(ಹುಬ್ಬಳ್ಳಿ ನಗರ ತಾಲ್ಲೂಕಿನ ೧೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಯಾಗಿರುವ ಕನ್ನಡಮ್ಮನನ್ನು ಮನೆ ದೇವತೆಯಾಗಿ ಪೂಜಿಸುತ್ತಿರುವ ಸಾಹಿತಿ ವೆಂಕಟೇಶ ಮರೆಗುದ್ದಿ ರವರಿಗೆ ಅವರ ನಿವಾಸ (ಸರ್ವಜ್ಞ) ದಲ್ಲಿ ಅಭಿನಂದಿಸಿ ಅಧಿಕೃತ ಅಹ್ವಾನವನ್ನು ನೀಡಲಾಯಿತು)
*ಕನ್ನಡದ ಕಟ್ಟಾಳು, ಕನ್ನಡಾಂಬೆಯ ಮಾನಸಪುತ್ರ ಕವಿ ವೆಂಕಟೇಶ ಮರೆಗುದ್ದಿಯವರಿಗೆ ಅಭಿಮಾನದ ಸನ್ಮಾನ*
ಹುಬ್ಬಳ್ಳಿಯಕನ್ನಡ ಪರ ಹೋರಾಟಗಾರ ಕವಿ ವೆಂಕಟೇಶ ಮರೆಗುದ್ದಿಯವರನ್ನು ದಿನಾಂಕ 03-03-2024 ರಂದು ಆಯೋಜಿಸಲಾಗಿರುವ ೧೬ನೇ ಹುಬ್ಬಳ್ಳಿ ನಗರ ತಾಲ್ಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾದ ಹಿನ್ನಲೆಯಲ್ಲಿ ೩೦ ಜನವರಿ ೨೦೨೪ರ ಸೋಮವಾರ ಸಂಜೆ ೭:೩೦ ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಹುಬ್ಬಳ್ಳಿ ನಗರ ತಾಲ್ಲೂಕಿನ ವತಿಯಿಂದ ಮಂಜುನಾಥ ನಗರದ ವೆಂಕಟೇಶ್ವರ ಕಾಲೋನಿಯಲ್ಲಿಯ ಲಕ್ಷ್ಮೀಶ ಕವಿ ಮಾರ್ಗದಲ್ಲಿರುವ ಅವರ ಸರ್ವಜ್ಞ ನಾಮಾಕಿಂತ ಮನೆಗೆ ತೆರಳಿ ಅಹ್ವಾನವನ್ನು ನೀಡಲಾಯಿತು.
ಈ ಸಮಯದಲ್ಲಿ ಪ್ರೊ.ಕೆ.ಎಸ್.ಕೌಜಲಗಿ , ಧಾರವಾಡ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳು, ಮಾತನಾಡುತ್ತಾ; ಸಾಹಿತ್ಯವು ಜೀವನದ ಅವಿಭ್ಯಾಜ್ಯ ಅಂಗವಾಗಿದ್ದು, ಹೊಸ ಹೊಸ ಶಬ್ದಗಳನ್ನು ಬೆಳೆಸಲು ಮತ್ತು ಕನ್ನಡ ಪರ ಚಿಂತನೆಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದರಿಂದ ನಾವೆಲ್ಲಾ ಒಂದು ಕಡೆ ಕೂಡಿ ಚರ್ಚೆ ಹಾಗೂ ಸಂವಾದಗಳ ಮೂಲ ಹೊಸ ಆಲೋಚನೆಗಳನ್ನು ಹುಟ್ಟು ಹಾಕಲು ಸಾಧ್ಯವೆಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರು ನಾಡು ನುಡಿಗಾಗಿ ದುಡಿಯುತ್ತಿರುವ ವೆಂಕಟೇಶ ಮರೆಗುದ್ದಿಯವರನ್ನು ಈ ಸಲ ಜರಗುವ ೧೬ನೇ ಹುಬ್ಬಳ್ಳಿ ತಾಲೂಕು ನಗರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಹಳ ಸಂತೋಷವಾಗಿದ್ದು, ಒಳ್ಳೆಯ ಗೋಷ್ಠಿಗಳನ್ನು ಆಯೋಜಿಸಲಾಗುವುದೆಂದರು.
ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಲಭ್ಯತೆಗಾಗಿ, ಕಳಸಾ ಬಂಡೂರಿ ನಾಲಾ ಜೋಡನೆಗಾಗಿ ಹಾಗೂ ರಾಜ್ಯದಾದ್ಯಂತ ಕನ್ನಡ ದೂರದರ್ಶನ ಪ್ರಸಾರಕ್ಕಾಗಿ ತಮ್ಮ ಸ್ವಂತ ಹಣದಿಂದ ಒಂದು ಲಕ್ಷ ಪತ್ರಚಳುವಳಿ ಮಾಡಿರುವುದಲ್ಲದೆ ಕನ್ನಡ ಅನುಷ್ಠಾನಕ್ಕೆ ಉಪವಾಸ ಚಳುವಳಿ ಮಾಡುತ್ತ ಬಂದಿರುವ ಕನ್ನಡಾಂಬೆಯ ಮಾನಸಪುತ್ರ, ಕನ್ನಡದ ಕಟ್ಟಾಳು ಕವಿ ಮಹನೀಯ ವೆಂಕಟೇಶ ಕೃಷ್ಣಾಜಿ ಮರೇಗುದ್ದಿಯವರು 'ಕನ್ನಡಮ್ಮನೆ ನಮ್ಮನೇ ದೇವರು', 'ಜೇನ್ಗೂಡ', 'ಕನ್ನಡವೇ ಎನ್ನೋಡವೆ' ಮತ್ತು 'ಬೆಳ್ಳಿ ಬೆಳದಿಂಗಳು' ಎಂಬ ೦೪ ಕವನ ಸಂಕಲನಗಳನ್ನು ಕನ್ನಡತಾಯಿಗೆ ಅರ್ಪಿಸಿದ್ದು ಹುಬ್ಬಳ್ಳಿ ನಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಘನಮಾನ್ಯರಿಗೆ ಕರ್ನಾಟಕ ರಾಜ್ಯ ಎಸ್. ಸಿ., ಎಸ್. ಟಿ ಪ್ರಾಥಮಿಕ ಮತ್ತು ಮಾಧ್ಯಮ ಕ್ಷೇಮಾಭಿವೃದ್ಧಿ ಸಂಘ ಹುಬ್ಬಳ್ಳಿ ಶಹರ ಘಟಕದ ವತಿಯಿಂದ ಅಧ್ಯಕ್ಷರಾದ ಮೋತಿಲಾಲ ರಾಠೋಡ, ಸಂಘಟನಾ ಕಾರ್ಯದರ್ಶಿಗಳಾದ ಸುಭಾಷ್ ಚವ್ಹಾಣರವರು ಗೌರವಪೂರ್ವಕವಾಗಿ ಶಾಲೂ ಹೊದಿಸಿ ಹೂಮಾಲೆ ಹಾಕಿ ಅಭಿನಂದನ ಪತ್ರ ನೀಡಿ ಅಭಿಮಾನದಿಂದ ಅಭಿನಂದನೆ ಸಲ್ಲಿಸಿದರು.
ವಿರೂಪಾಕ್ಷ ಕಟ್ಟಿಮನಿ ಹುಬ್ಬಳ್ಳಿ ನಗರ ಕಸಾಪ ಅಧ್ಯಕ್ಷರು ಮಾತನಾಡುತ್ತಾ, ವೆಂಟಕೇಶ ಮರೆಗುದ್ದಿಯವರು ಸುಮಾರು ೦೫ ದಶಕಗಳಿಂದ ಈ ಭಾಗದಲ್ಲಿ ಕನ್ನಡವನ್ನು ಬೆಳೆಸಲು ಶ್ರಮಿಸುತ್ತಿದ್ದು, ಅವರು ಕವಿಯಾಗಿಯೂ ೦೩ ಕವನ ಸಂಕಲಗಳನ್ನು ಹೊರ ತಂದಿರುವ ವಿಷಯವನ್ನು ಹಂಚಿಕೊಂಡರು, ಇನ್ನಷ್ಟು ಅವರ ಕೃತಿಗಳು ಅಚ್ಚಿನಲ್ಲಿರುವುದಾಗಿ ತಿಳಿಸಿದರು. ನಿಯೋಜಿತ ಸಮ್ಮೇಳನದ ಸರ್ವಾಧ್ಯಕ್ಷರಾದ ವೆಂಕಟೇಶ ಮರೆಗುದ್ದಿಯವರು ಮಾತನಾಡಿ, ಈ ಗೌರವ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿ ಇನ್ನಷ್ಟು ಕನ್ನಡ ಸೇವೆ ಮಾಡಲು ತಾವುಗಳು ಪ್ರೋತ್ಸಾಹ ನೀಡಿದಂತಾಗಿದೆ ಎಂದರು.
ಇದೇ ಸಮಯದಲ್ಲಿ ವೈ. ಕೆ. ಪಾಟೀಲ, ಸುಭಾಸ ರಾಯರೆಡ್ಡಿ, ಪ್ರೋ.ಜಿ.ವಿ.ಚಿಕ್ಕಮಠ, ಎಸ್.ಕೆ.ಆದಪ್ಪನವರ, ವಿಧ್ಯಾ ವಂಟಮುರಿ, ರೂಪಾ ಜೋಶಿ, ಸುನೀತಾ ಹುಬಳಿಕರ ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ನಗರ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಚನ್ನಬಸಪ್ಪ ಧಾರವಾಡ ಶೆಟ್ಟರ್, ಡಾ. ಬಿ. ಎಸ್. ಮಾಳವಾಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಶೋಕ ಸನ್ನಿ, ಗಿರಿಜಾ ಚಿಕ್ಕಮಠ, ಸಂದ್ಯಾ ದಿಕ್ಷೀತ, ಈರಪ್ಪ ಎಮ್ಮಿ, ಶಕುಂತಲಾ ಹೂಗಾರ, ಜಯಶ್ರೀ ಬೇವೂರ, ಪಕ್ಕೀರಪ್ಪ ಮದ್ರಾಸಿ, ರಾಜಶೇಖರ ಇಂಡಿ, ನಿವೃತ್ತ ಪ್ರಾಧ್ಯಾಪಕ ಶಂಕರಗೌಡ ಸಾತ್ಮಾರ, ಶಿಕ್ಷಕ ಸುಭಾಷ್ ಚವ್ಹಾಣ ಹಾಗೂ ವೆಂಕಟೇಶ ಮರೆಗುದ್ದಿಯರ ಪತ್ನಿ ಗೀತಾ, ಮಗ ಮಯೂರ, ಸೊಸೆ ಮೇಘಾ ಮತ್ತು ವೆಂಕಟೇಶ್ವರ ಬಡಾವಣೆಯ ಹಲವಾರು ಹಿರಿಯರು ಭಾಗವಹಿಸಿದ್ದರು, ಕಾರ್ಯಕ್ರಮವನ್ನು ಹುಬ್ಬಳ್ಳಿ ನಗರ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿರೂಪಾಕ್ಷ ಕಟ್ಟಿಮನಿ, ನಿರೂಪಿಸಿದರು, ಹುಬ್ಬಳ್ಳಿ ನಗರ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಡಾ. ಬಿ. ಎಸ್. ಮಾಳವಾಡ ವಂದಿಸಿದರು.
ವರದಿ: ಸುಹೇಚ ಪರಮವಾಡಿ, ಹುಬ್ಬಳ್ಳಿ ಶಹರ, ೭೯೭೫೦ ೨೬೭೨೪
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments