🌹 ಮನಕದ್ದವಳು 🌹
ಒಲವೇ ಎನ್ನೊಲವೇ
ನೀನೇ ನನ್ನ ಚೆಲುವೆ
ಮಲ್ಲಿಗೆ ಘಮಗುಟ್ತೈತೆ
ಉಸಿರು ಪಿಸುಗುಡುತೈತೆ
ಒಲವೇ ಕಡಲಾಗಿ ಬಂತೆ
ಅಲೆಯಲೆಯು ನಿನ್ನರಸಿ ಬಂತೆ
ಪ್ರೀತಿ ಮಳೆಯಾಗಿ ಬಂತೆ
ಚೆಲುವೆ ಚಿತ್ತಾರವಾಯ್ತೆ
ಯಾಕ್ ಚಿನ್ನಾ ನೀ ನೋಡ್ತಿ ಹಿಂಗಾ
ಕಾಡ್ತಿರುವೆ ಬಿಟ್ಟು ಬಿಡದ್ಹಾಂಗ
ಪ್ರೀತಿ ತುಳುಕತೈತಿ ನೋಟದಾಗ
ಅದೆಂತ ಮೋಡಿ ಬಟ್ಟಲುಗಣ್ಣಾಗ
ನೀ ಹೇಳು ಬಿಟ್ಟಿರಲಿ ಹ್ಯಾoಗ
ನೀ ತವರಿಗೆ ಹೋದಾಗ
ದುಂಭಿಯಾಗಿ ಬೆನ್ನಟ್ಟಿ ಬರಲೇ
ಘಮವಾಗಿ ನಿನ್ನೊಡನಿರಲೇ
ಮುಗಿಲ ಮಾಲೆ ಹೊದ್ದಿಕೊಂಡು
ಬೆನ್ನ ತುಂಬಾ ಹರಡಿಕೊಂಡು
ನೋಡುತೀ ಯಾಕ ನೀ ನಿಂತುಕೊಂಡು
ಮರುಳಾದೆ ನಾ ನಿನ್ನ ಕಂಡು
ನಾಚಿಸುವ ತಾವರೆ ವದನ
ಮನಸೋತ ನಿನಗೆ ಮದನ
ಕರೆಯುತಿರೆ ನಿನ್ನೀ ನಯನ
ಆದೆ ನಾ ನಿನ್ನ ಮೋಹನ
ಮುಂಗುರುಳ ನಾಟ್ಯವ ನೋಡಿ
ಮುಗುಳನಗೆ ಬಿಡದಲೆ ಕಾಡಿ
ಬಂದಿರುವೆ ನಾ ಓಡೋಡಿ
ಮಾಡಿರುವೆ ನೀನು ಮೋಡಿ
ಕೆಂದಾವರೆ ಮೊಗವನು ಕಂಡ
ಆ ಚಂದಿರ ನಾಚಿಕೊಂಡ
ಮೋಡದಲ್ಲಿ ಮುಚ್ಚಿಟ್ಟುಕೊಂಡ
ಹೇಳೇ ಅವಗೆ ನಾ ನಿನ್ನ ಗಂಡ
ವರ್ಣನೆ ನಿಲುಕದವಳು
ಪದಗಳಿಗೆ ಸಿಲುಕದವಳು
ಚೆಲುವಿನ ಖನಿಯೇ ಇವಳು
ಇವಳಲ್ಲವೇ ಮನ ಕದ್ದವಳು
✍️ ನಾಡಿಗ್ ವಿಜಯಲಕ್ಷ್ಮಿ ಮಂಜುನಾಥ್ ಕಡೂರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments