ಯುಗದ ಕವಿ : ಜಗದ ಕವಿ : ಬೇಂದ್ರೆ : ಪ್ರೊ ಎಸ್ ಕೆ ಗುರುನಾಥ
ಹಾರೂಗೇರಿ : ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಸಹಯೋಗದಲ್ಲಿ ದ ರಾ ಬೇಂದ್ರೆಯವರ 128ನೇ ಜಯಂತಿಯನ್ನು ಬೇಂದ್ರೆ ಯವರ ಭಾವಚಿತ್ರಕ್ಕೆ ಮುಖ್ಯ ಅಥಿತಿಗಳಿಂದ ಮತ್ತು ವೇದಿಕೆಯ ಮೇಲಿನ ಗಣ್ಯರಿಂದ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಪ್ರೊ ಎಸ್ ಕೆ ಗುರುನಾಥ ಮಾತನಾಡಿ, ನೊಂದು ಬೆಂದ ಬೇಂದ್ರೆ ಸರ್ವಕಾಲಕ್ಕೂ ಶ್ರೇಷ್ಠ ಕವಿಯಾದ ಬಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಬೇಂದ್ರೆ ಆಧ್ಯಾತ್ಮಿಕ ಜೀವಿಯಾಗಿದ್ದರು ಮತ್ತು ಸರ್ವ ಶ್ರೇಷ್ಠ ಕವನಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಅಂಬಿಕಾತನಯದತ್ತ ಕಾವ್ಯನಾಮದಿಂದ ಕವನಗಳನ್ನು ಬರೆಯಲು ಪ್ರಾರಂಭಿಸಿದ ಇವರು, ಗರಿ, ನಾದಲಿಲೇ, ನಾಕುತಂತಿ,ಅರಳು ಮರಳು,ಉಯ್ಯಾಲೆ, ಸಖಿಗೀತ,ಮುಂತಾದ ಪ್ರಸಿದ್ಧ ಕವನ ಸಂಕಲಗಳನ್ನು ಬರೆದಿದ್ದಾರೆ.ನರಬಲಿ ಕವನ ಬ್ರಿಟಿಷ್ ಆಡಳಿತವನ್ನು ಪ್ರಶ್ನಿಸುವಂತೆ ಮಾಡಿದ್ದರಿಂದ ಅವರನ್ನು ಸೆರೆ ಮನೆಗೆ ಹಾಕಲಾಯಿತು ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಡಿ ಎಮ್ ನಾಯ್ಕ ಮಾತನಾಡಿ, ಬೇಂದ್ರೆಯವರ ಸಖಿಗೀತ ಕವನವಂತು ಬದುಕಿನ ಭವನೆಯ ಮಹಾ ಕಾವ್ಯವೇ ಎಂದರು. ಇನ್ನುಳಿದಂತೆ ವೇದಿಕೆಯ ಮೇಲೆ ಪ್ರಾಚಾರ್ಯರಾದ ಡಾ. ಎಲ್ ಎಸ್ ಧರ್ಮಟ್ಟಿ ವಹಿಸಿದ್ದರು. ಅವರ ಅನುಪಸ್ಥಿತಿಯಲ್ಲಿ ಹಿರಿಯ ಉಪನ್ಯಾಸಕರಾದ ಡಾ. ಸಿ ಡಿ ಠಾಣೆ, ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಬೇಂದ್ರೆಯವರ ಜೀವನ ಯುವ ಕರಿಗೆ ದಾರಿ ದೀಪಾವಾಗಿದೆ ಎಂದರು. ವೇದಿಕೆಯ ಮೇಲೆ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ ಎಸ್ ಬಿ ಕಲಚಿಮಡ್, ಕನ್ನಡ ಉಪನ್ಯಾಸಕರಾದ ಡಿ ಎಮ್ ನಾಯ್ಕ, ಡಾ. ವಿಲಾಸ ಕಾಂಬಳೆ, ಶ್ರೀಮತಿ ಆರ್ ಬಿ ಮ್ಯಾಗೇರಿ ಉಪಸ್ಥಿತರಿದ್ದರು. ಪ್ರೊ ಹೆಚ್ ಎಸ್ ಜೋಗನ್ನವರ ಬೇಂದ್ರೆಯವರ ನೀ ಹಿಂಗ ನೋಡಬೇಡ ನನ್ನ, ತಿರುಗಿ ನಾ ಹೆಂಗ್ ನೋಡಲಿ ನಿನ್ನ, ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಇನ್ನುಳಿದಂತೆ ಉಪನ್ಯಾಸಕರುಗಳಾದ ಪ್ರೊ ಎಸ್ ಎಮ್ ಹೆಳವರ್, ಪ್ರೊ ಬಿ ಆರ್ ಟೊಮರೆ, ಪ್ರೊ ಬಿ ಎ ಕಾಂಬಳೆ, ಪ್ರೊ ಕೆ ಎಸ್ ಭಜಂತ್ರಿ, ಪ್ರೊ ಬಿ ಕೆ ದಳವಾಯಿ, ಪ್ರೊ ಕಾಂತೇಶ್ ಕೊಚೇರಿ, ಉಪನ್ಯಾಸಕಿಯರಾದ ಶ್ರೀಮತಿ ಪಿ ಕೆ ಪಾಟೀಲ್, ತೇಜಶ್ವಿನಿ ಕಟ್ಟಿಮನಿ, ಎಲ್ಲಾ ಸಿಬ್ಬಂದಿ ವರ್ಗ ಮತ್ತು ಮುದ್ದು ವಿದ್ಯಾರ್ಥಿ /ನಿಯರು ಹಾಜರಿದ್ದು ಕಾರ್ಯಕ್ರಮ ಯಶ್ವಿಗೊಳಿಸಿದರು.
ಪ್ರಾರಂಭದಲ್ಲಿ ಸ್ವಾಗತ ಮತ್ತು ಅಥಿತಿಗಳ ಪರಿಚಯವನ್ನು ಪ್ರೊ ಎಸ್ ಬಿ ಕಚಿಮಡ ನಡೆಸಿಕೊಟ್ಟರು.ತದನಂತರ ಬಿ ಎ ವಿದ್ಯಾರ್ಥಿನಿ ಕಾದಂಬರಿ ಕೋಳಿ ಪ್ರಾತಿಸಿದರು.ರುಕ್ಮಿಣಿ ಪಾಂಡ್ರೋಳ್ಳಿ ಸ್ವಾಗತ ಗೀತೆ ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ ಕೆ ಎಸ್ ಹಾರೂಗೇರಿ ನಿರ್ವಹಿಸಿದರು. ಕೊನೆಯಲ್ಲಿ ಪ್ರೊಆರ್ ಎಮ್ ಮಾಲಗಾರ ವಂದಿಸಿದರು.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments