ಓಡುವ ಕಾಲ*```

 *```ಓಡುವ ಕಾಲ*``` 



ಬೊಗಸೆಯಲಿ ಹಿಡಿದಿಟ್ಟುಕೊಳ್ಳುವಾಸೆ

ನನ್ನಿಚ್ಚೆಯಂತೆ ನಡೆಸಿಕೊಳ್ಳುವಾಸೆ



ಮರಳಕಣದಂತೆ  ಜಾರುತಿರುವೆ

ನೀರಹನಿಯಂತೆ  ಸೋರುತಿರುವೆ

ಕಾಲವೇ ನೀನೇಕೆ ಓಡುವೆ

ನಿಲ್ಲು ನಾನು ಜೊತೆಗೆ ಬರುವೆ


ಬರುವೆನೆಂದಡೆ ಇರುವೆಯೇನು

ನನಗಾಗಿ ಕಾಯುವೆಯೇನು

ನೀನೆಲ್ಲಿ ನಿಲುವೆ

ನಿನ ನಿಯಮದಂತೆ ಓಡುತಿರುವೆ


ಯಾರಿಗಾಗಿ ಕಾಯಲಾರೆ

ಏನೇ ಬಂದರು ನಿಲಲಾರೆ

ಹಿಂದೆಬಂದರೆ ಶೂನ್ಯ ನಾನು

ಎಚ್ಚರಿಕೆಯ ಘಂಟೆ ನೀನು


ಕಾಲಹರಣ ಮಾಡದಿರು

ಹೆಜ್ಜೆ ಮುಂದೆ ಹಾಕುತಿರು

ಅತ್ತಿತ್ತ ನೋಡದೆ ಮುಂದೆ ಸಾಗುತಿರು

ಗುರಿಯನೆಂದು ಮರೆಯದಿರು


ಕಾಲನಿಯಾಮಕನು ಭೇದ ಭಾವ ವಿಲ್ಲದವನು

ಹುಟ್ಟು ಸಾವು ಇಲ್ಲದವನು 

ಸರಿಯುತಿರುವ ಸಮಯ ನೀನು

ಓಡುತಿರುವ ಕಾಲ ನೀನು


✍️  ನಾಡಿಗ್ ವಿಜಯಲಕ್ಷ್ಮಿ  ಮಂಜುನಾಥ್ ಕಡೂರು

Image Description

Post a Comment

0 Comments