* ಮನವ ಬೆಳಗುತ್ತಾ ಬೆಳಕಾಗಿರುವೆ *

 ನಿನ್ನೊಳಗೆ ಅದುಮಿಟ್ಟ 

ದುಖವಿರಲಿ ನೋವುಗಳಿರಲಿ

ನನ್ನೆದೆಯ ಅಂಗಳದಲ್ಲಿ 

ಹುಗಿದುಬಿಡು 

ಸಂತಸದ ಹೂಗಳ ಅರಳಿಸುವೆ

ನಿನ್ನ ಹಾದಿಯಲಿ 


ನಿನ್ನ ಗೊಂದಲ ತುಂಬಿದ

ಮನದೊಳಗೊಮ್ಮೆ ಓಡಾಡಿ

ಸಿಕ್ಕು ಕಗ್ಗಂಟುಗಳ ಬಿಡಿಸಿ

ನೀನೆ ಕಟ್ಟಿಕೊಂಡಿರುವ ಕೋಟೆಗೆ

ದುಷ್ಟ ಗಾಳಿಯು ತೂರದಂತೆ 

ಕಾವಲಾಗಿರುವೆ 


ನಿನ್ನ ಬಸಿರಾದ ಕನಸುಗಳ 

ನನ್ನಾಸೆಯ ಬಳ್ಳಿಯಲಿ ಅರಳಿಸಿ 

ಹಾದಿಯ ಉದ್ದಕ್ಕು

ಅಪ್ಪುಗೆ ಆಸರೆಯಾಗಿರುವೆ 

ಆಪ್ತರಕ್ಷಕನಂತೆ, ನೀನಿಡುವ 

ಹೆಜ್ಜೆ ಹೆಜ್ಜೆಗು ಎಡವದಂತೆ ಕೈಹಿಡಿದಿರುವೆ


ಕೊರಗದಿರು ಕತ್ತಲೆ ಗುಡಿಯಲಿ 

ಪ್ರೀತಿಯ ಹಣತೆಯಲಿ 

ವಾತ್ಸಲ್ಯ ಮಮತೆಯ ಎಣ್ಣೆ ಸುರಿದು

ನಾನು ಬತ್ತಿಯಾಗಿ ಉರಿದು 

ಮನವ ಬೆಳಗುತ್ತಾ ಬೆಳಕಾಗಿರುವೆ 


✍️…ನಿಮ್ಮವನೆ..ರಾಜ್❣️


Image Description

Post a Comment

0 Comments