ರಾಷ್ಟ್ರ ಮಟ್ಟದ ಜ್ಞಾನಶ್ರೀ ಪ್ರಶಸ್ತಿ ಪಡೆದ ಡಾ. ವಿಲಾಸ ಕಾಂಬಳೆಯವರಿಗೆ : ಬಾಗಲಕೋಟೆ ಬಸವೇಶ್ವರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಆರ್ ನಾಗರಾಜರವರು ಶುಭಾಶಯ ತಿಳಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

 ಆತ್ಮೀಯರು ಮತ್ತು ಉತ್ತಮ ಸ್ನೇಹಿತರಾದ ಕನ್ನಡ ಪ್ರಾಧ್ಯಾಪಕರು ಯುವ ಸಾಹಿತಿಗಳಾದ  ಡಾ.ವಿಲಾಸ್ ಕಾಂಬಳೆ ಅವರು ರಾಷ್ಟ್ರಮಟ್ಟದ ಜ್ಞಾನಶ್ರೀ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ  ಕನ್ನಡ ಅಧ್ಯಾಪಕರ ಪರಿಷತ್ತಿನ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಡಾ ವಿಲಾಸ್ ಕಾಂಬಳೆ ಅವರಿಗೆ ಇನ್ನೂ ಉತ್ತಮವಾದಂತಹ ಪದವಿ ಪುರಸ್ಕಾರಗಳು ಮತ್ತು ಉನ್ನತ ಹುದ್ದೆಗಳು ಲಭಿಸಲಿ ದೇವರು ಅವರಿಗೆ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಅವರು ಶುಭಾಶಯ ಪತ್ರದಲ್ಲಿ ತಿಳಿಸಿದ್ದಾರೆ.

ವರದಿ :ಬಸವೇಶ್ವರಿ ಕಾಂಬಳೆ

ಹಾರೂಗೇರಿ 


Image Description

Post a Comment

0 Comments