ಬಾಗಲಕೋಟೆ : ಫೆಬ್ರವರಿ 2 : ಸೈನಿಕರು ದೇಶದ ಪ್ರಮುಖ ಆಸ್ತಿ : ರಾಷ್ಟ್ರ ರಕ್ಷಣೆಯ ಕಾವಲುದಾರರು *ಹವಾಲ್ದಾರ್ ವೇಮನಾ ರಾಮಚಂದ್ರ ಹಳೆಮನಿ *

 ಬಾಗಲಕೋಟೆ ಫೆಬ್ರವರಿ 2 : ಸೈನಿಕರು ದೇಶದ ಪ್ರಮುಖ ಆಸ್ತಿ ಅವರು ರಾಷ್ಟ್ರ ರಕ್ಷಣೆಯ ಕಾವಲುದಾರರು ಎಂತಹ  ಸಂದರ್ಭದಲ್ಲೂ ಅವರು ದೇಶದ ಪ್ರಜೆಗಳನ್ನು ರಕ್ಷಣೆ


ಮಾಡುವಂತಹ ರಕ್ಷಕರು ಎಂದು ಹವಾಲ್ದಾರ್ ವೇಮನಾ  ರಾಮಚಂದ್ರ ಹಳೆಮನೆಯವರು ಅಭಿಪ್ರಾಯಪಟ್ಟರು.

 ಅವರು ಇಂದು ನಗರದ ರೈಲ್ವೆ ಸ್ಟೇಷನ್ ಸಭಾಂಗಣದಲ್ಲಿ ಬಾಗಲಕೋಟೆ ಜಿಲ್ಲಾ ಮಾಜಿ ಸೈನಿಕರು ಮತ್ತು ಹಳೆಮನೆ ಗೆಳೆಯರ ಬಳಗ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

 ಭಾರತ ಸೇನೆಯಲ್ಲಿ ಎರಡು ಡಜನ್ ವರ್ಷಗಳು ಅಂದರೆ 24 ವರ್ಷಗಳು ಸೇವೆ ಸಲ್ಲಿಸಿದ್ದು ಭಾರತ ಮಾತೆಗೆ ನಾನು ಸಲ್ಲಿಸಿದ ಒಂದು ಚಿಕ್ಕ ಪ್ರಣಾಮ ಎಂದು ಅವರು ತಿಳಿಸಿದರು.

 ಈ ದಿನಗಳಲ್ಲಿ ಮನೆಗೊಬ್ಬರು ಸೇನೆಗೆ ಸೇರಬೇಕು. ಸೇರಿದರೆ ನಾವು ತಂದೆ ತಾಯಿ ಮತ್ತು ಗುರುಗಳ ಮತ್ತು ದೇಶದ ಋಣ ತೀರಿಸಿದಂತಾಗುತ್ತದೆ. ಹಾಗಾಗಿ ನಾನು ಸೇನೆಗೆ ಸೇರಿ ಅಲ್ಲಿ ಸೇವೆ ಸಲ್ಲಿಸಿದ್ದು  ನನ್ನ ಪೂರ್ವ ಜನ್ಮದ ಪುಣ್ಯ ಎಂದು ಅವರು ಭಾವುಕರಾಗಿ ನುಡಿದರು.

 24 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ರೈಲ್ವೆ ಮೂಲಕ ಬಾಗಲಕೋಟೆ ನಗರಕ್ಕೆ ಆಗಮಿಸಿದ  ಹವಲ್ದಾರ ವೇಮನ ರಾಮಚಂದ್ರ ಹಳೆಮನೆ ಅವರನ್ನು ಸ್ವಾಗತಿಸಿದ ಅವರ ಗೆಳೆಯರ ಬಳಗ ಅಭಿನಂದನಾ  ಸಮಾರಂಭವನ್ನು ಏರ್ಪಡಿಸಿತ್ತು ನೂರಾರು ಜನ ಅವರ  ಗೆಳೆಯರು ಬಂಧು ಬಳಗದವರು ಮಾಜಿ ಸೈನಿಕರು ಮತ್ತು ಸೈನಿಕರ ಅಭಿಮಾನಿ ಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶ್ರೀ ವಿಶ್ವನಾಥ ಸಿಂಹಾಸನ ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ ವಂದನಾರ್ಪಣೆ ಮಾಡಿ ಕಾರ್ಯಕ್ರಮ ನಿರೂಪಿಸಿದರು.

ವರದಿ :ಡಾ. ವಿಲಾಸ ಕಾಂಬಳೆ

ಹಾರೂಗೇರಿ 

Image Description

Post a Comment

0 Comments