*ತುಳಿತಕ್ಕೊಳಗಾದ ಮಹಿಳೆಯರು ಮತ್ತು ದಮನಿತರನ್ನು ಉದ್ಧರಿಸಿದ್ದು ಸಾವಿತ್ರಿಬಾಯಿ ಫುಲೆ: ವೈಚಾರಿಕ ಕವಿ ಸಾತ್ಮಾರ*




(ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಭಾಭವನದಲ್ಲಿ ೨೯ ಜನವರಿ ೨೦೨೪ರಂದು ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಶೈಕ್ಷಣಿಕ ಮತ್ತು ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಕಂಡಿತು)


*ತುಳಿತಕ್ಕೊಳಗಾದ ಮಹಿಳೆಯರು ಮತ್ತು ದಮನಿತರನ್ನು ಉದ್ಧರಿಸಿದ್ದು ಸಾವಿತ್ರಿಬಾಯಿ ಫುಲೆ: ವೈಚಾರಿಕ ಕವಿ ಸಾತ್ಮಾರ*


                      ಕರ್ನಾಟಕ ರಾಜ್ಯ ಎಸ್ ಸಿ / ಎಸ್ ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವದ್ಧಿ ಸಂಘ ಹುಬ್ಬಳ್ಳಿ ಶಹರ ಘಟಕ ತಾಲೂಕಾ ಶೈಕ್ಷಣಿಕ ಹಾಗೂ ಸಾಹಿತ್ಯ ಸೆಮ್ಮೇಳನ ದಿನಾಂಕ 29 -1-24 ರ ಸೋಮವಾರ ಮಂಜಾನೆ 11 ಗಂಟೆಗೆ ಹುಬ್ಬಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಭಾಭವನದಲ್ಲಿ ಮಾತೆ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನಾಚರಣೆ ಹಾಗೂ ಆದರ್ಶ ಶಿಕ್ಷಕ್ಷಿಯವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ವೈಚಾರಿಕ ಕವಿಗೋಷ್ಟಿ ಆಯೋಜಿಸಲಾಗಿತ್ತು. ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ. ಸಿಯವರು ಪ್ರಬುದ್ಧ ಪೂರ್ಣ - ಮೌಲಿಕ ಉಪನ್ಯಾಸ ನೀಡುವ ಮೂಲಕ ಸಮಾನತೆ, ವೈಚಾರಿಕತೆಯ ಬೀಜ ಬಿತ್ತಿದರು. ಮುಖ್ಯ ಅತಿಥಿಗಳು ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಪ್ಪ ಗೌಡ್ರು ಮಾತನಾಡುತ್ತ; ಸಂವಿಧಾನದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸಾವಿತ್ರಿಬಾಯಿವರ ಸತ್ಯ ಶೋಧನಾ ಸಂದೇಶಗಳನ್ನು ಅಳವಡಿಸಿದ್ದರಿಂದ ಇಂದು ಮಹಿಳೆಯರು ಸಬಲರಾಗಿದ್ದಾರೆ. ಹಾಗಾಗಿ ಅವರು ಸದಾ ಸ್ಮರಣಿರೆಂದು ನುಡಿದರು. ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮೆಕ್ಕನವರ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ. ಎಸ್. ಶಿವಳ್ಳಿಮಠ ವೇದಿಕೆಯಲ್ಲಿದ್ದರು.


                  ಕನ್ನಡಪ್ರಭ ಸುವರ್ಣ ನ್ಯೂಸ್ ಉತ್ತರ ಕರ್ನಾಟಕ ಮುಖ್ಯಸ್ಥರಾದ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿತ್ತ; ಮಾತೆ ಸಾವಿತ್ರಿ ಬಾಯಿ ಫುಲೆಯವ ಜಯಂತಿಯನ್ನು ಮಾಡಿ ಅವರ ಕೊಡುಗೆಯನ್ನು ಸ್ಮರಿಸುತ್ತಿರುವುದು ಆದರ್ಶನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್. ಸಿ. ಎಸ್. ಟಿ ನೌಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಎಚ್. ಭಜಂತ್ರಿ, ಜಿಲ್ಲಾ ಅಧ್ಯಕ್ಷರಾದ  ವಾಯ್. ಎಸ್. ಶೇರೆವಾಡ, ಕ. ರಾ. ಪ್ರಾ ಶಾಲಾ ಶಿಕ್ಷಕ ಸಂಘದ  ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷರಾದ  ಎಂ. ಎಚ್. ಜಂಗಳಿ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ  ಎಂ. ಯು. ಶಿರಹಟ್ಟಿ, ಪ. ಪಂ. ನೌಕರ ಸಂಘದ ತಾಲ್ಲೂಕು ಅಧ್ಯಕ್ಷತಾದ ಜಿ. ಎನ್. ಕುಬಿಹಾಳ, ಜಾನಪದ ಕಲಾವಿದರಾದ ಸಿದ್ದಪ್ಪ ಬಿದರಿ, ಆರ್, ಎಚ್. ಡೊಂಬರ್, ಲಲಿತಾ ಕೊಪ್ಪದ ವಹಿಸಿದ್ದರು. ಸರ್ವಾಧ್ಯಕ್ಷತೆಯನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಹೇಮಂತ್ ಕುಂದರಗಿ ವಹಿಸಿದ್ದರು.  


                    ಮಧ್ಯಾನ್ಹ ೦೩ ಗಂಟೆಗೆ ನಡೆದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ, ಮಹಾತ್ಮಾ ಜ್ಯೋತಿ ಬಾ ಫುಲೆ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ವಿಚಾರಧಾರೆ ಕುರಿತು ಸಮಾನತೆ ಮತ್ತು ವೈಚಾರಿಕತೆ ವಿಷಯಾಧಾರಿತ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ವೈಚಾರಿಕ ಸಾಹಿತಿ, ಸಂಸ್ಕೃತಿ ಚಿಂತಕರಾದ ನಿವೃತ್ತಿ ಪ್ರಾಧ್ಯಾಪಕರಾದ ಶಂಕರಗೌಡ ಸಾತ್ಮಾರವರು ಅಪರೂಪದ ಕವಿಗೋಷ್ಟಿ, ಸತ್ಯ ಸಂಧತೆಯನ್ನು ಲೋಕಕ್ಕೆ ತಿಳಿಸುವ ಕಾರ್ಯವನ್ನು ಮಾಡಿದ ಶಿಕ್ಷಕರ ಸಂಘಟನೆಯ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸುತ್ತ; ಪೌರೋಹಿತ್ಯ ವರ್ಗದ ಗರ್ವ ಅಡಗಿಸಿ, ಸಮಾಜದಲ್ಲಿ ಅಬಲೆಯರು ಎಂದು ಹಿಂಸಿಸಲ್ಪಟ್ಟ ಮಹಿಳೆಯಲ್ಲಿ ಅಕ್ಷರ ಜ್ಯೋತಿಯ ಮೂಲಕ ಆತ್ಮಾಭಿಮಾನ ಬೆಳಗಿದ ಮಾಹಾಮಾತೆ ಸಾವಿತ್ರಿ ಬಾಯಿ ಕೊಡುಗೆ ಅಮೋಘವಾಗಿದೆ. ಯಾವುದೆ ನೆರವು ಇಲ್ಲದ ಆ ದಿನಮಾನಗಳಲ್ಲಿಯೇ ದಮನಿತರನ್ನು ಒಂದೆಡೆ ಸೇರಿಸಿ ಊಟ, ಶಿಕ್ಷಣ, ವಸತಿ ಕಲ್ಪಿಸಿ ಅವರ ಬಾಳನ್ನು ಬೆಳಗಿದ ತಾಯಿ ಸಾವಿತ್ರಿ ಫುಲೆ ಮತ್ತು ಅವರ ಮನೆಯವರಾದ ಜ್ಯೋತಿ ರಾವ್ ಫುಲೆಯರ ಸಾಮಾಜಿಕ ಸಮಾನತೆಯ ಕಾರ್ಯದ ಫಲವಾಗಿ ಇಂದು ತಳ ಸಮೂದಾಯದವರು ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಅವರ ಆಶಯಗಳನ್ನು ಸಂವಿಧಾನದಲ್ಲಿ ಅಳವಡಿಸಿ ಸಾಮಾಜಿ ನ್ಯಾಯ ಒದಗಿಸುವಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಚಿರ ಸ್ಮರಣೆಯ ಕೆಲಸ ಮಾಡಿದ್ದಾರೆ ಎಂದರು.


                  ಹಿರಿಯ ಕವಯತ್ರಿ ಸಂಧ್ಯಾ ದೀಕ್ಷಿತರವರು 'ಕರ್ಮಯೋಗಿನಿ' ಕವಿತೆ ವಾಚಿಸಿ ಚಾಲನೆ ನೀಡಿದರು. ಗಜಲ್ ಸಾಹಿತ್ಯ ರಚನೆಯನ್ನು ವಿಶೇಷ ಸಾಧನೆ ಮಾಡಿರುವ ಶಿಕ್ಷಕಿ ಕವಯತ್ರಿ ನಿರ್ಮಲಾ ಶೆಟ್ಟರ್ ಸಾಮಾಜಿಕ ಸಮಾನತೆಗೆ ಜ್ಯೋತಿ ಬಾ ಮ, ಸಾವಿತ್ರಿ ಬಾಯಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಕೊಡುಗೆ ಋಣವನ್ನು ನನ್ನಿಂದ ತೀರಸಲಾಗದು ಎಂದು ಹೇಳುತ್ತ ತಮ್ಮ ಸ್ವರಚಿತ ಕವಿತೆ ವಾಚಿಸಿದರು.  ಎಸ್. ಎಮ್. ಸಾತ್ಮಾರ  ಅಧ್ಯಕ್ಷತೆಯನ್ನು. ಹಿರಿಯ ಕವಿಗಳಾದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪದ್ಮಜಾ ಉಮರ್ಜಿಯವರು 'ಸಾವಿತ್ರವ್ವ ನಿನಗೆ ಶರಣವ್ವ', ಆಶಾ ಬೇಗಂ ಮುನವಳ್ಳಿಯವರು 'ಹಣ್ಣಿನ ನೋವು ನಿವೇನೂ ಬಲ್ಲಿರಿ', ನಿರ್ಮಲಾ ಶೆಟ್ಟರ್, ಎಚ್. ಡಿ. ತೇಜಾವತಿ, ಗಿರಿಜಾ ಚಿಕ್ಕಮಠರವರು 'ಗುರುಮಾತೆಗೆ ನಮನ', ಆರತಿ ವೀ. ಕೋಟಿ, ಎಮ್. ಟಿ. ರಾಠೋಡ, ವಂದನಾ ಕರಾಳೆ, ರಾಮಚಂದ್ರ ಪತ್ತಾರ, ಸ್ಮೀತಾ ಮಹಾಪುರುಷ,  ಮಂಜುಳಾ ಕುಲಕರ್ಣಿ, ಸುಮಿತ್ರಾ ಹುಣಸಿಮರದ ಮೊದಲಾದವರು ಸ್ವರಚಿತ ಕವನ ವಾಚನ ಮಾಡಿ ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆಯವರ ಆದರ್ಶಗಳ ಮೇಲೆ ಬೆಳಕು ಚಲ್ಲಿದರು.


               ಶಿಕ್ಷಣ ಸಂಯೋಜಕರಾದ ವನಿತಾ ಆರ್, ಲೋಕೇಶ್, ಎಸ್. ಸಿ, ಎಸ್. ಟಿ  ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರಾದ ಮೋತಿಲಾಲ ರಾಠೋಡ, ಕಾರ್ಯದರ್ಶಿಗಳಾದ ರಾಜೇಂದ್ರ ಬಿದರಿ, ಕವಿಗೋಷ್ಟಿ ಸಂಯೋಜಕರು ಸಂಘಟನಾ ಕಾರ್ಯದರ್ಶಿಗಳಾದ ಸುಭಾಷ್ ಚವ್ಹಾಣ, ಸಂಘದ ಉಪಾಧ್ಯಕ್ಷರಾದ ಆನಂದ ತಳವಾರ,  ಪ್ರಮೀಳಾ ಸವಡಿ,  ಕೋಶಾಧ್ಯಕ್ಷರಾದ ಎಸ್. ಎಸ್ ತಟ್ಟಿಯವರ, ಸಹಕಾರ್ಯದರ್ಶಿ ಎಂ. ಆರ್. ಮಾದರ, ಎ. ಎನ್. ವಣ್ಣೂರ, ಸಂಘಟನಾ ಕಾರ್ಯದರ್ಶಿ ಸುಭಾಷ್ ಚವ್ಹಾಣ, ಜೆ. ಎನ್. ಕಳ್ಳಿಮನಿ ಉಪಸ್ಥಿತರಿದ್ದರು. ಸಿ. ಆರ್. ಪಿ, ಬಿ. ಆರ್. ಪಿಯವರು, ನೂರಾರು ಶಿಕ್ಷಕಿ - ಶಿಕ್ಷಕರ ಸಹಕಾರ ತತ್ವದಡಿ ತನು- ಮನ- ಧನದ ಸಹಾಯದಿಂದ ಕಾರ್ಯಕ್ರಮವು ಯಶಸ್ಸಿಗೆ ಸಾಕ್ಷಿಭೂತರಾದರು. 


             ಉಪಾಧ್ಯಕ್ಷರಾದ ಲಲಿತಾ ಕೊಪ್ಪದ ಕವಿಗೋಷ್ಟಿಯಲ್ಲಿ ಹಾಜರಿದ್ದ ಅತಿಥಿಗಣ್ಯರಿಗೆ ಪುಷ್ಪ ಅರ್ಪಿಸಿ ಸ್ವಾಗತಿಸಿದರು. ಕವಿತಾ ವಾಚಿಸಿದ ಕವಿಮಹನೀಯರಿಗೆ ಸಾತ್ಮಾರ ವಿರಚಿತ ಹನಿಮನಿ ಕವನ ಸಂಕಲನ ಮತ್ತು ಉತ್ತಮ ಗುಣಮಟ್ಟದ ಡಿಜಿಟಲ್ ಅಭಿನಂದನಾ ಪತ್ರ ವಿತರಿಸಲಾಯಿತು. ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ ನಿರೂಪಿಸುತ್ತಾ ಸತ್ಯ ಶೋಧಕಿ ಎಂಬ ಕವಿತೆ ವಾಚಿಸಿದರು. ಸಮ್ಮೇಳನಾಧ್ಯಕ್ಷರಾದ ಹೆಚ್. ಎಂ. ಕುಂದರಗಿಯವರು ವಂದಿಸಿದರು.



ವರದಿ: ಸುಹೇಚ ಪರಮವಾಡಿ, ಹುಬ್ಬಳ್ಳಿ ಶಹರ, ೭೯೭೫೦ ೨೬೭೨೪

Image Description

Post a Comment

0 Comments