ಗೋರಿಯ ಪೂಜೆಗೆ ಬಂದ ಹೂವು ಗೋರಿಯ ಪಕ್ಕದಲ್ಲಿ ಅರಳಿದ ಹೂವು ಮೈಲಿಗೆ ಮಾನವ"


 ಶೀರ್ಷಿಕೆ : 

" ಗೋರಿಯ ಪೂಜೆಗೆ ಬಂದ ಹೂವು 

      ಗೋರಿಯ ಪಕ್ಕದಲ್ಲಿ ಅರಳಿದ ಹೂವು

                                 ಮೈಲಿಗೆ ಮಾನವ"


ಹೀಗೇಕೆ ನೀ ನನ್ನನ್ನೆ ನೋಡುತ್ತಿರುವೆ ಗೆಳತಿ 

ಎಲ್ಲೊ ಹುಟ್ಟಿದವಳು ನಾನು

ದೇವರ ಪೂಜೆಗೆ ಅರ್ಪಿತವಾಗಬೇಕಿತ್ತು

ಹೆಣ್ಣಿನ ಮುಡಿಗೇರಿ ನಲಿಯಬೇಕಿತ್ತು

ಸತ್ತ ದೇಹದೊಂದಿಗೆ ಮಸಣಕೆ ಬಂದಿರುವೆ

ಯಾರಾರೊ ಎಲ್ಲೆಲ್ಲಿಗೊ ಅವನಿಚ್ಛೆಯಂತೆಯೆ 


ನನ್ನ ನೋಡು ಗೋರಿಯ ಪಕ್ಕದಲ್ಲಿಯೆ ಹುಟ್ಟಿದ 

ಸುಂದರ ಹೂಗಳ ಬಳ್ಳಿಯು ನಾನು 

ಮಡಿ ಮೈಲಿಗೆ ಎನ್ನುತ ಪೂಜೆಗೆ ಅನರ್ಹವೆನ್ನುವರು

ಮಸಣದಿ ಹುಟ್ಟಿದ್ದು ನನ್ನ ದುರಾದೃಷ್ಟವೆ

ಮಣ್ಣಾಗಿ ದೇಹಕ್ಕೆ ಮುಕ್ತಿ ನೀಡುವ ಪವಿತ್ರ ಸ್ಥಳವಿದು

ಇದು ಮಾನವನಿಗೆ ಅಪವಿತ್ರವೆನಿಸಿದೆ


ತೊಳಿತಿರಿ ತೊಳಿತಿರಿ ಆಗಾಗ ತೊಳಿತಾನೆ ಇರಿ

ಮಾನವ ಅವನಿಗವನೆ ಮೈಲಿಗೆಯಾಗಿದ್ದಾನೆ

ಮಾನವನ ಸ್ವಾರ್ಥಕ್ಕೆ ಅಂಕೆಯಲ್ಲದಂತಾಗಿದೆ

ಗಾಳಿ ನೀರು ಬೆಳಕು ಕಲುಷಿತವಾಗಿದೆ 

ಪ್ಪ್ರಕೃತಿಯ ಅತ್ಯಾಚಾರಕ್ಕೆ ಸಿಕ್ಕ ಫ್ರತಿಫಲ

ಎಚ್ಚರ ಧಗಧಗ ಉರಿಯುವ ದಿನಗಳು ದೂರವಿಲ್ಲ 

ಎಚ್ಚೆತ್ತಿಕೊ ಮಾನವ ನಿನಗೆ ನೀನೆ ನಾಶವಾಗುವೆ


             ✍️...ನಿಮ್ಮವನೆ..ರಾಜ್❣️

Image Description

Post a Comment

0 Comments