*ತಬಲಾ ವಾದಕಿˌಗಾಯಕಿ ನಿಶಾ ಶಿಂಗೆ ಬಹುಮುಖ ಪ್ರತಿಭೆಯ ಕಲಾಚಂದ್ರಿಕೆ*
*ನಿರೂಪಕಿˌಗಾಯಕಿˌವಾದಕಿˌಸಾಧಕಿ ನಿಶಾ ಶಿಂಗೆ ಈ ನೆಲದ ಕಲಾಚಂದ್ರಿಕೆ.*
ಪ್ರತಿಭಾವಂತರು ಹೆರಳವಾಗಿ ಕಾಣಸಿಗುತ್ತಾರೆ.ಒಂದೊಂದು ಕಲಾ ಪ್ರಕಾರˌ ಜ್ಞಾನದಲ್ಲಿ ಒಬ್ಬೊಬ್ಬರಿಗೆ ಪ್ರಾವಿಣ್ಯತೆ ದಕ್ಕಿರುತ್ತದೆ.ಆದರೆ ಬಹುಮುಖ ಪ್ರತಿಭಾವಂತರು ಕಾಣಸಿಗುವುದು ವಿರಳ.ಎಲ್ಲ ರಂಗಗಳ ಜ್ಞಾನ ಸಂಪತ್ತು ವಶಪಡಿಸಿಕೊಳ್ಳಲು ತಪಸ್ಸು ಬೇಕು.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯ 'ಕಲಾಗಣಿ' ನಿಶಾ ಶಶಿಧರ ಶಿಂಗೆ ಜ್ಞಾನಮಣಿ ಪೂಜಿಸುವ ಅಪರೂಪದ ತಪಸ್ವಿನಿ.
ರಾಯಬಾಗ ತಾಲೂಕಿನ ಹಾರೂಗೇರಿಯ ಶಶಿಧರ ವಸಂತ ಶಿಂಗೆ ಮತ್ತು ನಿರ್ಮಲಾ ಶಶಿಧರ ಶಿಂಗೆಯವರ ಮುದ್ದಿನ ಮಗಳು ನಿಶಾ ಶಿಂಗೆ ಈ ನೆಲದ ಕಲಾಜ್ಞಾನದ ಮುಗುಳು. ಹಾರೂಗೇರಿಯಲ್ಲಿ 26-6-2009 ರಂದು ಜನಿಸಿದ ಇವರು ಹಾರೂಗೇರಿಯ ಶ್ರೀ ಭಗವಾನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ತಬಲಾ ˌಗಿಟಾರ ನುಡಿಸುವುದುˌಶಾಸ್ರ್ತೀಯ ಸಂಗೀತ ಹಾಡುವುದುˌಚಿತ್ರಕಲೆ ಬಿಡಿಸುವುದುˌನಿಬಂಧಗಳನ್ನು ರಚಿಸುವುದುˌಪುಸ್ತಕಗಳನ್ನು ಓದುವುದುˌಕಾರ್ಯಕ್ರಮಗಳ ಸಂಘಟನೆˌನಿರೂಪಣೆಯನ್ನು ಆಕರ್ಷಕವಾಗಿ ಮಾಡುವುದು ˌಆಂಗ್ಲ ಗೀತೆಗಳನ್ನು ಹಾಡುವುದು ನಿಶಾ ಶಿಂಗೆಯವರ ಸಮಯದ ಸಂಗಾತಿಗಳಾಗಿವೆ.ಇವರ ಹವ್ಯಾಸಗಳು ಇವರ ವ್ಯಕ್ತಿತ್ವವನ್ನು ರೂಪಿಸಿವೆ.
ಶಾಲಾ ಶಿಕ್ಷಣ ಇಲಾಖೆ ಆಯೋಜಿಸುವ ಪ್ರತಿಭಾ ಕಾರಂಜಿಯ ಭಾಷಣˌಆಶುಭಾಷಣˌಲಘು ಸಂಗೀತˌಚಿತ್ರಕಲೆ ಸ್ಪರ್ಧೆಗಳಲ್ಲಿ ತಾಲೂಕು ಮಟ್ಟದಲ್ಲಿ ಹಲವಾರು ಬಾರಿ ವಿಜೇತಳಾಗಿ ಜಿಲ್ಲಾ ಮಟ್ಟದಲ್ಲಿ ಬಹುಮಾನಗಳನ್ನು ಪಡೆದಿರುವ ನಿಶಾ ಶಿಂಗೆಯವರಿಗೆ ಉಜ್ವಲ ಭವಿಷ್ಯವಿದೆ.
ಸುಪ್ರಸಿದ್ಧ ವೈದ್ಯರಾಗಿ ಬಡ ರೋಗಿಗಳ ಸೇವೆ ಮಾಡಬೇಕೆಂಬ ಗುರಿ ಇಟ್ಟುಕೊಂಡಿರುವ ನಿಶಾ ಐ.ಎ.ಎಸ್ ಪರೀಕ್ಷೆ ಎದುರುಗೊಂಡು ಜಯಶಾಲಿಯಾಗಬೇಕೆಂಬ ಹೊಂಗನಸು ಹೊತ್ತುಕೊಂಡಿದ್ದಾರೆ.
ನಿಶಾ ಶಿಂಗೆಯವರು ಬಿಡಿಸಿದ ಚಿತ್ರಗಳು ಚಿತ್ತಾಕರ್ಷಕ.
ಕಾರ್ಯಕ್ರಮಗಳಲ್ಲಿ ನಡೆಸಿಕೊಡುವ ನಿರೂಪಣೆ ಅತ್ಯಾಕರ್ಷಕ.ತಬಲಾ ಮೇಲೆ ನಿಶಾ ಕೈಯಿಟ್ಟು ಬೆರಳಾಡಿಸಿದರೆ ದಿವ್ಯ ಸುನಾದ ಸುಗಂಧ ಸೂಸುವುದು.ಕೇಳುಗರು ತಬಲಾ ನಾದದ ಗುಂಗಿನಲ್ಲಿ ತೇಲಾಡುವರು.ಮಧುರ ಗಾಯಕಿˌ ಕಲಾ ಸಾಧಕಿˌತಬಲಾ ವಾದಕಿˌರಸವಶ ನಿರೂಪಕಿˌಬಹುಮುಖ ಪ್ರತಿಭಾ ಸಂಪನ್ನ ಬಾಲಕಿ ನಿಶಾ ಶಿಂಗೆ ಈ ನೆಲ ಬೆಳಗುವ ಕಲಾಚಂದ್ರಿಕೆ.ಕಲಾಶಶಿಯನ್ನು ನಿರ್ಮಲ ಚಿತ್ತದಲ್ಲಿ ಪ್ರತಿಷ್ಠಾಪಿಸಿಕೊಂಡಿರುವ ನಿಶಾಳಿಗೆ ಸದಾ ಜಯವಾಗಲಿ.ಶುಭ ಬೆಂಬತ್ತಲಿ.
ನಿಶಾ ಶಿಂಗೆಯವರನ್ನು ಪ್ರೊತ್ಸಾಹಿಸಿ ಹರಸಿ ಹಾರೈಸುವವರು ಈ (8722347445)ದೂರವಾಣಿಗೆ ಕರೆ ಮಾಡಬಹುದಾಗಿದೆ.
ಲೇಖಕರು:
ಶ್ರೀ ರವೀಂದ್ರ ಪಾಟೀಲ
ತಾಲೂಕಾಧ್ಯಕ್ಷರುˌಕನ್ನಡ ಸಾಹಿತ್ಯ ಪರಿಷತ್ತುˌರಾಯಬಾಗ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments