* ಚಂದ್ರ ಕಮಲ *

 *ಚಂದ್ರ ಕಮಲ  *  



 ನೀನು ನಾನು ಒಂದೇ ಏನು

ನೀನು ಬಾನಲ್ಲಿ

 ನಾನು ನೀರಲ್ಲಿ

ನೀನು ಬೆಳದಿಂಗಳು ಚೆಲ್ಲುವ ತಂಬೆಲರು

 ನಾನು ಜನಿಸಿದ ಜಾಗವೇ ಕೆಸರು

ನೀನು ಬಾನ ಬೆಳಗುವ ಚಂದಿರ

ನಾನು ನಿತ್ಯ ಅರಳುವೆ ಸುಂದರ

ನೀನು ಶಿವನು ಧರಿಸಿಹ ಸೋಮನೇ

ನಾನು ರಾಮ ನಿಂತಿಹ ಕಮಲಿನಿ

ಎಲ್ಲಿಯ ಹೋಲಿಕೆ

 ಎಲ್ಲಿಯ ತೆಗಳಿಕೆ

ನಾವಿಬ್ಬರು ಸಮಾನರಲ್ಲ,

 ಸಾಮ್ಯರು ಅಲ್ಲ

ನೀನೆಂದು ಅಜರಾಮರ

ನಾನು ಪ್ರತಿ ನಿತ್ಯ ಅರಳುವೆ ನಿರಂತರ

ನೀನು ಬಾನಿಗೆ ಭೂಷಣ

ನಾನು ಬಾಳಿಗೆ ಪ್ರೇರಣ

ಇಬ್ಬರೂ ಚೆಲ್ಲುವ ಹೊಂಗಿರಣ 


✍️ ವಿಜಯಲಕ್ಷ್ಮಿ ನಾಡಿಗ್, ಕಡೂರು

Image Description

Post a Comment

0 Comments