* ಬಾಗೆನಾಡಿನ ಬಸವ ಭಾವದˌಬಹುಮುಖ ಜ್ಞಾನದೀಪ್ತಿ ಬಸವರಾಜ ಹಳಕಲ್ಲ.*

 *ಬಾಗೆನಾಡಿನ ಬಸವ ಭಾವದˌಬಹುಮುಖ ಜ್ಞಾನದೀಪ್ತಿ ಬಸವರಾಜ ಹಳಕಲ್ಲ.* 




     ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಿದ್ಧಾಪೂರ ಒಂದು ಪುಟ್ಟ ಗ್ರಾಮ.ಕ್ಷೇತ್ರದ ಅಧಿ ದೇವತೆ ಸದ್ಗುರು ಸಮಥ೯ ಕಾಡಸಿದ್ದೇಶ್ವರ ಮಹಾರಾಜರು 

ತಪಸ್ಸುಗೈದ ಪುಣ್ಯಸ್ಥಳ.

ಉತ್ತರವಾಹಿನಿಯಾಗಿ ಹರಿವ ಕೃಷ್ಣ ನದಿಯು ಊರಿನ ಜೀವ ಸೆಲೆಯಾಗಿದೆ.ಈ ಪವಿತ್ರ ಗ್ರಾಮದಲ್ಲಿ ಬಸವ ಭಾವದ ˌಬಹುಮುಖ ಜ್ಞಾನದೀಪ್ತಿ ಬಸವರಾಜ ಶಂಕರ ಹಳಕಲ್ಲರವರು ಜನಿಸಿದರು.ಪ್ರಾಥಮಿಕ ಶಿಕ್ಷಣವನ್ನು ಸಿದ್ದಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದರು. ಪ್ರೌಢ ಶಿಕ್ಷಣವನ್ನು ಹಾರೂಗೇರಿಯ ಎಚ್.ವಿ.ಎಚ್ ಪ್ರೌಢ ಶಾಲೆಯಲ್ಲಿ ಮುಗಿಸಿದರು.ಪದವಿ ಪೂರ್ವ ಶಿಕ್ಷಣವನ್ನು ಎಸ್.ವಿ.ಈ.ಎಸ್ ಕಾಲೇಜು ಹಾರೂಗೇರಿಯಲ್ಲಿ ಪೂರೈಸಿಕೊಂಡು ಬಿ.ಎ ಪದವಿಯನ್ನು ಪ್ರತಿಷ್ಠಿತ

ರಾಯಬಾಗದ ಆರ್.ವಿ.ಆರ್ ಕಾಲೇಜನಲ್ಲಿ ಪಡೆದುಕೊಂಡರು.

ಅನಿವಾರ್ಯ ಕಾರಣಗಳಿಂದ ಶಿಕ್ಷಣ ಮೊಟಕುಗೊಳಿಸಿದರು.

 ಪಿ.ಯು.ಸಿ ಯಲ್ಲಿ ವಿಜ್ಞಾನ ಆಯ್ಕೆ ಮಾಡಿ ಡಿ.ಎಮ್.ಎಲ್.ಟಿ ಕೋರ್ಸ್

ಮಾಡಿಕೊಂಡು ರಕ್ತ ತಪಾಸಣೆಯೊಂದಿಗೆ ಜನರ ಆರೋಗ್ಯ ಸೇವೆ ಮಾಡುತ್ತಾ ಸಾಥ೯ಕ ಭಾವನೆ ತಾಳಿದ್ದಾರೆ.ತಮ್ಮ ವೃತ್ತಿಯ ಜೊತೆ ಜೊತೆಗೆ ಕಥೆ,ಕಾವ್ಯ, ನಾಟಕಗಳ ರಚನೆ ಮಾಡುವ ಪ್ರವೃತ್ತಿ ಇವರದ್ದಾಗಿದೆ.ಹಾಡುವುದು ಬರೆಯುವುದು,ಹಾರ್ಮೋನಿಯಂ ನುಡಿಸುವುದುˌಛದ್ಮವೇಷ ಹಾಕುವುದುˌಓದುವುದುˌಸತ್ಸಂಗದಲ್ಲಿ ಸಮಯ ವಿನಿಯೋಗಿಸುವುದು ಇವರ ದಿನಚರಿಯ ಅಂಗಾಂಗಗಳಾಗಿವೆ.

ಇವರು ತಮ್ಮ ಬದುಕಿನಲ್ಲಿ 18 ನಾಟಕಗಳನ್ನು ಆಡುವುದರ ಜೊತೆಗೆ ಸ್ವತ: ಮೂರು

ನಾಟಕಗಳನ್ನು ಬರೆದು ನಿರ್ದೇಶಿಸಿ ಆಡಿಸಿದ್ದಾರೆ. ಅವುಗಳೆಂದರೆ "ಕಲಿಯುಗದ ಗಾಳಿ" ˌ"ರಕ್ತ ಕಣ್ಣೀರು"ˌ

"ಮಾದಾರ ಚೆನ್ನಯ್ಯ." ಬಸವರಾಜರವರ ಚೊಚ್ಚಲ ಕವನ ಸಂಕಲನ  "ದೀಪ ದೀಪ್ತಿ"ಯು 2014 ರ ಫೆಬ್ರುವರಿಯಲ್ಲಿ ರಾಯಬಾಗ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶರಣ ಶ್ರೀ ಐ.ಆರ್ ಮಠಪತಿ

 ಗುರುಗಳಿಂದ ಲೋಕಾಪಣೆ೯ಗೊಂಡಿತು. 

ಎರಡನೆಯ ಗದ್ಯ ಕೃತಿ"ಶ್ರೀ ಗುರು ಲೀಲಾಮೃತ" 2014 ರ ಡಿಸೆಂಬರ 2 ರಂದು  ಮುಗಳಖೋಡದ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾ ಸ್ವಾಮಿಜಿಯವರ ಅಮೃತ ಹಸ್ತ 

ದಿಂದ ಹೊಸ ಬೆಳಕು ಕಂಡಿತು.ಬಸವರಾಜ ಹಳಕಲ್ಲರವರು

ಸಿದ್ಧಾಪೂರ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ

ಅಧ್ಯಕ್ಷರಾಗಿ ಶಾಲೆಯ 

ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಶಿಕ್ಷಣ ಪ್ರೇಮಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. "ಶ್ರೀ ಗುರು ಮಾದಾರ ಚೆನ್ನಯ್ಯ ಸತ್ಸಂಗ ಸಿದ್ದಾಪುರ"ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಅದರ ಮೂಲಕ ಉತ್ತಮ ಶಿಕ್ಷಕರನ್ನು ಗುರುತಿಸುವುದು,

ಹೆಚ್ಚಿನ ಅಂಕ ಗಳಿಸಿರುವ ಮಕ್ಕಳಿಗೆ ಪ್ರೋತ್ಸಾಹ ಕೊಡುವುದು,

ಶರಣರ ತತ್ವಾದಶ೯ಗಳನ್ನು 

ಸಮಾಜಕ್ಕೆ ತಲುಪಿಸುವ ಹಂಬಲದೊಂದಿಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸತ್ಫಥದ ಹೊಂಬೆಳಕಿನ ಕಿರಣಗಳು ಸುತ್ತ ಮುತ್ತಲಿನ ಪರಿಸರದ ಭಾವಕೋಶದ ತುಂಬಾ ಹರಡಲೆಂಬ ಸದಾಶಯದೊಂದಿಗೆ ತಮ್ಮ ಮಹಾಮನೆಯನ್ನು ಗುರುಮನೆಯಾಗಿಸಿದ್ದಾರೆ.

ಉಸಿರಿನ ಒಡೆಯ 

ಶ್ರೀ ಗುರು ಷಡಕ್ಷರಿ ಸಿದ್ಧರಾಮೇಶ್ವರ ಶಿವಯೋಗಿಯು ಇವರ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಕರ ಕಮಲ ಸಂಜಾತ ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಅಪ್ಪಾಜಿಯವರ ಒಡನಾಟ ˌಆಶೀರ್ವಾದ

ಬಸವರಾಜರವರಿಗೆ ದೊರೆತದ್ದು ಇವರ ಪೂರ್ವಜನ್ಮದ ರಾಜಪುಣ್ಯದ ಸುಫಲವಾಗಿದೆ.ಸಮಾಜದಲ್ಲಿನ

 ಮೂಢನಂಬಿಕೆಗಳುˌಅಜ್ಞಾನ,ಅಂಧಕಾರ,ಜಾತೀಯತೆ,ಮೇಲು-ಕೀಳು,ಬಡವ-ಶ್ರೀ ಮಂತ ಎಂಬ ಭೇದ ಭಾವನ್ನು ತೊಡೆದು ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.ದೀನ ದಲಿತರ ಸೇವೆ ಮಾಡುವ ಮೂಲಕ ಶರಣರ ನಡೆ ನುಡಿ ಅವರ ತತ್ವಾದಶ೯ಗಳನ್ನು 

ಪ್ರಚಾರ ಮಾಡುತ್ತಾ ಮೂಕ ಪ್ರಾಣಿಗಳ ಬಲಿ ತಡೆಯುವ ಪ್ರಯತ್ನವನ್ನು  ಮಾಡುತ್ತಿದ್ದಾರೆ.ದಲಿತ ಶರಣರನ್ನು ಪರಿಚಯಿಸುವಲ್ಲಿ ಸಫಲರಾಗಿದ್ದಾರೆ.ಮಾದಾರ ಚೆನ್ನಯ್ಯ,ಮಾದಾರ ಧೂಳಯ್ಯ, ಸೂಳೆ ಸಂಕಮ್ಮ,ಉರಿಲಿಂಗ ಪೆದ್ದಿ,ಢೊಹರ ಕಕ್ಕಯ್ಯ, ಹರ ಭಕ್ತ ಹರಳಯ್ಯ ಮುಂತಾದ ಶರಣರನ್ನು ಪರಿಚಯಿಸುವ ಕಾರ್ಯದಲ್ಲಿ ಯಶಸ್ಸು ಪಡೆದಿದ್ದಾರೆ.

ಪ್ರತಿ ವರುಷ ಶ್ರೀ ಗುರು ಚೆನ್ನಯ್ಯ ಅವರ ಜಯಂತ್ಯುತ್ಸವನ್ನು ತಪಸ್ಸಿನಂತೆ ಆಚರಿಸುತ್ತಾ ಸರ್ವರ ಪ್ರೀತಿಗೆ ಭಾಜನರಾಗಿದ್ದಾರೆ. "ಶ್ರೀ ಗುರು ಮಾದಾರ ಚೆನ್ನಯ್ಯ ಸತ್ಸಂಗ ಎಂಬ ಸಂಘಟನೆ ಮೂಲಕ ಒಂದು ಮಾದರಿ ಆಶ್ರಮ ಕಟ್ಟಿ ಬೆಳೆಸುವ ಜನಮನ ಬೆಳಗಿಸುವ ಸದುದ್ದೇಶ ಹೊಂದಿದ್ದಾರೆ.

ಆಕಾಶವಾಣಿ ಧಾರವಾಡ 

ಕೇಂದ್ರದ ಯುವವಾಣಿಯಲ್ಲಿ ಇವರ ಧ್ವನಿ ಸೇವೆಯಾಗಿರುವುದು ಗಮನಾರ್ಹ ಸಂಗತಿ.ಬಸವ ಭಾವದ ಬಸವರಾಜ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ.ಜ್ಞಾನಶೀಲˌಚಲನಶೀಲˌವಿನಯಶೀಲಗಳ ಸ್ನೆಹ ˌಜೀವ ಸಂಗಮವಾಗಿರುವ ಬಸವರಾಜ ಹಳಕಲ್ಲರವರಿಗೆ ಸದಾ ಜಯವಾಗಲಿˌಶುಭವಾಗಲೆಂದು ರಾಯಬಾಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾರ್ದಿಕವಾಗಿ ಹಾರೈಸುತ್ತದೆ.ಅನನ್ಯ ಜೀವನೋತ್ಸಾಹಿˌಬಸವಾನುಯಾಯಿ ಬಸವರಾಜ ಹಳಕಲ್ಲರವರನ್ನು ಆಹ್ವಾನಿಸಿˌಅಭಿನಂದಿಸಿ ಪ್ರೋತ್ಸಾಹಿಸಬೇಕು. ಮಾನವ ಸಂಪನ್ಮೂಲ ಶಕ್ತಿಯ ಸದ್ಭಳಕೆ ಮಾಡಿಕೊಳ್ಳಲಿಚ್ಛಿಸುವವರು ಈ(9591702660) ದೂರವಾಣಿಗೆ ಸಂಪರ್ಕಿಸಬಹುದಾಗಿದೆ.


ಲೇಖಕರು: ಶ್ರೀ ರವೀಂದ್ರ ಪಾಟೀಲ

ಅಧ್ಯಕ್ಷರುˌಕನ್ನಡ ಸಾಹಿತ್ಯ ಪರಿಷತ್ತುˌರಾಯಬಾಗ

Image Description

Post a Comment

0 Comments