* ಜೀವನ ಜಾತರಿ *

 ಜೀವನ ಜಾತರಿ.



ಯಾರಿಗೆ ಎಷ್ಟು ಐತಿ

ಪಾಪ ಪುಣ್ಯದ ಫಲ

ಬಿದ್ದವರ ಎಬ್ಬಿಸುವ ಜನರೆಲ್ಲಿ

ತುಳಿದು ಸಾಗುವ ಸಾಲಿನಲ್ಲಿ.


ನಾನು ನನ್ನದು ಮೊದಲಿನದು

ಉಳಿದರೆ ನಂಜು ಹಂಚುವರು

ಇಷ್ಟು ಕೊಟ್ಟು ಅಷ್ಟು

ಕೊಟ್ಟೆನೆಂದು ಬೀಗುವ ದುಷ್ಟರಿಲ್ಲಿ.


ಎಲ್ಲರಿಗೂ ಮಾಲಕ ಮಣ್ಣು

ಬೀಸುವ ಗಾಳಿ ಹೊನ್ನು

ಬೇಯಿಸುವ ಬೆಂಕಿ ಗುರುವು

ಜಲವೆ ಜನ್ಮಕ್ಕೆ ಬಲವು.


ನಾವು ನಮ್ಮವರು ರಕ್ತ

ಸಂಬಂಧಗಳ ಗೋಳು ದಿನನಿತ್ಯ

ಹೊರಬರದೆ ಒದ್ದಾಡಿ ಸತ್ತವರು

ಪ್ರತಿನಿತ್ಯ ಇನ್ನೆಲ್ಲಿಯದು ಪುಣ್ಯ.


ಹುಣ್ಣಿಮೆ ಅಮವಾಸಿ ಬೆಳಕು

ಕತ್ತಲುಗಳ ಕಾಲನ ಆಟ

ಬಿಸಿಲು ಮಳೆ ಚಳಿಗಾಲ

ಬದುಕಲಿ ಅನುಭವಿಸಬೇಕು ಮೂರ್ಕಾಲ.


ಜಾತಿಮಥಗಳ ಗಾಳಿಗೆ ತೂರಿ

ಮಣ್ಣಮೆಲೆ ಒಂದಾಗಿ ಬಾಳಿ

ಮುಂದಿನದೆಲ್ಲ ಮಣ್ಣೊಳಗೆ ಕೂಡಿ 

ಮರುಜನ್ಮ ಪಡಿಬೇಕು ಮುನ್ನಡಿ.


ಶಿರೂರ ಶ್ರೀಶೈಲ...

Image Description

Post a Comment

0 Comments