🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ: *ಸಂತಸ*
ಮನ ಬಿಚ್ಚಿ ಮಾತಾಡುವುದೇ ಖುಷಿಯು
ಇಷ್ಟ ಬಂದ ಹಾಗೆ ಮಾಡು ವುದೇ ಸವಿಯು
ನಮ್ಮದೇ ಲೋಕದಲ್ಲಿರುವುದೇ ಗೆಲುವು
ಬಿಂದಾಸ್ ಆಗಿ ಜೀವನ ನಡೆ ಸುವುದೇ ಚಂದವು
ಆದರೂ ಎಲ್ಲೇ ಮೀರಿದಂತಿ ರಬೇಕು
ನಮ್ಮ ಗಡಿಯನ್ನು ದಾಟದಂತಿ ರಬೇಕು
ಸಮಾಜವು ನಮ್ಮ ನಡತೆ ಒಪ್ಪು ವಂತಿರಬೇಕು
ಏಕೆಂದರೆ ಇದರ ಮಧ್ಯದಲ್ಲೇ ಅಲ್ಲವೆ ಬಾಳಬೇಕು
ಮನಸು ತನ್ನಿಷ್ಟದ ಕೆಲಸ ಮಾಡುತಾ
ಯಾವ ಹಂಗು ಇಲ್ಲದೆ ಸ್ವಾತಂ ತ್ರ್ಯ ಅನುಭವಿಸುತಾ
ಯಾರ ಭಯವೂ ಇಲ್ಲದೆ ಮರೆಯುತಾ
ಸ್ವೇಚ್ಚಾಚಾರ ಮೀರದೆ ಬಾಳು ನಡೆಸುತಾ
ಹತ್ತು ಮಂದಿ ಒಪ್ಪುವ ಹಾಗಿ ರೋಣ
ಬೇರೆಯವರು ಬೆರಳು ತೋರಿಸ ದಂತಿರೋಣ
ನಾಲ್ಕು ಜನರಿಗೆ ಸಹಾಯ ಮಾ ಡುವ ಗುಣ ಬೆಳೆಸಿಕೊಳ್ಳೋಣ
ಆ ದೇವರು ಮೆಚ್ಚುವ ಹಾಗೆ ಬದುಕೋಣ.
✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments