತರಿಗೆ ನೀರಾವರಿ ಸೌಲಭ್ಯ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ, ಯುವಕರಿಗೆ ಉದ್ಯೋಗ ಅವಕಾಶ, ಬಡವರಿಗೆ ಸೂಕ್ತ ಆರೋಗ್ಯ ಸೌಲಭ್ಯ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಹಾಗೂ ಪಾರದರ್ಶಕ ಆಡಳಿತ ನೀಡುವುದು ನನ್ನ ಪ್ರಧಾನ ಆದ್ಯತೆಯಾಗಿದೆ. ಇವೆಲ್ಲವೂ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲು ಮೇ 7 ಕ್ಕೆ ತಾವು  ಮತ ಭಿಕ್ಷೆ ನೀಡಿರಿ ಎಂದು ನೆರೆದಿದ್ದ ಸಾರ್ವಜನಿಕರಲ್ಲಿ ನಿವೇದಿಸಿಕೊಂಡರು. ಇದಕ್ಕೂ ಮೊದಲು ರಾಜು ತಳವಾರ ಚೂನಪ್ಪ ಪೂಜಾರಿ, ಡಾ. ಸಿ ಆರ್ ಗುಡಶಿ, ಬಿ ಎನ್ ಬಂಡಗರ ಹಾಗೂ ಮತ್ತಿತರ ಮುಖಂಡರು ಮಾತನಾಡಿದರು. ಹಿರಿಯ ಮುಖಂಡ ಈರಗೌಡ ಪಾಟೀಲ ರಾಜು ತಳವಾರ ಮತ್ತಿತರ ಮುಖಂಡರು ವೇದಿಕೆ ಮೇಲೆ ಹಾಜರಿದ್ದರು ಸಹಸ್ರಾರು ಜನರು ಉಪಸ್ಥಿತರಿದ್ದರು.


ವರದಿ:ಡಾ. ಜಯವೀರ ಎ. ಕೆ.

    ಖೇಮಲಾಪುರ

Image Description

Post a Comment

0 Comments