ಶೀರ್ಷಿಕೆ :- ಯಾರಿಗಿಲ್ಲ ಚಿಂತೆ...?

 *ಶೀರ್ಷಿಕೆ :- ಯಾರಿಗಿಲ್ಲ ಚಿಂತೆ...?* 



ನನಗೆ ನನ್ನ ಮನೆ ಕಷ್ಟಗಳ ಚಿಂತೆ

ಪಕ್ಕದ ಮನೆಯವರಿಗೆ ಇತರರ

ಬೆಳವಣಿಗೆ ಸಹಿಸಿಕೊಳ್ಳಲಾಗದ ಚಿಂತೆ..!!


ಬಿಕ್ಷುಕನಿಗೆ ಒಂದು ಹೊತ್ತಿನ ಊಟದ ಚಿಂತೆ

ಬಡವನಿಗೆ ದುಡ್ಡಿನ ಚಿಂತೆ

ರೋಗಿಗೆ ತನ್ನ ಕಾಯಿಲೆ ಚಿಂತೆ

ರೈತನಿಗೆ ತನ್ನ ಬೆಳೆ ಮತ್ತು ಬೆಳೆಯ

ಸೂಕ್ತ ಬೆಲೆಯ ಚಿಂತೆ

ಎಲ್ಲರಿಗೂ ಸರ್ಕಾರಿ ಅಧಿಕಾರಿ

ಆಗಬೇಕೆಂಬ ಚಿಂತೆ

ಸರ್ಕಾರಿ ಅಧಿಕಾರಿಗೆ ತಾನು ಗಳಿಸಿದ

ಹಣ ಕಾಪಾಡೋ ಚಿಂತೆ....!!


ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಚಿಂತೆ

ಪದವೀಧರರಿಗೆ ಕೆಲಸದ ಚಿಂತೆ

ಒಳ್ಳೆ ಕೆಲಸ ಸಿಕ್ಕಮೇಲೆ ಮದುವೆ ಚಿಂತೆ

ಮದುವೆ ಆದವನಿಗೆ ಸಂಸಾರದ ಚಿಂತೆ

ಮಗು ಇದ್ದವನಿಗೆ ಅದರ ಭವಿಷ್ಯದ ಚಿಂತೆ

ಮಗು ಇಲ್ಲದವನಿಗೆ ಅದೇ ಚಿಂತೆ...!!


ಒಬ್ಬ ಕಾರ್ಯಕರ್ತನಿಗೆ ಅಧಿಕಾರದ ಚಿಂತೆ

ಶಾಸಕನಿಗೆ ಮಂತ್ರಿ ಆಗೋ ಚಿಂತೆ

ಮಂತ್ರಿಗೆ ಮುಖ್ಯಮಂತ್ರಿ ಆಗೋ ಚಿಂತೆ

ಮುಖ್ಯಮಂತ್ರಿಗೆ  ಐದು ವರ್ಷ

ಅಧಿಕಾರದ  ಚಿಂತೆ

ಎಲ್ಲರ ಜೀವನದಲ್ಲಿಯೂ ಇದೆ ಈ ಚಿಂತೆ

ನಿನ್ನ ಜೀವನಕ್ಕೆ ಮಾತ್ರ ಸೀಮಿತವಲ್ಲ

ಈ ಚಿಂತೆ....!!


ಎದುರಿಸಲು ಹಿಂಜರಿದರೆ

ಜೀವನವೆಲ್ಲಾ ಚಿಂತೆ

ಎದುರಿಸಿ ನಿಂತರೆ ಮಾತ್ರ

ಜೀವನದಲ್ಲಿಲ್ಲ ಯಾವ ಚಿಂತೆ....!!


 *ರಚನೆ :-* 

 *ಮಲ್ಲು ಎಚ್ ಹುಲಿಮನಿ..✍️* 

ಸಾ :- ಬೆನಕನಹಳ್ಳಿ

ತಾ :- ಸುರಪುರ

ಜಿಲ್ಲಾ :- ಯಾದಗಿರಿ

Image Description

Post a Comment

0 Comments