ನಾಳೆ : ದಿನಾಂಕ :1/2/2024 ರಂದು
ದ ರಾ ಬೇಂದ್ರೆಯವರ ಜನ್ಮ ದಿನದ ನಿಮಿತ್ಯವಾಗಿ ಎಸ್ ಪಿ ಎಮ್ ಮಹಾವಿದ್ಯಾಲಯದಲ್ಲಿ ಬೇಂದ್ರೆ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸವನ್ನು ಕನ್ನಡ ಉಪನ್ಯಾಸಕರಾದ ಪ್ರೊ ಎಸ್ ಕೆ ಗುರುನಾಥ ನೀಡಲಿದ್ದಾರೆ.
ಹಾರೂಗೇರಿ : ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್ ಕಲಾ ವಾಣಿಜ್ಯ, ವಿಜ್ಞಾನ, ಮಹಾವಿದ್ಯಾಲಯದಲ್ಲಿ ದ ರಾ ಬೇಂದ್ರೆಯವರ 128 ನೇ ಜನ್ಮ ದಿನದ ನಿಮತ್ಯವಾಗಿ ಬೇಂದ್ರೆ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸವನ್ನು ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಪ್ರೊ ಎಸ್ ಕೆ ಗುರುನಾಥ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಎಲ್ ಎಸ್ ಧರ್ಮಟ್ಟಿ ವಹಿಸಲಿದ್ದಾರೆ. ಇನ್ನುಳಿದಂತೆ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ ಎಸ್ ಬಿ ಕಲಚಿಮಡ್, ಹಿರಿಯ ಉಪನ್ಯಾಸಕರಾದ ಡಾ. ಸಿ ಡಿ ಠಾಣೆ,ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಡಿ ಎಮ್ ನಾಯ್ಕ ವೇದಿಕೆಯ ಮೇಲೆ ಉಪಸ್ಥಿತರಿರುವರು ಎಂದು ಕಾರ್ಯಕ್ರಮ ಆಯೋಜಕರಾದ ಪ್ರೊ ಕೆ ಎಸ್ ಹಾರೂಗೇರಿ ಡಾ. ವಿಲಾಸ ಕಾಂಬಳೆ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ವರದಿ : ಬಸವೇಶ್ವರಿ ವಿ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments