* ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2023 -2024 ನೇ ಸಾಲಿನ ಆದರ್ಶ ವಿದ್ಯಾರ್ಥಿ ಪ್ರಶಸ್ತಿಗೆ : ಮೇಘರಾಜ ಕಾಂಬಳೆ ಆಯ್ಕೆ*

 ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2023 -2024 ನೇ ಸಾಲಿನ ಆದರ್ಶ ವಿದ್ಯಾರ್ಥಿ ಪ್ರಶಸ್ತಿಗೆ : ಮೇಘರಾಜ ಕಾಂಬಳೆ ಆಯ್ಕೆ



ರಾಯಬಾಗ : ಹಾರೂಗೇರಿಯ ಪಟ್ಟಣದ ಪ್ರತಿಷ್ಠಿತ  ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಡಾ. ರಾಮಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ, ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2023/ 2024 ನೇ ಸಾಲಿನ ಆದರ್ಶವಿದ್ಯಾರ್ಥಿ ಪ್ರಶಸ್ತಿಗೆ ಮೇಘರಾಜ ಕಾಂಬಳೆ ಆಯ್ಕೆಯಾಗಿದ್ದಾನೆ.


ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀ ಮುರಘೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಸದ್ಯ ಉನ್ನತ ಶಿಕ್ಷಣವನ್ನು ಹಾರೂಗೇರಿಯ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.


ದಿನಾಂಕ :27/1/2023 ರಂದು 26 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ, ಬೀಳ್ಕೊಡುವ ಸಮಾರಂಭದಲ್ಲಿ ಕಾರ್ಯಕ್ರಮದ ಮುಖ್ಯ ಉದ್ಘಾಟಕರಾಗಿ ಆಗಮಿಸಿದ ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮಹೇಂದ್ರ ತಮ್ಮಣ್ಣನವರ, ಅವರು  2023/2024 ನೇ ಸಾಲಿನ ಆದರ್ಶ ವಿದ್ಯಾರ್ಥಿಯಾಗಿ ಆಯ್ಕೆಯಾದ ಮೇಘರಾಜ ಕಾಂಬಳೆಯವರಿಗೆ ಪ್ರಶಸ್ತಿ ಪತ್ರ, ಶಿಕ್ಷಣ ಶ್ರೀ ಪುಸ್ತಕ, ಸಿಂಹ ಲಾಂಛನದ ಮೂರ್ತಿ ನೀಡಿ, ಗೌರವಿಸಿ ಸನ್ಮಾನಿಸಿದರು. ವೇದಿಕೆಯ ಮೇಲೆ ಮುಖ್ಯ ಅಥಿತಿಗಳಾಗಿ ಶ್ರೀ ಶ್ರೀಕಾಂತ ಕೇಂಧೂಳಿ, ಉಪನ್ಯಾಸಕರು, ಜಾನಪದ ಸಾಹಿತಿಗಳು, ಹಾಗೂ ಗಾಯಕರು, ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಮಣ್ಣ ಗಸ್ತಿ, ಖ್ಯಾತ ನೇತ್ರ ತಜ್ಞ ಡಾ. ಆರ್ ಬಿ. ಒಡೆಯರ್, ಉದ್ಯಮಿ ಶ್ರೀ ಚನ್ನಪ್ಪ ಅಸ್ಕಿ, ಶ್ರೀ ಶಿವರಾಜ ಬಾಗೇವಾಡಿ, ರಾಧಿಕಾ ಗಜಾನನ ಪತ್ತಾರ, ಪದವಿ ಮಹಾವಿದ್ಯಾಲಯದ ಪ್ರಚಾರ್ಯರು ಮತ್ತು ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀ ವಾಯ ಬಿ. ಪಾಟೀಲ್, ಕನ್ನಡ ಉಪನ್ಯಾಸಕರಾದ ಶ್ರೀ ವಿ ಎನ್ ಸರಿಕರ, ಇತಿಹಾಸ ಉಪನ್ಯಾಸಕ ಶ್ರೀ ವಿ ಡಿ ಧರ್ಮಟ್ಟಿ, ಸಮಾಜ ಶಾಸ್ತ್ರ ಉಪನ್ಯಾಸಕ ಶ್ರೀ ಎಮ್ ಬಿ ಹೊಸಪೇಟಿ, ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಯು ಎಸ್. ಆಕಾಶ, ಶಿಕ್ಷಣಶಾಸ್ತ್ರ  ಉಪನ್ಯಾಸಕ ಶ್ರೀ ಎಸ್ ಕೆ ಕೆಳಗಡೆ, ಇಂಗ್ಲಿಷ್ ಉಪನ್ಯಾಸಕ ಶ್ರೀ ವಿ ಬಿ ಆಲಗೂರ್  ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿರಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.


ತನ್ನೆಲ್ಲ ಈ ಸಾಧನೆಗೆ ಸಹಕರಿಸಿದ ಎಲ್ಲ ಉಪನ್ಯಾಸಕರನ್ನು ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ತನ್ನ ಪ್ರೀತಿಯ ಸ್ನೇಹಿತ ಬಳಗಕ್ಕೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ವಿಜೇತ ಮೇಘರಾಜ ಕಾಂಬಳೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾನೆ.


ವರದಿ :ಡಾ. ವಿಲಾಸ  ಕಾಂಬಳೆ

ಹಾರೂಗೇರಿ

Image Description

Post a Comment

0 Comments