Il ರಾಮಾ ಶ್ರೀ ರಾಮ ರಾಮಾ ll

 Il ರಾಮಾ ಶ್ರೀ ರಾಮ ರಾಮಾ ll



ಎರಡಕ್ಷರದಲಿ ಏನಿದೆ ಶಕ್ತಿ

ರಾಮಾ ರಾಮಾ ಎಂದರೆ 

ಮುಕ್ತಿ

ಸಂಕಟ ಮೋಚನ ತಾರಕ ಶಕ್ತಿ

ಅಮಿತಾನಂದ ಮೋಹಕ ಭಕ್ತಿ 

ರಾಮಾ ಶ್ರೀ ರಾಮ ರಾಮಾ(ನಾಮಾ)


ತ್ರೇತಾಯುಗದ  ಸೀತಾರಾಘವ

ದ್ವಾಪರದಲ್ಲಿ  ರಾದಮಾಧವ

ಕಲಿಯುಗದಲಿ ಬಂದೆಯ ಕೇಶವ

ಕರುನಾಡಲೊಲಿದು  ಬಂದಾ ದೈವ

ರಾಮಾ ಶ್ರೀ ರಾಮ ರಾಮಾ (ನಾಮಾ)


ಅರುಣ ಯೋಗಿ ಕೆತ್ತಿದ ಶಿಲ್ಪವ

ಮೈತಾಳಿ ನಿಂದೆ ನೀ ಬಲು ಚೆಲುವ

ನಗುಮೊಗದಲಿ  ಬಗೆ ಬಗೆ ಭಾವ

ಹ್ಯಾಂಗ ಅರಿಯಲಿ ನಾ ಹುಲು ಮಾನವ

ರಾಮಾ ಶ್ರೀ ರಾಮ ರಾಮಾ (ನಾಮಾ )


ಬಾಲಕ ನೀನು ಭೂಮಿಗೆ ಬಂದೆ

ಸಂಕಟ ಹರೆಯಲು ಜಗದೊಳು ನಿಂದೆ

ಅವಧಪುರಿಯೊಳು  ನೀ ನೆಲೆಯಾದೆ

ಕೋದಂಡಪಾಣಿ ಸಂತಸ ತಂದೆ

ರಾಮಾ ಶ್ರೀ ರಾಮ ರಾಮಾ (ನಾಮಾ)


✍️  ನಾಡಿಗ್ ವಿಜಯಲಕ್ಷ್ಮಿ  ಮಂಜುನಾಥ್ ಕಡೂರು

Image Description

Post a Comment

0 Comments