* ಶೀರ್ಷಿಕೆ : *ದೇಶದ ಯೋಧ*

 🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏


ಶೀರ್ಷಿಕೆ : *ದೇಶದ ಯೋಧ*



ಮಳೆ ಬಿಸಿಲೆನ್ನದೆ ನಿಲ್ಲುವರು

ಶತ್ರುಗಳ ಗುಂಡೇಟಿಗೆ ಎದೆ ಗೊಡುವರು

ನಮ್ಮನೆಲ್ಲ ಸುರಕ್ಷಿತ ವಾಗಿರಿಸು ವರು

ಅವರೇ ಅಲ್ಲವೆ ನಮ್ಮ ದೇಶದ ಯೋಧರು


ನಮ್ಮವರನ್ನೆಲ್ಲ ಬಿಟ್ಟು ಹೋರಡುವರು

ದೇಶದ ಗಡಿ ಕಾಯಲು ಪಣ ತೊಡುವರು

ಶತ್ರುಗಳ ಸದೆ ಬಡಿಯಲು ಕಾಯ್ವರು

ನಮಗೆ ಅವರೇ ಅಂಗ ರಕ್ಷಕರು


ದೇಶವ ಕಾಯಲು ತಾಲೀಮು ನಡೆಸುವರು

ದೇಹವನ್ನು ಕಠಿಣ ಗೊಳಿಸಿ ಕೊಳ್ವರು

ಗುಂಡೇಟು ಬಿದ್ದರೂ ಕೊಸರಿ ಕೊಳ್ವರು

ಅಂತಹ ಹೆಮ್ಮೆಯ ಧೀರರು ನಮ್ಮ ಯೋಧರು


ಅವರನ್ನು ಪಡೆದ ನಾವು ಧನ್ಯರು ನಮಗಾಗಿಯೇ ದೇಶ ಕಾಯ್ವರು

ಅವರಿಗೆ ಒಂದು ಸಲಾಮು ಹೇಳಿ ಎಲ್ಲರು

ಏಕೆಂದರೆ ಭರತ ಮಾತೇ ಮಕ್ಕಳು ನಾವೆಲ್ಲರು.


✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments