*ಸಭಾಪತಿ ಬಸವರಾಜ ಹೊರಟ್ಟಿ ಅವರ ಹೇಳಿಕೆ ಸ್ವಾಗತಾರ್ಹ:*
*ಡಾ.ಜಯವೀರ ಎ.ಕೆ.*
ದಾವಣಗೆರೆಯಲ್ಲಿ ನಡೆದ ಪತ್ರಕರ್ತರ ಸಮ್ಮೇಳನದಲ್ಲಿ "ವಿಧಾನ ಪರಿಷತ್ತಿಗೆ ಪತ್ರಕರ್ತರ ನಾಮನಿರ್ದೇಶನಕ್ಕೆ ಒತ್ತಾಯ ಮಾಡಿರುವ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಭಿಮತ ನಿಜಕ್ಕೂ ಸ್ವಾಗತಾರ್ಹ ಹಾಗೂ ಔಚಿತ್ಯಪೂರ್ಣವಾಗಿದೆ ಎಂದು ಕನ್ನಡ ಪ್ರಾಧ್ಯಾಪಕರು ಪತ್ರಕರ್ತರಾದ ಡಾ.ಜಯವೀರ ಎ.ಕೆ.ಸ್ವಾಗತಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತರೆ ಕ್ಷೇತ್ರಗಳಂತೆ ಪತ್ರಿಕಾ ಕ್ಷೇತ್ರಕ್ಕೂ ಅಷ್ಟೇ ಮಹತ್ವ ಹಾಗೂ ವಿಶಿಷ್ಟ ಮೌಲ್ಯ ಇದೆ. ಅನುಭವಿ ಹಾಗೂ ಪ್ರಬುದ್ಧ ಪತ್ರಕರ್ತರ ಸೇವೆ ಪಡೆದುಕೊಳ್ಳುವ ನಿಟ್ಟಿನಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಈ ಗಮನಾರ್ಹ ಹೇಳಿಕೆ ನಿಜಕ್ಕೂ ಚಿಂತನಾರ್ಹ.ಈ ನಿಟ್ಟಿನಲ್ಲಿ ಸಿ.ಎಂ.ಸಿದ್ದರಾಮಯ್ಯನವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರಮುಖೇನ ಒತ್ತಾಯಿಸಿರುವುದು ನಿಜಕ್ಕೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹಂಬಲಿಸುವ ಪತ್ರಕರ್ತರ ಘನತೆ ಮೌಲ್ಯ ಎತ್ತಿಹಿಡಿದಂತಾಗಿದೆ ಎಂದರು.
*ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments