ರಾಷ್ಟ್ರ ಮಟ್ಟದ ವಿಶ್ವ ಜ್ಞಾನಶ್ರೀ ಪ್ರಶಸ್ತಿಗೆ ಡಾ. ವಿಲಾಸ ಕಾಂಬಳೆ ಆಯ್ಕೆ.
ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ ) ಕೊಡಮಾಡುವ ರಾಷ್ಟ್ರ ಮಟ್ಟದ ವಿಶ್ವ ಜ್ಞಾನಶ್ರೀ ಪ್ರಶಸ್ತಿಗೆ ಯುವ ಸಾಹಿತಿ, ಕನ್ನಡ ಉಪನ್ಯಾಸಕ ಡಾ.ವಿಲಾಸ ಕಾಂಬಳೆ, ಅವರ ಶೈಕ್ಷಣಿಕ ಮತ್ತು ಪತ್ರಿಕಾ ರಂಗದ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ ಎಲ್ ಎಸ್ ಪೆಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇವರ ಈ ಸಾಧನೆಗೆ ಶೇಗುಣಶಿ ವಿರಕ್ತ ಮಠದ ಸ್ವಾಮೀಜಿ ಡಾ. ಮಹಾಂತ ದೇವರು, ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್, ಸಂಶೋಧನಾ ಮಾರ್ಗದರ್ಶಕರಾದ ಪ್ರೊ ಗುಂಡಣ್ಣ ಕಲಬುರ್ಗಿ, ಡಾ.ಮಹಾಂತಪ್ಪ ಛಲವಾದಿ, ಡಾ. ಮಹೇಶ ಗಾಜಪ್ಪನವರ, ಡಾ. ಹೊಂಬಯ್ಯ, ಚುಟುಕು ಸಾಹಿತಿ ಶ್ರೀಶೈಲ ಶಿರೂರ, ಶಿಕ್ಷಕ ಸಾಹಿತಿ ಎಮ್ ಕೆ ಶೇಖ, ಡಾ. ಎ ಕೆ ಜಯವೀರ,ಮುಂತಾದ ಹಿರಿಯ ಸಾಹಿತಿಗಳು, ಬಂದುಗಳು, ಸ್ನೇಹಿತರು,ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ :ಬಸವೇಶ್ವರಿ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments