ಶೀರ್ಷಿಕೆ : *ಮನದ ಮಾತು*

 🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏


ಶೀರ್ಷಿಕೆ : *ಮನದ ಮಾತು*



ಯಾವ ಬಂಧನದ ಹಂಗಿರಲಿಲ್ಲ

ಸೊಗಸಾಗಿ ಹಕ್ಕಿ ಹಾಗೆ ಇದ್ದೆನಲ್ಲ

ಅದ್ಯಾವ ಮಾಯೆ ಮುಸುಕಿದೆ ಯಲ್ಲ

ಮನದ ಮಾತು ಹೇಳಿ ಕೊಳ್ಳಲು ಆಗುತ್ತಿಲ್ಲ


ಅಂದು ನನ್ನ ಕಂಡೊಡನೆಯೇ

ಮೊದಲ ನೋಟದ ಪ್ರೇಮ ವಾದೋಡೆನೆಯೇ

ನನ್ನಲ್ಲಿನ ಅವಳು ಜಾಗೃತ ವಾದಂತೆಯೇ

ಮೋಹದ ಮಾಯೆ ಆವರಿಸಿ ಕೊಂಡೊಡೊನೆಯೇ


ನೀ ಮಾಡಿದ ತುಂಟತನದ ಚೇಷ್ಟೆಯೋ

ಬಿಡದೆ ನನ್ನನ್ನು ಬಾಹು ಬoಧನ ದಲ್ಲಿ ಬಂದಿಸಿದೆಯೋ

ಬೇಡವೆಂದರೂ ತುಟಿಗೆ ನಿನ್ನ ಮುದ್ರೆ ಯೊತ್ತಿದೆಯೋ

ಆ ಎಲ್ಲಾ ಕ್ಷಣಗಳು ಕನಸoತೆ ಕನವರಿಕೆಯಾಗುತ್ತಿದೆಯೋ


ಅಂತೂ ನಾನು ನಾನಾಗಿ ಉಳಿದಿಲ್ಲ

ಮನವ ಘಾಸಿ ಮಾಡಿ ಹೋಗಿ ರುವೆಯಲ್ಲ

ಯಾರ ಬಳಿ ಹೇಳಲಿ ಈ ತೊಳ ಲಾಟವೆಲ್ಲ

ಮನದ ಮಾತು ಯಾರಿಗೂ ಹೇಳದಾದೆನಲ್ಲ


✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments