*'ಸಂಗೀತ ಶ್ರೀಶೈಲ ಬೆಳಗುವ ಜ್ಞಾನದೀಪ ಸುರಭಿ ಮೊಕಾಶಿ'*
ರಾಯಬಾಗ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸವಬ್ಯಾಕೂಡದ ಅನನ್ಯ ಬಾಲಪ್ರತಿಭೆ ಸುರಭಿ ಮೊಕಾಶಿ ಚಲಿಸುವ ಕಲಾ ಕಾಶಿ. ಕಲೆಯ ಸೆಲೆ ಸುರಭಿ ಈ ನೆಲದ ಸಾಂಸ್ಕೃತಿಕ ಲೀಲೆ.ಬಹುಮುಖ ಪ್ರತಿಭಾ ಸಂಪನ್ನೆಯಾಗಿರುವ ಕಲಾಸಿರಿ ಸುರಭಿ ಕರುನಾಡಿನ ಭವಿಷ್ಯದ ಅಮಿತ ಐಸಿರಿ.
ರಾಯಬಾಗ ತಾಲೂಕಿನ ಬಸವ ಬ್ಯಾಕೂಡದ ಸುಸಂಸ್ಕೃತ ಮನಸ್ಸಿನ ಶ್ರೀಶೈಲ ಕಲೋಪಾಸಕಿ ದೀಪಶ್ರೀಯವರ ಒಡಲ ಕುಡಿ ಸುರಭಿ 5-5-2012 ರಂದು ಶಿಕ್ಷಣ ಕಾಶಿ ಎಂದು ಸುವಿಖ್ಯಾತವಾಗಿರುವ ಹಾರೂಗೇರಿಯಲ್ಲಿ ಜನಿಸಿದರು.ಪ್ರಸ್ತುತ ಶ್ರೀ ಎಸ್.ಎಮ್.ನಾರಗೊಂಡ ಇಂಟರನ್ಯಾಶನಲ್ ಶಾಲೆಯಲ್ಲಿ ಆರನೆಯ ತರಗತಿಯಲ್ಲಿ ಅಧ್ಯಯನಗೈಯುತ್ತಿದ್ದು ಸತತ ಪ್ರಥಮ ಶ್ರೇಯಾಂಕದಲ್ಲಿ ಉತ್ತೀರ್ಣಳಾಗುತ್ತಿರುವುದು ಇವಳ ಬೌದ್ದಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.
ಹಾರೂಗೇರಿಯ ಸುರಭಿ ಸಪ್ತಸ್ವರ ಸಂಗೀತ ಪಾಠಶಾಲೆಯಲ್ಲಿ ಮೂರನೆಯ ವಯಸ್ಸಿನಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತˌಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಪೆಂಟಿಂಗ್ˌ ಡ್ರಾಯಿಂಗ್ˌನೃತ್ಯˌಹಾಡುವುದು ˌವಾದ್ಯಗಳನ್ನು ನುಡಿಸುವುದು ಸುರಭಿಯ ಹವ್ಯಾಸದ ಪಂಚಾಚಾರಗಳು. ಪ್ರತಿಭಾ ಕಾರಂಜಿಯ ರಾಜ್ಯಮಟ್ಟದ ಲಘು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿ ಭಕ್ತಿ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದದ್ದು ಸಾಧಕಿಯ ಜೀವನಾನಂದದ ಸುವರ್ಣ ಕ್ಷಣಗಳು.ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆˌಬೆಂಗಳೂರು ಇವರು ಕೊಡಮಾಡುವ
'ಬಾಗೆನಾಡಿನ ಕಲಾ ಕೋಗಿಲೆ'ˌ ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಉತ್ಸವ 2024 ಬೆಳಗಾವಿ ನೀಡುವ 'ನಾದ ಸ್ವರ ಗಾನ ಕೋಗಿಲೆ' ಪ್ರಶಸ್ತಿಗಳಿಗೆ ಭಾಜನರಾಗಿರುವ ಸುರಭಿ ಮೊಕಾಶಿಯವರು ಬಾಗೆನಾಡು ಬೆಳಗುತ್ತಿರುವುದನ್ನು ಗುರುತಿಸಿದ ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಾಗೆನಾಡಿನ ಸಾಂಸ್ಕೃತಿಕ ಭಾಗ್ಯದೇವತೆಯಾಗಲೆಂದು ಶುಭ ಹಾರೈಸಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ ಅವರು ಸುರಭಿಯವರನ್ನು 'ಜ್ಞಾನಶ್ರೀಶೈಲ ಬೆಳಗುವ ಅನುಪಮ ಸಂಗೀತ ದೀಪಸಿರಿ' ಸುರಭಿ ಮೊಕಾಶಿ ನಡೆದಾಡುವ 'ಕಲಾಕಾಶಿ'ಎಂದು ಎದೆದುಂಬಿ ಹಾಡಿಹೊಗಳಿದ್ದಾರೆ.ಸುರಭಿಯವರು ಹಾರೂಗೇರಿಯ ಶ್ರೀ ಚನ್ನವೃಷಭೇಂದ್ರ ಮಠದಲ್ಲಿ ಜರುಗುವ ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಸಂಗೀತ ಸೇವೆ ನೀಡಿ ಶ್ರೀಗಳ ಆಶೀರ್ವಾದ ಪಡೆಯುವ ಭಾಗ್ಯ ಇವಳದಾಗಿದೆ.ಉತ್ತರಾದಿ ಮಠ ಬೆಂಗಳೂರುˌ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವಾರ್ಷಿಕೋತ್ಸವದಲ್ಲಿ ಭಕ್ತಿ ಸಂಗೀತ ನೀಡಿ ಆಶೀರ್ವಾದ ಸತ್ಕಾರಕ್ಕೆ ಪಾತ್ರರಾಗಿದ್ದು ಬಡಬ್ಯಾಕೂಡದ ಶಿವಲಿಂಗೇಶ್ವರ ಜಾತ್ರೆಯಲ್ಲಿ ಸಂಗೀತ ಸೇವೆ ಸಲ್ಲಿಸಿ ಸರ್ವ ಸಂಗೀತ ಪ್ರಿಯರಿಂದ ಸೈ ಎನಿಸಿಕೊಂಡಿರುವರು.
ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಆಯ್.ಎ.ಎಸ್ ಪರೀಕ್ಷೆಯಲ್ಲಿ ಗೆಲುವು ಕಾಣುವ ಹೊಂಗನಸು ಹೊತ್ತ 'ಸಂಸ್ಕೃತಿ ಗೆಳತಿ' ಸುರಭಿ ಮೊಕಾಶಿ ರಸಾನಂದದೊಡತಿˌವೀರ ಕನ್ನಡತಿಯಾಗಿ ಕನ್ನಡ ನಾಡಿನ ನಾಡಿಯಾಗಲಿ.
ಹಾರ್ಮೋನಿಯಂ ˌಸೀತಾರ ನುಡಿಸುತ್ತಾ ಗಾಯನ ಮಾಡುವ ಗಾನ ಗಂಗೋತ್ರಿ ಸುರಭಿ ಗಾನ ಗಂಗೆಯಾಗಿ ಸಂಗೀತಸುಧೆ ಸುರಿಸಲಿ.ಸುರಭಿ ಕರುನಾಡಿನ ಆಸ್ತಿಯಾಗಲೆಂದು ಮನದುಂಬಿ ಕನ್ನಡ ಮನಸ್ಸುಗಳು ಹಾರೈಸಿವೆ.ಸುರಭಿಯವರೊಂದಿಗೆ ಮಾತನಾಡಿ ಅಭಿನಂದಿಸಿ ಪ್ರೋತ್ಸಾಹಿಸುವವರು *7760193093* ದೂರವಾಣಿ ನಂಬರಿಗೆ ಸಂಪರ್ಕಿಸಬೇಕು.
*ಶ್ರೀ ರವೀಂದ್ರ ಪಾಟೀಲ*
ಅಧ್ಯಕ್ಷರು
ˌ ಕನ್ನಡ ಸಾಹಿತ್ಯ ಪರಿಷತ್ತು,ರಾಯಬಾಗ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments