ಅರಿವಿಗೊಂದು ಅರಿಕೆ.!

 “ಇದು ಅರಿವಿನೆದುರು ಆರ್ದ್ರನಾಗಿ ನಿಂತ ಜೀವದ ಕವಿತೆ. ಬೆಳಕಿನೆದುರು ಬಾಗಿ ಬೇಡುವ ಬದುಕಿನ ಭಾವಗೀತೆ. ಏಕೋ ಪ್ರತಿ ಯಶಸ್ಸು, ಪ್ರತಿ ಶ್ರೇಯಸ್ಸು, ಪ್ರತಿ ಮಹತ್ತರ ಅವಕಾಶ, ಪುರಸ್ಕಾರ ನನ್ನನ್ನು ವಿನೀತನನ್ನಾಗಿ ಮಾಡಿಬಿಡುತ್ತದೆ. ಮತ್ತಷ್ಟು ಬರೆಯಲು, ನನ್ನೊಳಗೆ ಅವಲೋಕಿಸಲು ಪ್ರೇರೇಪಿಸುತ್ತದೆ. ಹಂಪಿಯ ವಿರುಪಾಕ್ಷನೆದುರು ಕವನ ವಾಚಿಸಲು ಹೊರಟ ಘಳಿಗೆ ಮೂಡಿದ ಕವಿತೆಯಿದು. ಅಕ್ಷರದ ನಿಜ ಕಾರುಣ್ಯವೆಂದರೆ.. ನಮ್ಮನ್ನೆಂದು ಬೀಗಲು ಬಿಡದೆ ಬಾಗಿ ನಡೆಯುವಂತೆ ಮಾಡುತ್ತದೆ. ಅಡಿಗಡಿಗು ಅರಿವು ಅಂತಕರಣಗಳಿಗೆ ಅರ್ಪಿಸಿಕೊಳ್ಳಲು  ಅನುವುಗೊಳಿಸುತ್ತದೆ. ಏನಂತೀರಾ.?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಕೊಡು ಇರುವುದರ ಬಗೆಗೆ ಆಸಕ್ತಿ

ನೀಡು ಇರದುದರ ಬಗೆಗೆ ವಿರಕ್ತಿ

ಕೊಡು ಸಿಗುವುದರ ಬಗೆಗೆ ಉತ್ಸಾಹ

ನೀಡು ಸಿಗದುದರ ಬಗೆಗೆ ನಿರ್ಮೋಹ.!

ಮಾಡು ಮರೀಚಿಕೆಗಳ ಬೆನ್ನಟ್ಟದಂತೆ

ಮಾಡು ಬಂದುದನು ಕೈಚೆಲ್ಲದಂತೆ

ಇಡು ಮಾತ್ಸರ್ಯ ನನ್ನಿಂದ ದೂರ

ಕೊಡು ಎದೆಗೆ ಔದಾರ್ಯದ ತೀರ.!

ತೊಲಗಿಸು ನಿರೀಕ್ಷೆಗಳ ರಣದಾಹ

ರೂಢಿಸು ನಿರಪೇಕ್ಷೆಗಳ ಮೋಹ

ಕಳಚಿಸು ಗರ್ವ ಅಹಮಿಕೆ ಕಿರೀಟ

ತೊಡಿಸು ವಿನಯ ಸೌಜನ್ಯ ಪೇಟ.!

ಸ್ಫುರಿಸು ಶ್ರದ್ದೆ ಮಮಕಾರಗಳ ಧಾರೆ

ಬತ್ತಿಸು ಜಡತೆ ದುರಾಸೆಗಳ ತೊರೆ

ಬಿಡಿಸು ಗತ್ತು ದರ್ಪಗಳ ಆಡಂಬರ

ಕಲಿಸು ದಯೆ ನಮ್ರತೆಯ ಸಂಸ್ಕಾರ.!

ತುಂಬಿಸುತಿರು ಅಕ್ಷರಗಳ ಜೋಳಿಗೆ

ಪ್ರಜ್ವಲಿಸುತಿರು ಚಿಂತನೆಯ ದೀವಿಗೆ

ಅಕ್ಷಯವಾಗಿಸು ಎದೆಯ ಭಾವತೈಲ

ದೇದೀಪ್ಯವಾಗಿಸು ಕಾವ್ಯದೀಪ ಮಾಲ.!

ಆದರಿಸಿಬಿಡು ಅರಿವಾಗಿ ಅನುದಿನ

ಉದ್ದರಿಸಿಬಿಡು ಗುರುವಾಗಿ ಜೀವನ

ಮೂಡಲಿ ಒಳ ಹೊರಗು ಬೆಳಕು

ಸಾರ್ಥ ಕೃತಾರ್ಥವಾಗಲಿ ಬದುಕು.!

ಸೃಜಿಸಲಿ ಸಕಲವು ನೀನೆಂಬ ಭಾವ

ಮಾಗಲಿ ದಿನದಿಂದ ದಿನಕೆ ಜೀವ

ನಿತ್ಯ ಚಿತ್ತ ಚೈತನ್ಯವಾಗು ಮಹದೇವ

ಬಾಳ ಬೆಳಗಿ ಬೆಳಕಾಗಿಸು ಮಾಧವ.!

ಎ.ಎನ್.ರಮೇಶ್. ಗುಬ್ಬಿ. ಅರಿಕೆ.!

ಕೊಡು ಇರುವುದರ ಬಗೆಗೆ ಆಸಕ್ತಿ

ನೀಡು ಇರದುದರ ಬಗೆಗೆ ವಿರಕ್ತಿ

ಕೊಡು ಸಿಗುವುದರ ಬಗೆಗೆ ಉತ್ಸಾಹ

ನೀಡು ಸಿಗದುದರ ಬಗೆಗೆ ನಿರ್ಮೋಹ.!

ಮಾಡು ಮರೀಚಿಕೆಗಳ ಬೆನ್ನಟ್ಟದಂತೆ

ಮಾಡು ಬಂದುದನು ಕೈಚೆಲ್ಲದಂತೆ

ಇಡು ಮಾತ್ಸರ್ಯ ನನ್ನಿಂದ ದೂರ

ಕೊಡು ಎದೆಗೆ ಔದಾರ್ಯದ ತೀರ.!

ತೊಲಗಿಸು ನಿರೀಕ್ಷೆಗಳ ರಣದಾಹ

ರೂಢಿಸು ನಿರಪೇಕ್ಷೆಗಳ ಮೋಹ

ಕಳಚಿಸು ಗರ್ವ ಅಹಮಿಕೆ ಕಿರೀಟ

ತೊಡಿಸು ವಿನಯ ಸೌಜನ್ಯ ಪೇಟ.!

ಸ್ಫುರಿಸು ಶ್ರದ್ದೆ ಮಮಕಾರಗಳ ಧಾರೆ

ಬತ್ತಿಸು ಜಡತೆ ದುರಾಸೆಗಳ ತೊರೆ

ಬಿಡಿಸು ಗತ್ತು ದರ್ಪಗಳ ಆಡಂಬರ

ಕಲಿಸು ದಯೆ ನಮ್ರತೆಯ ಸಂಸ್ಕಾರ.!

ತುಂಬಿಸುತಿರು ಅಕ್ಷರಗಳ ಜೋಳಿಗೆ

ಪ್ರಜ್ವಲಿಸುತಿರು ಚಿಂತನೆಯ ದೀವಿಗೆ

ಅಕ್ಷಯವಾಗಿಸು ಎದೆಯ ಭಾವತೈಲ

ದೇದೀಪ್ಯವಾಗಿಸು ಕಾವ್ಯದೀಪ ಮಾಲ.!

ಆದರಿಸಿಬಿಡು ಅರಿವಾಗಿ ಅನುದಿನ

ಉದ್ದರಿಸಿಬಿಡು ಗುರುವಾಗಿ ಜೀವನ

ಮೂಡಲಿ ಒಳ ಹೊರಗು ಬೆಳಕು

ಸಾರ್ಥ ಕೃತಾರ್ಥವಾಗಲಿ ಬದುಕು.!

ಸೃಜಿಸಲಿ ಸಕಲವು ನೀನೆಂಬ ಭಾವ

ಮಾಗಲಿ ದಿನದಿಂದ ದಿನಕೆ ಜೀವ

ನಿತ್ಯ ಚಿತ್ತ ಚೈತನ್ಯವಾಗು ಮಹದೇವ

ಬಾಳ ಬೆಳಗಿ ಬೆಳಕಾಗಿಸು ಮಾಧವ.!

ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments