*ಹಾರೂಗೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 110 ನೆಯ ಸಂಸ್ಥಾಪನಾ ದಿನಾಚರಣೆ*
ರಾಯಬಾಗ
ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾರೂಗೇರಿಯ ಸುರಭಿ ಸಂಗೀತ ಪಾಠ ಶಾಲೆಯ ಸಭಾ ಭವನದಲ್ಲಿ ದಿನಾಂಕ 5-5-2024 ರವಿವಾರದಂದು ಸಂಜೆ 5 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 110 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದೆ.ಪ್ರಾಚಾರ್ಯ ಸಂತೋಷ ಬಸವರಾಜ ಸನದಿ ಅಧ್ಯಕ್ಷತೆ ವಹಿಸಲಿದ್ದು ಪ್ರೇಮಾಸುರ ಚಲನಚಿತ್ರದ ನಾಯಕ ನಟ ಶೀತಲರಾಜ ನಾಗನೂರ ಉದ್ಘಾಟಕರಾಗಿ ಆಗಮಿಸಲಿದ್ದಾರೆ.ಶಿಕ್ಷಕ ಜಿ.ಎಮ್.ಮಠಪತಿಯವರು 'ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು' ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.ಹಾರೂಗೇರಿ ಸರಕಾರಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ ಬಿ.ವಿ.ಪೂಜೇರಿˌಕಲಾವಿದ ಭಾಸ್ಕರ ಜಮಾದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಜಲಾಲಪೂರದ ಯುವ ಕವಯತ್ರಿ ಪಲ್ಲವಿ ಕಾಂಬಳೆ ರಚಿತ 'ನನ್ನವರ ಒಡಲುರಿ'ಕವನ ಸಂಕಲನವನ್ನು ಕನ್ನಡ ಪ್ರಾಧ್ಯಾಪಕಿ ತ್ರಿಶಲಾ ನಾಗನೂರ ಲೋಕಾರ್ಪಣೆಗೊಳಿಸಲಿದ್ದಾರೆ.ಸುರಭಿ ಮೊಕಾಶಿ ಮತ್ತು ಕಲಾಕುಸುಮಗಳಿಂದ ಸಂಗೀತ ಪರಿಮಳ ಪಸರಿಸಲಿದೆಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ ತಿಳಿಸಿದ್ದಾರೆ.ಸದರಿ ಕಾರ್ಯಕ್ರಮಕ್ಕೆ ಕನ್ನಡ ಪ್ರಿಯರುˌಸಾಹಿತ್ಯಾಸಕ್ತರುˌಕಲಾ ರಸಿಕರುˌಕನ್ನಡ ಮನಸ್ಸುಗಳು ಆಗಮಿಸಿ ಸವಿ ಹೆಚ್ಚಿಸಬೇಕೆಂದು ಸಂತೋಷ ತಮದಡ್ಡಿˌತುಕಾರಾಮ ವಂಟಗೂಡಿ ತಿಳಿಸಿದ್ದಾರೆ.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments