ರಾಯಬಾಗ: ತಾಲೂಕಿನ ಅಲಕನೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಸಭಾ ಭವನದಲ್ಲಿ ನಡೆದ ಗಣರಾಜ್ಯೋತ್ಸವದ ಪ್ರಯುಕ್ತ ಅಲಕನೂರಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ 23-01-2024 ರಂದು ನಡೆಸಿದ ಸಾಮಾನ್ಯ ಜ್ಞಾನ ಸ್ಪರ್ಧೆಯ ಬಹುಮಾನ ವಿತರಣಾ
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿಲಜಿಯ ಕ್ಲಸ್ಟರನ CRP ಗಳಾದ ಶ್ರೀ ಪರಗೊಂಡ ಕಾಂಬಳೆ ಅವರು ಸರ್ಕಾರಿ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಎಸ್. ಬಿ. ಬಿರಾದರ ಪಾಟೀಲ ಸರ್ ಅವರ ಸವಿ ಚಾಣಕ್ಯ ಪ್ರಶ್ನೋತ್ತರಗಳ ಸಂಗ್ರಹ ಕೈಪಿಡಿ ಯನ್ನು ಬಿಡುಗಡೆ ಮಾಡುತ್ತಾ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾದರೆ ಅದಕ್ಕೆ ಪೂರ್ವ ತಯಾರಿ ಬಹಳ ಮುಖ್ಯ. ಅಂತಹ ಬದ್ರಬು ನಾದಿಯನ್ನು ಅಲಕನೂರಿನ ಎಲ್ಲ ಶಾಲೆಯ ಮಕ್ಕಳಿಗೆ ಸಾಮಾನ್ಯ ಜ್ಞಾನ ಸ್ಪರ್ಧೆಗಳನ್ನು ನಡೆಸುವುದರ ಜೊತೆಗೆ ಬಹುಮಾನಗಳನ್ನು ಕೊಟ್ಟು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿರುವ ಊರಿನ ಸೈನಿಕರ, ಜೈ ರಾಯಣ್ಣ ಸ್ಪೋರ್ಟ್ಸ್ ಕ್ಲಬ್ ಗೆಳೆಯರ ಬಳಗದ ಕಾರ್ಯ ನಿಜಕ್ಕೂ ಗಮನಾರ್ಹ ಮತ್ತು ಶ್ಲಾಘನೀಯ ಎಂದು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನಿವೃತ್ತ ಶಿಕ್ಷಕರು, ಶಿಕ್ಷಣ ಪ್ರೇಮಿಗಳಾದ ಶ್ರೀ ಬಿ. ಎಸ್, ಅಥಣಿ ಸರ್ ಅವರು ಶಾಲೆಯ ಎಲ್ಲ ಗುರುಗಳು ಮಕ್ಕಳ ಮಾನಸಿಕ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಪಾಠ ಮಾಡುವುದರ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಬೆಳವಣಿಗೆಯ ಚಟುವಟಿಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು.
ಪ್ರಾಥಮಿಕ ವಿಭಾಗದಲ್ಲಿ ಶ್ರೀನಿಧಿ ಎಸ್. ಬುರ್ಲಟ್ಟಿ ಪ್ರಥಮ, ಸ್ನೇಹಾ ಶೀತಲ ನಾವಿ ದ್ವಿತೀಯ, ಸೌಜನ್ಯ ಪರಶುರಾಮ ಪೂಜೇರಿ ತೃತೀಯ, ಹಾಗೂ ಪ್ರೌಢ ಶಾಲೆಯ ವಿಭಾಗದಲ್ಲಿ ರಾಮು ಚಂದ್ರಕಾಂತ ಡುಬರಿ ಪ್ರಥಮ, ಜ್ಯೋತಿ ಮಾರುತಿ ದರೂರ ದ್ವಿತೀಯ, ಸಾವಿತ್ರಿ ಕರೆಪ್ಪ ದರೂರ ತೃತೀಯ ಬಹುಮಾನಗಳನ್ನು ಪಡೆದರು.
ಈ ಕಾರ್ಯಕ್ರಮದಲ್ಲಿ ಅಲಕನೂರಿನ ಗ್ರಾಮ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸರ್ಕಾರಿ ಪ್ರೌಢ ಶಾಲೆಯ SDMC ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಸೈನಿಕರಾದ ರಾಮು ಹಕ್ಕಿ, ಸೀತಾರಾಮ ಕಾಂಬಳೆ ಹಾಗೂ ಜೈ ರಾಯಣ್ಣ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಪ್ರಕಾಶ ಗಡ್ಡಿ, ಕಾರ್ಯದರ್ಶಿ ರವಿ ಹಸರೆ, ಸದಸ್ಯರಾದ ಶಿವಪುತ್ರ ಕಾಂಬಳೆ, ವಿಕ್ರಮ ಪೂಜೇರಿ, ಲಗಮಣ್ಣ ಗಡ್ಡಿ, ಸುರೇಶ ಪೂಜೇರಿ, ಲಕ್ಕಪ್ಪ ಚಳ್ಳಿಕೆರಿ, ಸಿದ್ದು ಪೂಜೇರಿ, ಮಂಜು ಯಲ್ಲಟ್ಟಿ, ರೋಹಿತ್, ಅಜೀತ, ಸಂತೋಷ್, ಹಾಲಪ್ಪ, ಹಣಮಂತ, ಸುಧೀರ್, ಕಲ್ಲಪ್ಪ ಮುಂತಾದವರು ಭಾಗವಹಿಸಿದ್ದರು. ಮಾಜಿ ಸೈನಿಕರಾದ ಗೋಪಾಲ ಪೂಜೇರಿ ಕಾರ್ಯಕ್ರಮ ನಿರೂಪಿಸಿದರು. ಶಿವಪುತ್ರ ಕಾಂಬಳೆ ವಂದಿಸಿದರು.
ವರದಿ :ಡಾ. ವಿಲಾಸ ಕಾಂಬಳೆ ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments