* ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಭಾಭವನದಲ್ಲಿ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಶೈಕ್ಷಣಿಕ ಮತ್ತು ಸಾಹಿತ್ಯ ಸಮ್ಮೇಳನ*



*ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಭಾಭವನದಲ್ಲಿ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಶೈಕ್ಷಣಿಕ ಮತ್ತು ಸಾಹಿತ್ಯ ಸಮ್ಮೇಳನ*




                      ಕರ್ನಾಟಕ ರಾಜ್ಯ ಎಸ್ ಸಿ / ಎಸ್ ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವದ್ಧಿ ಸಂಘ ಹುಬ್ಬಳ್ಳಿ ಶಹರ ಘಟಕ ತಾಲೂಕಾ ಶೈಕ್ಷಣಿಕ ಹಾಗೂ ಸಾಹಿತ್ಯ ಸೆಮ್ಮೇಳನ ದಿನಾಂಕ 29 -1-24 ರ ಸೋಮವಾರ ಮಂಜಾನೆ 11 ಗಂಟೆಗೆ ಹುಬ್ಬಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಭಾಭವನದಲ್ಲಿ ಮಾತೆ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನಾಚರಣೆ ಹಾಗೂ ಆದರ್ಶ ಶಿಕ್ಷಕ್ಷಿಯವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ವೈಚಾರಿಕ ಕವಿಗೋಷ್ಟಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಉದ್ಧಾಟನೆ ಮಾನ್ಯ ಶ್ರೀ ಪ್ರಸಾದ ಅಬ್ಬಯ್ಯ ಅಧ್ಯಕ್ಷರು ಕೊಳಚೆ ಅಭಿವೃದ್ಧಿ ಮಂಡಳಿ ಹಾಗೂ ಶಾಸಕರು ನೇರವೆರಿಸಲಿದ್ದಾರೆ. ಉಪನ್ಯಾಸ ಶ್ರೀಮತಿ ಅಕ್ಷತಾ ಕೆ.ಸಿ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಚನ್ನಪ್ಪಗೌಡ್ರು, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಉಮೇಶ ಬೊಮ್ಮೆಕ್ಕನವರ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎಂ. ಎಸ್. ಶಿವಳ್ಳಿಮಠ ವಹಿಸಿಕೊಳ್ಳಲಿದ್ದಾರೆ.


          ಅತಿಥಿಳಾಗಿ ಶ್ರೀ ಮಲ್ಲಿಕಾರ್ಜುನ ಸಿದ್ದಣ್ಣವರ ಮುಖ್ಯಸ್ಥರು ಕನ್ನಡಪ್ರಭ ಸುವರ್ಣ ನ್ಯೂಸ್ ಉತ್ತರ ಕರ್ನಾಟಕ,ಎಸ್. ಸಿ. ಎಸ್.ಡಿ ನೌಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಎಚ್. ಭಜಂತ್ರಿ, ಜಿಲ್ಲಾ ಅಧ್ಯಕ್ಷರಾದ  ವಾಯ್. ಎಸ್. ಶೇರೆವಾಡ, ಕ.ರಾ.ಪ್ರಾ ಶಾಲಾ ಶಿಕ್ಷಕ ಸಂಘದ  ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷರಾದ  ಎಂ. ಎಚ್. ಜಂಗಳಿ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ  ಎಂ. ಯು. ಶಿರಹಟ್ಟಿ, ಪ. ಪಂ. ನೌಕರ ಸಂಘದ ತಾಲ್ಲೂಕು ಅಧ್ಯಕ್ಷತಾದ ಜಿ. ಎನ್. ಕುಬಿಹಾಳ, ಜಾನಪದ ಕಲಾವಿದರಾದ ಸಿದ್ದಪ್ಪ ಬಿದರಿ, ಆರ್, ಎಚ್. ಡೊಂಬರ್, ಲಲಿತಾ ಕೊಪ್ಪದ ವಹಿಸಲಿದ್ದಾರೆ. ಸರ್ವಾಧ್ಯಕ್ಷತೆಯನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಹೇಮಂತ್ ಕುಂದರಗಿ ವಹಿಸುವರು.  


                    ಮಧ್ಯಾನ್ಹ ೦೩ ಗಂಟೆಗೆ 'ಶಾಲಾ ಶಿಕ್ಷಣದಲ್ಲಿತಂತ್ರಜ್ಞಾನ ಬಳಕೆ' ಕಾರ್ಯಾಗಾರ ಹಾಗೂ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ, ಮಹಾತ್ಮಾ ಜ್ಯೋತಿ ಬಾ ಫುಲೆ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ವಿಚಾರಧಾರೆ ಕುರಿತು ಸಮಾನತೆ ಮತ್ತು ವೈಚಾರಿಕತೆ ವಚಾರಧಾರೆ ಆಧಾರಿತ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಟಿಗೆ ಹಿರಿಯಕವಿ ಎಸ್. ಎಮ್. ಸಾತ್ಮಾರ ಚಾಲನೆ ನೀಡಲಿದ್ದು; ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹೆಚ್. ಬಿ. ಕೊರವರ ವಹಿಸಲಿದ್ದಾರೆ. ಹಿರಿಯ ಕವಿಗಳಾದ ಬಿ. ಕೆ. ಹೊಂಗಲ, ಪದ್ಮಜಾ ಉಮರ್ಜಿ, ಆಶಾ ಬೇಗಂ, ಯಲ್ಲಪ್ಪ ಕರೆಣ್ಣವರ, ನಿರ್ಮಲಾ ಶೆಟ್ಟರ್, ಎಚ್. ಡಿ. ತೇಜಾವತಿ, ಗಿರಿಜಾ ಚಿಕ್ಕಮಠ, ವಂದನಾ ಕರಾಳೆ, ಪಾರ್ವತಿ ಕಂಬಳಿ, ರವಿ ಚಲವಾದಿ, ರಾಮಚಂದ್ರ ಪತ್ತಾರ, ಸ್ಮೀತಾ ಮಹಾಪುರುಷ, ಗೋಪಾಲ ನಾಯ್ಕ, ಮಂಜುಳಾ ಕುಲಕರ್ಣಿ, ದೀಪಾ ಕಲ್ಲೂರ್, ಸುಮಿತ್ತರಾ ಹುಣಸುಮರದ ಮೊದಲಾದವರು ಸ್ವರಚಿತ ಕವನ ವಾಚನ ಮಾಡಲಿದ್ದಾರೆ. 


                    ಹುಬ್ಬಳ್ಳಿ ಶಹರ ವಲಯ ತಾಲ್ಲೂಕಿನ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಯಾದ ಹಿರಿಯ ಸಾಹಿತಿ ವೆಂಕಟೇಶ ಕೃ ಮರೆಗುದ್ದಿ, ಧಾರವಾಡ ಜಿಲ್ಲಾ ಕಸಾಪ ಅಧ್ಯರಾದ ಡಾ. ಲಿಂಗರಾಜ ಅಂಗಡಿ, ಹುಬ್ಬಳ್ಳಿ ಶಹರದ ಕಸಾಪದ ನೂತನ ಅಧ್ಯಕ್ಷರಾದ ವಿರೂಪಾಕ್ಷ ಕಟ್ಟಿಮನಿ ಇವರನ್ನು ಸನ್ಮಾನಿಸಲಾಗುವುದೆಂದು ಎಂದು ಎಸ್ಸಿ ಎಸ್ಟಿ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರಾದ ಮೋತಿಲಾಲ ರಾಠೋಡ, ಕಾರ್ಯದರ್ಶಿಗಳಾದ ರಾಜೇಂದ್ರ ಬಿದರಿ, ಕವಿಗೋಷ್ಟಿ ಸಂಯೋಜಕರು ಸಂಘಟನಾ ಕಾರ್ಯದರ್ಶಿಗಳಾದ ಸುಭಾಷ್ ಚವ್ಹಾಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಂಘದ ಉಪಾಧ್ಯಕ್ಷರಾದ ಆನಂದ ತಳವಾರ,  ಪ್ರಮೀಳಾ ಸವಡಿ,  ಕೋಶಾಧ್ಯಕ್ಷರಾದ ಎಸ್. ಎಸ್ ತಟ್ಟಿಯವರ, ಸಹಕಾರ್ಯದರ್ಶಿ ಎಂ. ಆರ್. ಮಾದರ, ಎ. ಎನ್. ವಣ್ಣೂರ, ಸಂಘಟನಾ ಕಾರ್ಯದರ್ಶಿ ಜೆ. ಎನ್. ಕಳ್ಳಿಮನಿ ಉಪಸ್ಥಿತರಿರುವರು.


ವರದಿ: ಸುಹೇಚ ಪರಮವಾಡಿ, ಹುಬ್ಬಳ್ಳಿ ಶಹರ, ೭೯೭೫೦ ೨೬೭೨೪

Image Description

Post a Comment

0 Comments