* ಡಾಕ್ಟರೇಟ್ ಪದವಿ ಪಡೆದ: ಗ್ರಂಥಾಲಯ ಸಹಾಯಕ ಡಾ.ಪ್ರಕಾಶ್ ಎಸ್.ಎನ್ ಅವರಿಗೆ ಕೇಂದ್ರೀಯ ಗ್ರಂಥಾಲಯ ಸಿಯುಕೆ ನೌಕರರರಿಂದ ಸನ್ಮಾನ*
ಕಲಬುರಗಿ: ಜ.19: ಕೇಂದ್ರೀಯ ವಿಶ್ವವಿದ್ಯಾಲಯದ ಕಲಬುರಗಿಯ ಕೇಂದ್ರ ಗ್ರಂಥಾಲಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಪ್ರಕಾಶ್ ಎಸ್.ಎನ್ ರವರು ಇತ್ತಿಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಾ. ವೀರಬಸವಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾ ಪ್ರಬಂಧವನ್ನು ಮಂಡಿಸಿದ್ದು, ಬೆಂವಿವಿಯಿಂದ ಡಾಕ್ಟರೇಟ್ ಪದವಿ ಪಡೆದರು.
ಈ ಸಂದರ್ಭದಲ್ಲಿ ಡಾ ಪ್ರಕಾಶ್ ಎಸ್ ಎನ್ ರವರಿಗೆ ಕೇಂದ್ರೀಯ ವಿವಿಯ ಗ್ರಂಥಾಲಯ ನೌಕರರ ಒಕ್ಕೂಟದಿಂದ ಸನ್ಮಾನಿಸಿದರು.
ಇದೇ ವೇಳೆಯಲ್ಲಿ ಡಾ.ಪಿ.ಎಸ್.ಕಟ್ಟಿಮನಿ, ಮುಖ್ಯ ಗ್ರಂಥಪಾಲಕ, ಡಾ.ಸತೀಶ್ ತೋಟರ್, ಡಾ.ರಾಘವೇಂದ್ರ ಬೋನಲ್, ಡಾ.ದಿಕ್ಸಿತ್, ಶ್ರೀ ರಾಜಕುಮಾರ್ ಕಲ್ಯಾಣಿ ಹಾಗೂ ಮತ್ತಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments