ಶೀರ್ಷಿಕೆ : *ವಿರಹ*

 🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏


ಶೀರ್ಷಿಕೆ : *ವಿರಹ*



ವಿರಹ ನೂರು ತರಹದಾಗಿದೆ

ಕಾರಣ ತಿಳಿಸದೆ ನೀ ಹೋದೆ

ಮನವು ಮಮ್ಮಲ ಮರುಗಿದೆ

ಸಂಗಾತಿಯಿಲ್ಲದೆ ಬರಡಾಗಿದೆ


ಹಚ್ಚ ಹಸುರಾಗಿ ಮನದಲ್ಲಿರುವೆ

ಸುಪ್ತವಾಗಿದ್ದ ಮನ ಕೆಣಕಿರುವೆ

ಮುಚ್ಚು ಮನಕೆ ಹುಚ್ಚ ಹಿಡಿಸಿ ರುವೆ

ಹರೆಯ ಹಕ್ಕಿ ಕೂಗ ಕೇಳಲಿಲ್ಲವೆ


ಮನವೆಲ್ಲಾ ಮಾವಾಗಿ ಬೆಂದಿದೆ

ನಿನ್ನ ಅಂಗದ ಸಂಗಕ್ಕೆ ಕಾದಿದೆ

ವಿರಹದುರಿಯ ತಾಳದಾಗಿದೆ

ನೀ ಬಂದು ತಾಪ ತಣಿಸೆಂದಿದೆ


ಜಾತಕ ಪಕ್ಷಿಯಾಗಿ ಕಾಯು ತಿರುವೆ

ನಿನ್ನ ಬರುವ ದಾರಿಯ ಎಣಿ ಸುತ್ತಿದೆ

ಬರಡಾದ ಈ ಭೂಮಿಯ ತಣಿ ಸೆಂದು ಕಾದಿದೆ.

ನೀ ಬಂದು ಪ್ರೇಮ ಸುಧೆಯ ಉಣಿಸಬಾರದೇ.


✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments