* ನಿತ್ಯಸತ್ಯ..!

 "ಇದು ಬದುಕಿನ ನಿತ್ಯಸತ್ಯದ ಕವಿತೆ. ಅನುದಿನದ ಅನುಕ್ಷಣದ ಕಟುವಾಸ್ತವದ ಭಾವಗೀತೆ. ಮೊದಲನೆ ಚರಣದಲಿ ವಿನೋದವಿದೆ. ಎರಡನೆಯ ಚರಣದಲಿ ವಿಷಾದವಿದೆ. ಮೂರನೆಯ ಚರಣದಿ ವಿಕೃತಿಯಿದೆ. ನಾಲ್ಕನೆಯ ಚರಣದಿ ವಿರಾಗವಿದೆ. ಜೀವನದ ನಾಲ್ಕುಭಾವಗಳ ಹನಿ ಹನಿ ಮಿನಿಗವಿತೆಯಿದು. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೆಶ್.ಗುಬ್ಬಿ.



ನಿತ್ಯಸತ್ಯ..!



ಕುಟುಕುವ ಹೆಂಡತಿಗಿಂತ

ಮೊಟಕುವ ಹೆಂಡತಿ ಲೇಸು.!


ಜರಿಯುವ ಮಕ್ಕಳಿಗಿಂತ

ಇರಿಯುವ ಮಕ್ಕಳೆ ಭೇಷು.!


ಕಟಕಿಯಾಡುವ ನೆಂಟರಿಗಿಂತ

ಕಟುಕ ನೆಂಟರೆ ಷಭಾಷು.!


ಅಡಿಗಡಿಗು ನರಳಿಸುವವರ

ನಡುವಿನ ನಂದನಕಿಂತ

ನರಕವಾಸವೇ ಸಲೀಸು.!


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments