* ಶೀರ್ಷಿಕೆ :- ಕುಲಾಯಿ*

 *ಶೀರ್ಷಿಕೆ :- ಕುಲಾಯಿ* 



ಅಜ್ಜಿ ಹೊಲಿದಾಳ

ಬಣ್ಣದ ಕುಲಾಯಿ

ಬೆಚ್ಚಗೀರಲೆಂದು

ಬೆಳ್ಳಿ ಬೊಂಬೆಗೆ....!!


ಬಣ್ಣದ ಕುಲಾಯಿ

ತೊಟ್ಟು ನಗುತ್ತಾಳೆ

ತಿಂಗಳ ಬೆಳಕಿನ

ಅಂಗಳದೊಳಗೆ....!!


ಚಂದಿರ ನಾಚಿ ಮೊಡದೊಳಗ

ಮರೆಯಾಗ್ಯಾನೋ

ಮೊಮ್ಮಗಳ ಬೆಳಕಲ್ಲಿ

ಮಂದಿಮಕ್ಕಳ ಖುಷಿಯ

ಪಟ್ಟಾರೋ.....!!


ಕುಲಾಯ ಗ್ವಾoಡ್ಯ

ಹಿಡಿದು ನಗುತ್ತಾಳೆ

ಮಿಂಚು ಬಳ್ಳಿಯಂಗ

ಮಿರಮಿರಾ ಮಿಂಚುತ್ತಾಳೆ....!!


ಮನೆ ಮಂದಿಗೆಲ್ಲಾ

ಹಬ್ಬವ ತಂದಾಳೋ

ಹೋಳಿಗಿ ಹುಗ್ಗಿ ಮಾಡಿ

ಊರಿಗೆಲ್ಲಾ ಬಡಿಸ್ಯಾರೊ...!!


 *ಮಲ್ಲು ಎಚ್ ಹುಲಿಮನಿ.....✍️* 

ಸಾ : - ಬೆನಕನಹಳ್ಳಿ

ತಾ : - ಸುರಪುರ

ಜಿಲ್ಲಾ : - ಯಾದಗಿರಿ

 *ಮೋ ನಂ : - 9740120685*

Image Description

Post a Comment

0 Comments