*ರಾಷ್ಟ್ರೀಯ_ಹಬ್ಬ*
ಸುಗ್ಗಿಯ ಕಾಲಕ್ಕೆ
ಹಿಗ್ಗಿಲೆ ಬಂದಿತು
ನಮ್ಮೆಲ್ಲರ ಹೆಮ್ಮೆಯ
ರಾಷ್ಟ್ರೀಯ ಹಬ್ಬ.
ಭಾರತಾಂಬೆಯ ಮಕ್ಕಳೆಲ್ಲ
ಗರ್ವದಿಂದ ಆಚರಿಸುವ
ಭಾರತ ಗಣರಾಜ್ಯೋತ್ಸವದ
ಸಂಭ್ರಮದ ಈ ಸುದಿನ.
ಬೇಕು ಬೇಡಗಳ
ತುಲನೆಯ ಮಾಡಿ
ನಿರ್ಧಿಷ್ಟ ನೀತಿಗಳು
ನಮಗೆ ಸಂದ ದಿನ .
ದೇಶ ವಿದೇಶಗಳ
ಸುತ್ತಿ ಸಂಪಾದಿಸಿ
ವಿದ್ವತ್ ವಿಚಾರಗಳು
ವಿದ್ಯುಕ್ತವಾಗಿ ಜಾರಿಗೊಂಡ ದಿನ.
ಸಾರ್ವಭೌಮತ್ವದ ಕಹಳೆ
ಅಂಬೇಡ್ಕರ್ ಊದಿದರಿಲ್ಲಿ
ಸಾಮಾನ್ಯ ಪ್ರಜೆಗಳೆ
ಆಳುವ ದೊರೆಗಳಾದ ದಿನ.
ಸ್ವಾತಂತ್ರ್ಯದ ನಂತರ
ಸಂವಿಧಾನ ಜನ್ಮಿಸಿತು
ಜನ್ಮಸಿದ್ಧ ಹಕ್ಕು
ಜನಗಳಿಗೆ ನೀಡದ ದಿನ.
ಗುಲಾಮ ಗಿರಿಯ
ಹೊಸಗಿ ಹಾಕಿ
ರೋಸಿ ಹೋದವರೆಲ್ಲ
ನಿಟ್ಟುಸಿರು ಬಿಟ್ಟಂತ ದಿನ.
ಹಕ್ಕು ಕರ್ತವ್ಯಗಳು
ಒಟ್ಟೊಟ್ಟಿಗೆ ಬಂದವು
ಬಡವ ಶ್ರೀಮಂತರಿಗೂ
ಸಮಾನತೆ ಕಲ್ಪಿಸಿದ ದಿನ.
ಜಾತಿ ಧರ್ಮಗಳಿಗೆ
ಸಮತೆ ಕಲ್ಪಿಸಿ
ಮೇಲು ಕೀಳಿನ
ಭೇದವ ಅಳಿಸಿದ ದಿನ.
ಭಾವೈಕ್ಯತೆ ತೋರಿದ
ಭಾರತ ನಮ್ಮದು
ಭಾಷೆಯಿತ್ತು ನಡೆಯೋಣ
ನಾವೆಲ್ಲರೂ ಒಂದೇ ಎಂದು
ಗಣರಾಜ್ಯೋತ್ಸವ ದಿನದಂದು.
✍️ಡಾ. ಮಹೇಂದ್ರ ಕುರ್ಡಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments