ಶೀರ್ಷಿಕೆ : *ಸಂಜೆ ಸುಂದರಿ*

 ಶೀರ್ಷಿಕೆ : *ಸಂಜೆ ಸುಂದರಿ*



ಸೂರ್ಯನು ಹಾಗೆ ಮಬ್ಬಾದನು 

ಓಕುಳಿ ಎರಚಿ ಕಳಚಿ ಕೊಂಡನು

ಚಂದ್ರನು ಹಾಲ್ಬೆಳಕ ಚೆಲ್ಲಿದನು 

ಸಂಜೆ ಸುಂದರಿಯ ಕಾಣಿಸಿದನು 


ಏನೋ ಮನವೆಲ್ಲಾ ಕಸಿವಿಸಿ 

ದುಃಖ ದುಮ್ಮಾನವ ಹರಿಸಿ 

ಬಯಸೋ ಕಾಮಿಯ ಒಲಿಸಿ 

ಒಪ್ಪಿಸುವಳು ತನ್ನ ಸೆರಗ ಸರಿಸಿ 


ಅವನೋ ಇವಳಿಗಾಗಿಯೇ ಕಾದಿದ್ದನು 

ಮುಡಿದ ಮಲ್ಲಿಗೆ ದಿಂಡ ಘಮ ಮೂಸಿದ್ದನು 

ತನ್ನ ತಿಕ್ಕಲು ವಾಂಚೆಯಿಂದ ರಮಿಸಿದನು 

ಎಂತದೋ ಆಸೆಯಿಂದ ಕಾಮಿಸಿದನು 


ಇವಳಿಗೆ ಸೌಂದರ್ಯ ಬೇಕಿರಲಿಲ್ಲ 

ಗಂಡನು ಅನುಮಾನಿಸಿ ಹಳ್ಳಕೆ ದೂಡಿದನಲ್ಲ 

ವೇಶ್ಯೆ ಎನ್ನುವ ಪಟ್ಟವನ್ನು ಕಟ್ಟಿದನಲ್ಲ 

ಮನ ಎಲ್ಲೋ ಮೌನ ವಾಗಿ ಬಿಕ್ಕಿದೆಯಲ್ಲ.



✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments