* ಅನೂಹ್ಯ*

 "ಇದು ಬಾಳ ಪಯಣದ ಅನನ್ಯತೆಯ ಕವಿತೆ. ಜೀವಯಾನದ ಅನೂಹ್ಯತೆಯ ಭಾವಗೀತೆ. ಮತ್ತೆ ಮತ್ತೆ ನೆನಪಾಗುತ ಅನುದಿನ ಅನುರಣಿಸುವ, ಅಂದಿಗು, ಇಂದಿಗು, ಎಂದಿಗು ಕಾಡುವ ಕವಿತೆಯಿದು. ಪ್ರತಿ ಸಾಲಿನ ಆಳಕ್ಕಿಳಿದಷ್ಟೂ ಅರ್ಥಗಳ ವಿಸ್ತಾರವಿದೆ. ಅರಿವಿನ ಸಾರವಿದೆ. ಏನಂತೀರಾ..? " - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಅನೂಹ್ಯ


..!


ಜಗದ ಬಟಾಬಯಲೊಳಗೆ

ಮಾಯೆಯ ಇರುಳೊಳಗೆ

ಅರಿವಿನ ಅಂಬರದೊಳಗಿನ

ಅನುಭಾವ ನಕ್ಷತ್ರಗಳೆಣಿಸುತ..


ಕಾಣದ ಗುರಿಯೆಡೆಗೆ

ಬದುಕಿನ ಗಮ್ಯದೆಡೆಗೆ

ನಡೆದಿಹನು ಜೀವವೆಂಬ

ಅಙ್ನಾತ ದಾರಿಹೋಕ.!


ಕಂಡರಿಯದ ಹಾದಿ

ನಂಬಿಕೆಯೇ ಕೌದಿ

ಭರವಸೆಯೇ ಲಾಂದ್ರ

ಭಾವಗಳ ಸಾಂದ್ರ.!


ಆಧ್ಯಾತ್ಮಕೂ ದಕ್ಕದ

ವಿಙ್ನಾನಕೂ ಸಿಕ್ಕದ

ಜೀವನ್ಮರಣ ಹೂರಣ.!

ಜೀವಚೈತನ್ಯದ ಪಯಣ.!!


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments