*ಭಾವೈಕ್ಯತೆಯ ಸಂಗಮ*
ಜಾತಿ ಮತ ಧರ್ಮಗಳ ಗಡಿದಾಡಿದ ಬಂಧವಿದು
ಜಾತ್ಯಾತೀತತೆಯ ಬಿಂಬಿಸುವ ಮಾದರಿ ಸಚಿತ್ರವಿದು
ಸಮಾಜಕ್ಕೆ ಸಂದೇಶ ಸಾರುವ ನಿದರ್ಶನ
ಸುಮಧುರ ಮೈತ್ರಿ ಬೆಸುಗೆಯ ಅನಾವರಣ
ಮಕ್ಕಳಲ್ಲಿ ಇಲ್ಲ ತಾರತಮ್ಯದ ಸಣ್ಣತನ
ಮಾನವ ನೀ ಕಲಿತು ತೋರು ದೊಡ್ಡತನ
ಮನುಜಮತ ವಿಶ್ವಪಥ ಎಂದ ಮಹಾಕವಿಯು
ಸರ್ವೋದಯದ ಕಲ್ಪನೆಯೇ ಸುಂದರ ಪ್ರಭೆಯು
ಐಕ್ಯತೆ ಸಮಗ್ರತೆ ಒಗ್ಗಟ್ಟು ಎಲ್ಲರ ಧ್ಯೇಯ ಮಂತ್ರವಾಗಲಿ
ಪರಸ್ಪರ ಪ್ರೀತಿ ಸ್ನೇಹ ಅನುಬಂಧ ವೃದ್ಧಿಗೊಳ್ಳಲಿ
ಧರ್ಮದ ಹೆಸರಲ್ಲಿ ಧಂಗೆ ಏಳದಿರಿ
ಒಡೆದು ಆಳುವ ನೀತಿಗೆ ಬಲಿಯಾಗದಿರಿ
ಅಂಧರಂತೆ ನಂಬದಿರಿ ಹೇಳಿದ್ದನ್ನೆಲ್ಲ ಜೋಪಾನ
ಹಿತಶತೃಗಳಿಂದಲೇ ಉಪಟಳ ಬೇಡ ಅನುಮಾನ
ಶಾಂತಿಯ ಕದಡಿ ಅಶಾಂತಿಯ ವಾತಾವರಣ ಸೃಷ್ಟಿಸುವರು
ಸರೋವರಕ್ಕೆ ಕಲ್ಲೆಸೆದು ರಾಡಿ ಮಾಡುವರು
ದೇವನೊಬ್ಬ ನಾಮ ಹಲವು ಇದು ಜಗಜ್ಜಾಹಿರ
ವಿವಿಧತೆಯಲ್ಲಿ ಏಕತೆ ಸುಸಂಸ್ಕೃತಿಯ ಸಂಸ್ಕಾರ
ಪರಸ್ಪರ ಸಹೋದರರಂತೆ ಕಲೆತು ಜೀವಿಸಿರಿ
ಕಹಿಘಟನೆಗಳ ಮರೆತು ಒಂದಾಗಿ ಒಗ್ಗಟ್ಟಾಗಿ ಬಾಳಿರಿ
ಗೀತಾ ಲೋಕೇಶ್.ಕಲ್ಲೂರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments