🌹ಕವನ 🌹
🌸 ನಿನಾವೀರ್ಭವಿಸು ಬಾ ರಾಮ 🌸
ಅರ್ಧ ಸಹಸ್ರಮಾನದ ವನವಾಸ ಮುಗಿದಿದೆ ರಾಮ
ಸಜ್ಜನರ ಸಂಕಲ್ಪ ಸಿದ್ಧಿಯಾಗಿದೆ ರಾಮ
ನೀನವಧಪುರಿಯಲ್ಲಿ ವಿರಾಜಮಾನನಾಗಿಹೆ ಬಾಲರಾಮ
ನಿನ್ನ ನೋಡಲು ಕಂಗಳೆರಡು ಸಾಲದಾಯ್ತು ರಾಮಾ
ನಿನ್ನ ಕಂಡು ಪಾವನವಾದ ಜೀವಕಿನ್ನೂ ಕನಸಿಹಿದು ರಾಮ
ದಯೆಯಿರದ ದಾನವರ ನಡುವಲ್ಲಿ ಕುಳಿತು ರಾಮರಾಜ್ಯದ ಕನಸ ಕಾಣುತಿರುವೆ ರಾಮ
ಶತಕಂಠ ರಾವಣರು ನಾರಿಯರ ಕೆಣಕಿಹರು ರಾಮ
ಬರಿ ಪೊಳ್ಳು ಹುಸಿ ಸುಳ್ಳು ಮೈ ತುಂಬ ಮುಳ್ಳು ಚುಚ್ಚಿಹರು ರಾಮ
ಆಮಿಷಗಳಾರ್ಭಟವು ರುದಿರ ನರ್ತನ ಮಾಡಿಹುದು ರಾಮ
ಆದರೂ ಛಲ ಬಿಡೆನು ಕುಳಿತಲ್ಲಿ ನಿಂತಲ್ಲಿ ನಿನ್ನ ಸ್ಮರಿಸುವೆನು ರಾಮ
ಶಬರಿಯಂತೆ ಕಾಯುವೆನು ನಿನ್ನಾದರ್ಶ ಬಯಸುವೆನು ರಾಮ
ಕಲಿಯುಗದ ರಾಮರಿಗೆ, ರಾಮದಾಸ ಹನುಮರಿಗೆ ಶಕ್ತಿ ಕೊಡು ರಾಮ
ಮತಾಂಧ ರಕ್ಕಸರ ಹುಟ್ಟಡಗಿಸು ಬಾ ರಾಮ
ನಿನ್ನನೇ ನಂಬಿಹೆನು ಸೆರಗೊಡ್ಡಿ ಬೇಡುವೆನು ಅಧರ್ಮವನಳಿಸಿ ಧರ್ಮವನುಳಿಸಲು ನೀನಾವಿರ್ಭವಿಸು ಬಾ ರಾಮ ರಾಮ
✍️ ನಾಡಿಗ್ ವಿಜಯಲಕ್ಷ್ಮಿ ಮಂಜುನಾಥ್ ಕಡೂರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments