* ಮೂಕಲೋಕದ ಭಾವನೆಗಳ ಸತ್ಯದರ್ಶನ*

 *ಮೂಕಲೋಕದ ಭಾವನೆಗಳ ಸತ್ಯದರ್ಶನ*



ಗೀತಾಚಂದ್ರಕಾವ್ಯ ನಾಮಕಿಂತ(ಚಂದ್ರು ಎಫ್ ಹವಳೇಮ್ಮನವರ)ಚೊಚ್ಚಲ ಕೃತಿ*ಮೂಕಲೋಕದ ಭಾವ* ನನ್ನ ಕೈಗೂ ಸೇರಿತು ಅದಕ್ಕೆ ನಾನು ಒಂಚೂರು ಓದು ಅನಿಸಿಕೆ ಬರೆಯುತ್ತಿರುವೆ.


ಪರಿಚಯ=ಹೂಟ್ಟೂರು ಸವಣೂರುತಾಲ್ಲೂಕಿನ ಮೇಳಾಗಟ್ಟಿಯ ಗಟ್ಟಿಗಂಡು ಅರಣ್ಯ ಅಧಿಕಾರಿ ಚಂದ್ರು ಸರ್ ರವರು ಅಣ್ಣ ಮತ್ತು ಸಹೋದರಿಯರ ಜವಾಬ್ದಾರಿಯಲ್ಲಿ ಶಾಲೆಯ ದಿನದಿಂದಲೆ ಬಹುಮುಖ ಪ್ರತಿಭೆಯಾಗಿ ಕ್ರೀಡೆ, ಚಿತ್ರಕಲೆ,ಗಾಯನ,ವಾಗ್ಮಿಯ ಕಲೆ ಸಾಹಿತ್ಯ  ಕಲೆ ರಚನೆಕಾರರಾದ ಅವರು ಹೈಸ್ಕೂಲ್ ಕಲಿವಾಗಲೆ ಸಂಪನ್ಮೂಲ ಭೋದನೆ ಫಲವಾಗಿ ಸಿರಿಗನ್ನಡ ರಾಜ್ಯಮಟ್ಟದ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಬೆಳ್ಳಿ ಪದಕ ವಿಜೇತರಾದ ಅವರು ಹಾವೇರಿ ವಿಭಾಗದ ಧುಂಡಸಿ ಅರಣ್ಯ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರು.ಯುವ ಬರಹಗಾರ್ತಿ ಪತ್ನಿ ಗೀತಾ ಚಂದ್ರುರವರಿಗೂ ಮಕ್ಕಳಿಗೂ ಪ್ರೇರಣೆಯಾಗಿ ಸಂಸಾರದ ಬಂಡಿ ಸಾಗಿಸುತ್ತಿರುವರು.


ಶ್ರೀ ಚಂದ್ರು ಎಫ್ ಹವಳೇಮ್ಮನವರ ಅರಣ್ಯ ಅಧಿಕಾರಿಯವರ


ಮೊ:7676741510


ನನಗೆ ತಿಳಿದಷ್ಟು ಅನಿಸಿಕೆ. ಮೂಕಲೋಕದ ಭಾವದಲ್ಲಿ ಕವನಗಳು ಮೂರು ವಿಧದಲ್ಲಿ ಬರುತ್ತವೆ.ಮೊದಲು ಕಾನನದ ಮರಗಿಡಗಳ ನೋವಿನ ಸಂಗತಿ ಓದಿದರೆ ಭಾವುಕರಾಗುವದು ಸ್ವಲ್ಪ ನಿಜ. ಏಕೆಂದರೆ? ಆ ಸನಿವೇಷಗಳು ನಮ್ಮಗಳ ಕೈಯಿಂದ ಆಗಿರುವ ಲಕ್ಷಣಗಳಿವೆ.

ಎರಡನೆಯ ಭಾಗ ಹರೆಯದ ವಯಸ್ಸಿನ ಹಾಸ್ಯಮಯ ಭಾವದಲ್ಲಿ ಕವನಗಳಾದರೆ.

ಮೂರನೆಯ ಭಾವದಲ್ಲಿ ಪ್ರೀತಿ ಮಮತೆ ತ್ಯಾಗಮಯ ಜೀವನ ವಾಸ್ತವನೊಳಗೊಂಡ ಅನುಭವದ ಭಾವನೆಗಳು ತುಂಬಿ ಓದುಗರ ಮನಗೆಲ್ಲುವ ಲಕ್ಷಣಗಳು ಖಂಡಿತವಾಗಿ ಇದೆ.

ಐ.ಪಿ.ಎಸ್.ಶ್ರೀ ರವಿ ಡಿ.ಚೆನ್ನವಣ್ಣವರ ಮುನ್ನುಡಿಯಲ್ಲಿ.

ಶ್ರೀ ಸತೀಶ ಕುಲಕರ್ಣಿಯರವರ ಆಶಯ ನುಡಿಗಳಲ್ಲಿ ಮೂಡಿದರೆ

ಗೌರವ ನುಡಿ ಯುವ ಬರಹಗಾರ್ತಿ ಗೀತಾ ರಾಮನಗೌಡ್ರರಿಂದಾದರೆ

ಬೆನ್ನುಡಿ ಡಾ .ನಾಗರಾಜ ಜಿ.ದ್ಯಾಮನಕೊಪ್ಪ ಪ್ರಾಚಾರ್ಯರು ಸಿಗ್ಗಾವಿ.ಯವರಿಂದ ಅತ್ಯುತಮವಾಗಿ ಮೂಡಿ ಬಂದಿದೆ ಕವನ ಸಂಕಲ.


ಊರಿಬಿಸಿಲಿನ ಕಾಡಲ್ಲಿ ಬೆಂಕಿಜ್ವಾಲೆ ಕಂಡಾಗ

ವನ್ಯಜೀವಿಗಳ ಆಕ್ರಂದನ ಕೇಳಿಸಿತೇ ಹೊರತು

ನನ್ನೂರ ಜಾತ್ರೆಯ ಸಡಗರ

ಕೇಳಿಸಲೇ ಇಲ್ಲ.


ಈ ನುಡಿ ಓದಿ ಅನಿಸಿದ್ದು ಹೀಗೆ.ಉಸಿರು ನೀಡುವ ಗಿಡಮರಗಳಿಗೆ ಬೆಂಕಿ ಬಿದ್ದು ದಗ ದಗ ಉರಿದು ರೋದಿಸುವ ವನ್ಯಜೀವಿಗಳ ಕೂಗು ಕೇಳಿ ಮರ ಮರಾ ಮರಗಿ ಕಾಡಿನತ್ತ ಓಡಿತು ಜೀವ.

ಬೆಂಕಿ ನಂದಿಸುವಾಗ ತಮಗಾದ ಸುಟ್ಟಗಾಯಗಳಾಗಲಿ, ಮೈಯಿಗೆ ಸಿಡಿದ ಕಿಡ್ಡಿಗಳಾಗಲಿ, ಕಾಲುಗಳಲ್ಲಿ ರಕ್ತ ಬರುತ್ತಿರುವದು ಲೆಕ್ಕಿಸದೆ,ರಂಬೆ ಕೊಂಬೆಗಳು ಸುಟ್ಟಿಕೊಂಡು ಮರಗಿಡಗಳು ನೋವೂಣ್ಣುವ ಭಾವನೆಗಳಿಗೆ ನೊಂದಿತು ಜೀವ.

ಒಂದು ದಿನದ ಜಾತ್ರೆ ಸಡಗರಕಲ್ಲ? ಎಂಬ ಅರಣ್ಯಾಧಿಕಾರಿಗಳ ನಿಸ್ವಾರ್ಥ ಕಾಯಕ ಮನದ ಭಾವನೆ ತಿಳಿಸುವ ಕವಿನುಡಿಗೆ ಸ್ಪಂದಿಸಲೆ ಬೇಕು.


ಹೆಗಲ ಮೇಲೆ ಜೋಕಾಲಿ ಕಟ್ಟಿ.

ಕೇಕೆ ಹಾಕಿ ಸಂಭ್ರಮಿಸಿ.

ಸರಿಯಾಗಿ ಊಟ ಮಾಡಿದ ನೀವು.

ಅಷ್ಟು ಖುಷಿ ಕೊಟ್ಟ ನನಗೆ 

ಒಂದು ಚರಿಗೆ ನೀರು ಕುಡಿಸಲಿಲ್ಲ.

ಕೆತ್ತಿದ ಹೆಗಲ ಮೇಲೆ ಕೈ ಸವರಿಸಿ

ಸಮಾಧಾನ ಮಾಡಲಿಲ್ಲ.


ನಮ್ಮ ಕಡೆ ನಾಗರ ಪಂಚಮಿ ಹಬ್ಬ ಬಂದರೆ ಸಾಕು ಮರಗಳಿಗೆ ಜೋಕಾಲಿ ಕಟ್ಟಿ ಆಡಿ ಖುಷಿಪಡುವ ಕ್ಷಣಗಳು ಬಾಲ್ಯದಿಂದಲೆ ಎಲ್ಲರಿಗೂ ಮರೆಯಲಾಗದ ಅನುಬಂಧವಾದರೆ

ಇಲ್ಲಿ ಕವಿ ಹೇಳುತ್ತಾರೆ ನಿಮ್ಮ ನಲಿವಿನ ಖಷಿ ಕೊಟ್ಟಿದ್ದು ಮರಗಳು ತಮ್ಮ ತೋಳುಗಳು ಚರ್ಮ ಕಿತ್ತು ಹೋದರು.ಪರವಾಗಿಲ್ಲ .ಆ ಮೂಕಭಾವದ ಜೀವಗಳ ಹೆಗಲ ಮೇಲೆ ಕೈಯಾಡಿಸಿ ಸಮಾಧಾನದಿಂದ ಒಂದು ಚರಿಗೆ ನೀರು ಹಾಕುವಷ್ಟು ಕೃತಜ್ಞತೆಯ ಭಾವ ನಿಮಗಿಲ್ಲವೆ ಎಂಬ ಪ್ರಶ್ನಾರ್ಥಕ ನುಡಿಗೆ ತೆಲೆಬಾಗಲೆ ಬೇಕು

ಎಲ್ಲರು ತಮ್ಮ ತಮ್ಮ ಕೆಲಸವಾಗುವರೆಗೆ ಮಾತ್ರ ಸಲಾಂ ಹೊಡಿತಾರೆ ಆಮೇಲೆ ನೀನಾರು ಅಂತಾರೆ ಇದು ವಾಸ್ತವ ಅಂತ ತಿಳಿಯಲೆ ಬೇಕು.


ನನ್ನನ್ನು ದೂಷಿಸಬೇಡಿ.

ನನಗೆ ನನ್ನ ಜಾಗ ತೊಚ್ಚುತ್ತಿಲ್ಲ.

ಹೀಗಾಗಿ ನಿಮ್ಮ ಮನೆಗೆ ಬಂದು ಬಿಟ್ಟೆ

ಕರೆ ಕಟ್ಟೆ ತುಂಬಿ ಬಿಟ್ಟೆ.


ಸೃಷ್ಟಿಯ ಮೊದಲು ಪಂಚಭೂತಗಳಲ್ಲಿ ನನಗು ನೆಲೆಕೊಟ್ಟುರಿವರು ಅದಕ್ಕೆ ನಮ್ಮೊಂದಿಗೆ ಗಂಗಾಮಾತೆಯ ವಾದ..ಹೇಗೆ ಅಂತ ತಿಳಿಯೋಣ ಬನ್ನಿ...

ಪ್ರವಾಹ ಬಂದು ನಮ್ಮ ಮನೆಗಳು ನಾಶಮಾಡಿತು ಎಂಬ ಅಪವಾದ ನನಗೇಕೆ?

ನಾನು ಬರುವದು ಹಳ್ಳ ಕೆರೆ ಹೊಂಡ ತುಂಬಿಸಲು. ಊರು ಉಪಕಾರಿಯಾಗಿ ಹೊರೆತು ನನ್ನ ಸ್ವಾರ್ಥಕಲ್ಲ.

ಒಂದು ವಾರ ನೀರಿಲ್ಲದೆ ಚಡಿಪಡಿಸುವ ನೀವುಗಳಾದರೆ?.

ನನ್ನನ್ನೇ ನಂಬಿದ ಸಕಲ ಜೀವಿಗಳು ಗೋಳು ಕೇಳುವವರಾರು

ಅದಕ್ಕೆ ಹೇಳುವೆ ನಿಮ್ಮ ಸ್ವಂತ ಬುದ್ಧಿಯಿಂದ ವಿಚಾರ ಮಾಡಿ ನನ್ನ ಜಾಗ ನನಗೆ ಬಿಟ್ಟು ಕೊಡಿ ಎಂಬ ಗಂಗಾಮಾತೆ ವಾದಕ್ಕೆ ನ್ಯಾಯ ಕೊಡಿಸುವ ಕವಿನುಡಿಯ ಆಶಯ ಯಶಸ್ವಿಯಾಗಲಿ ಎಂಬ ಕೋರಿಕೆ ಸರಕಾರಕ್ಕೆ ಮುಟ್ಟಲಿ ಎನ್ನುವೆ.


ನಾವು ಸದ್ಯದಲ್ಲೇ ದೂರು ನೀಡುವವರಿದ್ದೇವೆ.

ಸಂಪೂರ್ಣ ವಿವರಣೆಯೊಂದಿಗೆ.

ಸಂತಿ ಒಳಗ ನಿಂತ ಮಂದಿ ಕೇಳಿ

ದೂರಿನಲ್ಲಿ ನಿಮ್ಮದು ಹೆಸರಿದೆ.


ಅರಣ್ಯಜೀವಿಗಳ ದೂರು ಕೇಳಿದರೆ ನಮಗೆ ನಾಚಿಕೆ ಅನಿಸುತ್ತೆ .

ಒಬ್ಬಬಿಬ್ಬರದ ತಪ್ಪು ಅಲ್ಲ... ಸಂತಿ ಒಳಗ ನಿಂತ ಪ್ರತಿಯೊಬ್ಬರಿಗೆ ಅನಿವಸುತ್ತೆ.ನಮ್ಮ ಸಂಸ್ಕೃತಿ ಮರೆಯಲು ಕಾರಣವೇನು ಇರಬಹುದು,ಕೋಲಾಟದಿಂದ ಹಿಡಿದು ಜಂಗಮವಾಣಿ ಬಳಿಕೆಯಾಗವರಿಗೂ,ಮಾಡುತ್ತಿರುವ ತಪ್ಪುಗಳ ಸಾಕ್ಷಿ ಕೊಡುವ ದೂರುಗಳ ವಾಸ್ತವಕ್ಕೆ ಕೈ ಕಟ್ಟಿ ಕಟಕಟೆಯಲ್ಲಿ ನಿಂತು ಉಹಿಸಬೇಕು ಅನಿಸುತ್ತೆ.


ನಿನ್ನ ಮೈಕಟ್ಟು ಕೆತ್ತಲು

ದೇವರು ಆಗ್ಯಾನ ಬಡಗಿ

ಹಂಸ ನಾಚೈತಿ

ನಿನ್ನ ರೂಪ ರಾಶಿಗಿ.


ಹೆಣ್ಣಿನ ಸೌಂದರ್ಯಕ್ಕೆ ಸೋತ ಕವಿ ಬಣಿಸುವ ಪರಿ ಹಾಸ್ಯಕರವಾದರು ಓದಬೇಕು ಅನಿಸುತ್ತೆ

ಹೆಣ್ಣಿನ ರೂಪರಾಶಿ ಕೆತ್ತಲು ದೇವರು ಕೂಡ ಬಡಗಿ ಉಳಿ ಹಿಡಿದು ನಿಂತಿರುವನೆಂದರೆ ಇನ್ನು ಮುಂದೆ‌.ಓದುತ್ತ ಹೋದಂತೆ ಹದಿ ಹರೆಯದ ವಯಸ್ಸಿನಾಟ ಕಣ್ಣಮುಂದೆ ಬಂದಂತಾಗುವದು ನಿಜ ಅನಿಸುತ್ತೆ.


ನಾಚದಿರು ಮುಗ್ಧೆ ತೆಲೆಬಾಗಿ

ನಿನ್ನ ಮೈಸಿರಿ ಮುಟ್ಟಲಾರೆ ಅವಸರದಿ.

ನೀ ಜೊತೆಗಿದ್ದರೆ ಸಾಕು ರೋಷದಿ

ನಾ ಗೆಲ್ಲುವೆ ಗರಡಿ ಅಂಗಳದಿ


ಅವಳಿಗೆ ಅವನೆದುರು ಬಂದರೆ ಆಗುತ್ತೆ ನಾಚಿಕೆ. 

ಅವನಿಗೆ ಮುಟ್ಟುವಾಸೆ ಇದ್ದರು ಆಗುತ್ತೆ ಅಂಜಿಕೆ

ಜೋತೆ ನಿಂತರೆ ಸಾಕು ಅವನಿಗೆ ಬರುತ್ತೆ ಎಲ್ಲಿಲದ ಪೌರಷ 

ಎತ್ತಿ ಎತ್ತಿ ತೋರಿಸಿದ್ದೆ ತೋರಿಸುವದು ಜಟ್ಟಿ ಹಂಗೆ ತೊಡೆ ತಟ್ಟಿ ಎನ್ನುವ ಹಾಸ್ಯ ಕವನಕ್ಕೆ ನಗಲೆ ಬೇಕು ಅನಿಸುತ್ತೆ.



ನಾವು ಬಣ್ಣ ಬದಲಾಯಿಸಲಾರವು.

ಏಕೆಂದರೆ ನಮಗೆ ಹಗಲು -ರಾತ್ರಿಗೆ

ಇರುವುದೊಂದೇ ಬಟ್ಟೆ.


ಅವರಿಗೆ ಬಣ್ಣ ಬಟ್ಟೆ ಇರುವದೊಂದೆ ರಾತ್ರಿ ಹಗಲು ಒಂದೆ ಯಾವದರ ಮರಗಿಡಗಳ ಕೆಳಗೆ ನಿದ್ರೆ ಮಾಡುತ್ತಾರೋ ಅದೆ ಅವರ ಅರಮನೆ.ಅವರಂತೆ ಇರಲು ಯಾರು ಬಯಸುವದಿಲ್ಲ.

ದುಡ್ಡಿದ್ದವರು, ಇಲ್ಲದೆ ಇರೋವವರು,ಸಮಯಕ್ಕೆ ತಕ್ಕಂತೆ ಬಣ್ಣ ಬಟ್ಟೆ ಬದಲಾಸುವ ಜನಗಳ ಹೋಲಿಕೆ ಅವರಗಿಲ್ಲ.

ಉಂಡು ಬಿಸಾಕಿದ ಅನ್ನ ತಿಂದು ಯಾರ ಹಂಗಿಲ್ಲದೆ ಬದುಕುವ ಸ್ವಾಭಿಮಾನಿಗಳು ಚಿಂದಿ ಆಯುವ ಜನಗಳು ಎಂಬ ಕವಿಕಣ್ಣಿಗೆ ಕಂಡಿದ್ದು ತೋರಿಸುವ ಮಹಾನಭಾವರ ಸತ್ಯದರ್ಶನ ಚಂದವಿದೆ.


ಊರೂರು ತಿರುಗಿ ಕನ್ಯೆ ವಿಚಾರಿಸಿ

ಮದುವೆ ಮಾಡಬೇಕು.

ಏಕೆಂದರೆ ತನ್ನ ಮಡಿಲು ಮಗನನ್ನು

ಸೊಸೆ ಮಡಿಲಿಗೆ ಹಾಕುವ ತ್ಯಾಗಮಯಿ ಅಲ್ಲವೇ.


ಹೆಣ್ಣು ಜನ್ಮಕ್ಕೆ ಇರುವ ಕಾಳಜಿ, ಮಮತೆ, ಪ್ರೀತಿ,ಸಂಬಂಧ,ತ್ಯಾಗಮಯ ಬಸೆಯುವ ಗುಣ ಇರುವದು ತಾಯಿಗೆ ಮಾತ್ರ.

ಹುಟ್ಟಿನಿಂದ ಹಿಡಿದು ದೊಡ್ಡವರಾಗುವ ತನಕ ಗಂಡು ಮಕ್ಕಳನ್ನು ಮಗುವಂತೆ ಸಾಕುವ ಸೊಸೆಯ ಮಡಿಲಿಗೆ ಹಾಕುವ ತನಕ

ತ್ಯಾಗದ ಬದುಕು ನಡೆಸುತ್ತಾಳೆ ಹೆಣ್ಣು ಅನ್ನುವ  ಸತ್ಯವಾಣಿಗೆ ನಮಿಸುತ್ತ.


ಕಾಯಕದ ದಾಹ,ದಿಂದ ಆರಂಭಗೊಂಡು,ಬಡವರ ಪರವಾಗಿ,ರೈತರ ಪರವಾಗಿ, ಮೂಕ ಜೀವಗಳ ವಿಸ್ಮಯಗಳ,ಅನುಭವದ ನುಡಿಮುತ್ತುಗಳು ಪೊಣಿಸುತ್ತ.ಗೌಡರ ಮಗಳ ಮೇಲೆ ಹಾಡು ಬರಿದು ಹಾಡಿ ಕುಣಿಯುತ್ತ ತಮ್ಮ ಅಮೂಲ್ಯ ಐವತೇಳು ಕವನಗಳು ಕನ್ನಡತಾಯಿ ಸಾಹಿತ್ಯ ಪ್ರೀತಿಯ ಓದುಗರಿಗೆ *ಮೂಕಲೋಕದ ಭಾವ* ಸರ್ಮಪಿಸಿದಕ್ಕೆ ಧನ್ಯವಾದಗಳು ತಿಳಿಸುತ್ತ‌.

ಕೊಂಡು ಓದುವ ಹೃದಯವಂತರು ಓದಿ ಹಾರೈಸಿ ಎನ್ನುತ್ತ.

ಅರಣ್ಯಾಧಿಕಾರಿ ಚಂದ್ರುಹವಳೇಮ್ಮನವರ ಕಾಯಕ ಸೇವೆ ಸಲ್ಲಿಸುತ್ತಲೆ ಸಾಹಿತ್ಯ ಕೃಷಿ ಹೆಮ್ಮರವಾಗಿ ಉಳಿಸಿ ಬೆಳಿಸಿರಿ ಎನ್ನುತ್ತ  ನನ್ನ ಓದಿಗೆ ಪೂರ್ಣ ವಿರಾಮ ನೀಡುವೆ ವಂದನೆಗಳು. 



                        ಹವ್ಯಾಸಿ ಕವಿ

               ಸಂತೋಷ ವಿ.ಪಿಶೆ.ಹಾವೇರಿ

Image Description

Post a Comment

0 Comments