*ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು*

 *ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು*



ರಾಯಬಾಗ: ಬೆಳಗಾವಿಯಲ್ಲಿ  ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ "ಸುವರ್ಣ ಕರ್ನಾಟಕ" ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಪ್ರಶಸ್ತಿ ಸ್ವೀಕರಿಸಿದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರು ಮಾಜಿ ರಾಜ್ಯಸಭಾ ಸದಸ್ಯರಾದ ಶರಣ ಶ್ರೀ ಡಾ.ಪ್ರಭಾಕರ ಬ.ಕೋರೆ ಅವರನ್ನು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹಾರೂಗೇರಿ ಪಟ್ಟಣದ ಪ್ರತಿಷ್ಠಿತ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರು ನಾಡಿನ ಖ್ಯಾತ ಸಾಹಿತಿ,ರಸ ವಿಮರ್ಶಕ ಡಾ.ವಿ.ಎಸ್.ಮಾಳಿ ಅವರನ್ನು ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ  ಗೌರವಾಧ್ಯಕ್ಷರು,ಸಾಹಿತಿ ಡಾ.ಜಯವೀರ ಎ.ಕೆ.ಅಧ್ಯಕ್ಷ ಕು.ಅಮರ ಕಾಂಬಳೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಎಂ.ಪಾಟೀಲ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ  ಶ್ರೀ ಟಿ.ಎಸ್.ವಂಟಗೂಡಿ, ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಪ್ರೊ.ಶಿವಾನಂದ ಬೆಳಕೂಡ, ಅಧ್ಯಕ್ಷ ಶ್ರೀಶೈಲ ಶಿರೂರ,  ಹಿರಿಯ ಸಾಹಿತಿ ಪ್ರೊ.ಬಿ ಎ.ಜಂಬಗಿ  ಮಕ್ಕಳ ಸಾಹಿತಿ ಡಾ.ಎಲ್.ಎಸ್.ಚೌರಿ, ಸಾಹಿತಿಗಳಾದ ಶ್ರೀ ಸುಖದೇವ ಕಾಂಬಳೆ, ಡಾ.ವಿಲಾಸ ಕಾಂಬಳೆ ಮಹಿಳಾ ಕವಿಯಿತ್ರಿಯರಾದ ಡಾ.ರತ್ನಮ್ಮ ಬಾಳಪ್ಪನವರ,ಶ್ರೀಮತಿ ಲತಾ ಹುದ್ದಾರ, ಉದಯೋನ್ಮುಖ ಚುಟುಕು ಕವಿಗಳಾದ ಪ್ರೊ.ಎಲ್.ಎಸ್.ವಂಟಮೂರೆ ಶ್ರೀ ಜ್ಯೋತಿ ರುಪ್ಪಾಳೆ ಮತ್ತಿತರ ತಾಲ್ಲೂಕಿನ ಹಿರಿಯ ಕಿರಿಯ ಸಾಹಿತಿ ಕಲಾವಿದರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ


*ವರದಿ:ಡಾ.ಜಯವೀರ ಎ.ಕೆ.*

       *ಖೇಮಲಾಪುರ*

Image Description

Post a Comment

0 Comments