*ಜೇನುಕಂಠದ ನಿಜ ಕನ್ನಡತಿ ಸ್ವಾತಿ ಉಮೇಶ ಕಿಡದಾಳ*
ಹಾಡು ಮತ್ತು ನೃತ್ಯ ಸರಸ್ವತಿಯ ಎರಡು ಕಣ್ಣುಗಳು.ಸಂಗೀತ ಶಾರದೆಯ ನಯನಗಳೆರಡನ್ನು ವಶ ಮಾಡಿಕೊಂಡವರು ವಿರಳ.ಗಾಯನˌನರ್ತನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜನಜನಿತವಾಗಿರುವ ಹೆಸರು ಸ್ವಾತಿ ಕಿಡದಾಳ.ಸಂಗೀತ ಶರಧಿಯ ಸ್ವಾತಿಮುತ್ತು ಸ್ವಾತಿ ಜೇನುಕಂಠದ ನಿಜ ಕನ್ನಡತಿ.ನಿತ್ಯ ಸಂಗೀತೋಪಾಸಕಿ ಸ್ವಾತಿ ನೃತ್ಯ ಆರಾಧಕಿ.ಒಲವಿನ ಗಾಯಕಿˌಚೆಲುವಿನ ನರ್ತಕಿಯಾಗಿ ಬಹುಮುಖ ಪ್ರತಿಭೆಯಿಂದ ಮನೆಮಾತಾಗಿದ್ದಾರೆ.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದ ಉಮೇಶ ಕಿಡದಾಳ ಮತ್ತು ವೀಣಾ ಕಿಡದಾಳರವರ ಪುಣ್ಯಗರ್ಭದಲ್ಲಿ 26-2-2008 ರಂದು ಜನ್ಮದಳೆದ ಸ್ವಾತಿ ಕಿಡದಾಳ ಇಂದು ಐದು ನೂರಕ್ಕೂ ಹೆಚ್ಚು ಹಾಡುಗಳನ್ನು ಕಂಠಗತ ಮಾಡಿಕೊಂಡು ಬೆಳಗಾವಿ ಜಿಲ್ಲಾ ಗಾಯನ ಸಾಮ್ರಾಜ್ಯದ ಸಾಮ್ರಾಜ್ಞಿಯಾಗಿ ರಾರಾಜಿಸುತ್ತಿದ್ದಾರೆ.
ಮಹಿಳಾ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆˌಬೆಳಗಾವಿಯಲ್ಲಿ ಹತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ವಾತಿ ಪ್ರತಿ ವರ್ಷ ಉನ್ನತ ಶ್ರೇಣಿ ಅಂಕಗಳನ್ನು ಪಡೆದು ಮೊದಲ ಶ್ರೇಯಾಂಕದೊಂದಿಗೆ ಉತ್ತೀರ್ಣಳಾಗುತ್ತಿರುವುದು ಜ್ಞಾನಸಂಪತ್ತಿಗೆ ನಿದರ್ಶನವಾಗಿದೆ.ಕಳೆದ ಎಂಟು ವಸಂತಗಳಿಂದ ಶಾಸ್ತ್ರೀಯ ಸಂಗೀತ ವಿದ್ಯಾಭ್ಯಾಸಗೈಯುತ್ತಾ ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.ಗಾಯನ ಲೋಕದಲ್ಲಿ ಮೈಲುಗಲ್ಲುಗಳನ್ನು ಸ್ಥಾಪಿಸಿ ಅಳಿಸಲಾಗದ ಹೊಸ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದ್ದಾರೆ.
ಕರುನಾಡಿನ ವಿವಿಧೆಡೆ ಹಮ್ಮಿಕೊಂಡ ಗಾಯನ ಸ್ಫರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಿಟ್ಟಿಸಿ ತನ್ನ ಕೊರಳ ಇಂಪಿನ ಕಂಪು ಪಸರಿಸಿ ಕಲಾರಸಿಕರ ಮನಗದ್ದುಗೆಯಲ್ಲಿ ವಿರಾಜಮಾನರಾಗಿದ್ದಾರೆ.ನೂರಾರು ಜಯಂತಿಗಳುˌಉತ್ಸವ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಿ ಸಹೃದಯರ ಹೃದಯ ಗೆದ್ದಿದ್ದಾರೆ.
ಹತ್ತನೆಯ ವಯಸ್ಸಿನಲ್ಲಿ ಕೈವಲ್ಯ ಪದ್ಧತಿ ಭಜನೆ ಹಾಡಿ ಕೇಳುಗರಿಂದ ಸೈ ಎನಿಸಿಕೊಂಡ ಸ್ವಾತಿ 'ಹಮಾರ ದೇಶ' ರಾಜ್ಯ ಮಟ್ಟದ ನಿಬಂಧ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ತಮ್ಮ ಬರೆವಣಿಗೆಯ ಯುಕ್ತಿ ಶಕ್ತಿ ರುಜುವಾತು ಪಡಿಸಿದ್ದಾರೆ.ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ ಬೆಳಗಾವಿಯವರು ಆಯೋಜಿಸಿದ ಚಿತ್ರಕಲಾ ಸ್ಫರ್ಧೆ ಹಾಗೂ ಭರತನಾಟ್ಯ ಸ್ಫರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದದ್ದು ಇವರ ಬಹುಮುಖ ಪ್ರತಿಭೆಗೆ ಉತ್ತಮ ಉದಾಹರಣೆಯಾಗಿದೆ.
ನೂರಾರು ಹಾಡುಗಳ ಮಹಾ ನಿಧಿಯನ್ನು ಕಂಠಖಜಾನೆಯಲ್ಲಿರಿಸಿಕೊಂಡಿರುವ ಸಂಗೀತ ಸರೋವರದ ಮರಾಳ ಸ್ವಾತಿ ಕಿಡದಾಳ ಅವರಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ.ಬಸವ ನಾಡಿನ ಕಲಾ ಬೆಳಕುˌಕರುನಾಡ ಗಾನ ಕೋಗಿಲೆˌಬೆಳವಡಿ ಗಾನ ಕೋಗಿಲೆˌಅಮೋಘ ಬಾಲ ಕಲಾ ರತ್ನˌˌವೈಸ್ ಆಪ್ ಅಥಣಿˌವೈಸ್ ಆಪ್ ಕಲಬುರ್ಗಿˌಗಿಪ್ಟೆಡ್ ವೈಸ್ ಆಪ್ ಕರ್ನಾಟಕˌವೈಸ್ ಆಪ್ ಲಿಂಗನೂರˌಬೆಳಕಿನ ಕೋಗಿಲೆˌಗಡಿನಾಡು ಕಲಾ ತಿಲಕˌಸ್ಟೂಡೆಂಟ್ ಆಪ್ ದಿ ಇಯರ್ˌಬಾಲ ಪ್ರತಿಭಾ ಗಾಯಕಿˌಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಮೊದಲಾದ ಗೌರವ ಪ್ರಶಸ್ತಿ ಪುರಸ್ಕಾರಗಳು ಸ್ವಾತಿಯವರ ಕಂಠಸಿರಿಯನ್ನು ಹುಡುಕಿಕೊಂಡು ಬಂದಿವೆ.ಕಾರದಗಾˌಹುಕ್ಕೇರಿˌರಾಯಬಾಗ ತಾಲೂಕಿನ ಹಂದಿಗುಂದದಲ್ಲಿ ಜರುಗಿದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗಿಯಾಗಿ ಸುವರ್ಣ ಗೌರವ ಸತ್ಕಾರಕ್ಕೆ ಭಾಜನರಾಗಿದ್ದಾರೆ.
ಅಮೃತ ಕೊರಳಿನ ಗಾಯನಗಣಿ ಸ್ವಾತಿ ಬೆಳಗಾವಿ ಜಿಲ್ಲೆಯ ಗಾನ ಸಿಂಹಾಸನದ ರಾಣಿಯಾಗಿ ಪ್ರಜ್ವಲಮಾನವಾಗಿ ಬೆಳಗಲಿ.ಸಂಗೀತ ಸುಧೆಯನ್ನು ಉಣಿಸುತ್ತಾ ಸಾಂಸ್ಕೃತಿಕ ಆಸ್ತಿ ಉಳಿಸಿ ಮುನ್ನಡೆಸಲೆಂದು ಶುಭ ಹಾರೈಕೆಗಳು.ಸ್ವಾತಿ ಕಿಡದಾಳ ಅವರನ್ನು ಸಮಾರಂಭಗಳಿಗೆ ಆಹ್ವಾನಿಸಿ ಆದರಿಸಿ ಗೌರವ ನೀಡಿ ಅಭಿನಂದಿಸುವವರು (9449307881)ದೂರವಾಣಿಗೆ ಕರೆ ಮಾಡಬಹುದಾಗಿದೆ.
ಲೇಖಕರು:
ಶ್ರೀ ಆರ್.ಎಮ್.ಪಾಟೀಲ
ತಾಲೂಕಾಧ್ಯಕ್ಷರುˌಕನ್ನಡ ಸಾಹಿತ್ಯ ಪರಿಷತ್ತುˌರಾಯಬಾಗ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments