ದಿನಾಂಕ 22/01/2024.ರಂದು ಚಾಮರಾಜನಗರ ತಾಲೂಕು ಸಿದ್ದಯ್ಯನಪುರ ಗ್ರಾಮದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಂಚಿನ ಪುತ್ಥಳಿಯ ಮುಂಬಾಗ ಬುದ್ಧ ವಂದನೆ ಧಮ್ಮ ದೀಪ ಕಾರ್ಯಕ್ರಮ ಹಾಗು ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಕೊಟ್ಟಿರುವ
22.ಪ್ರತಿಜ್ಞೆಗಳನ್ನು ಹೇಳುವ ಮೂಲಕ ಸಂವಿಧಾನ ವಿಧಿ 51,(H) ನ್ನು ಬೋದಿಸಲಾಯಿತು . ಜೊತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಂಬತ್ತಿ ಮೆರವಣಿಗೆಯ ಮುಖಾಂತರ 🌷ಪೂಜ್ಯ ತಿಸ್ಸ ಬಂತೇಜಿ 🌷ನಳಂದ ವಿಶ್ವವಿದ್ಯಾನಿಲಯ ಚಾಮರಾಜನಗರ. ರವರ ಸಮ್ಮುಖದಲ್ಲಿ ತ್ರಿಸರಣ ಪಂಚಶೀಲದೊಂದಿಗೆ ಮನೆಮನೆಗೂ ಧಮ್ಮವನ್ನು ಕೊಂಡೊಯ್ಯೋಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಗ್ರಾಮದ ಯಜಮಾನರಾದ ಶ್ರೀಕಂಠ ಮೂರ್ತಿ ರವರು ಮಾತನಾಡಿ ನಮ್ಮ ಗ್ರಾಮದಲ್ಲಿ ಎಲ್ಲರನ್ನೂ ಒಳಗೊಂಡಂತೆ ಮುಂಬರುವ ಪೀಳಿಗೆಗಳಿಗೆ ಅಂಬೇಡ್ಕರ್ ರವರು ತೋರಿದ ಸಮಾನತೆಯ ದಾರಿಯಲ್ಲಿ ನಾವುಗಳು ಸಾಗಬೇಕಿದೆ ಎಂಬ ಸಂದೇಶವನ್ನು ನೀಡಿದರು.
ಎಸ್ ಆರ್ ಗೋವಿಂದರಾಜು ರವರು ಮಾತನಾಡಿ ದೇಶದಲ್ಲಿ ನಡೆಯುವ ಅಸಮಾನತೆ ಅಸ್ಪೃಶ್ಯತೆ ಮೇಲು ಕೀಳೆಂಬ ಭಾವನೆಯನ್ನು ತೊಡೆದು ದೇಶದಲ್ಲಿರುವ ಮಾನವರೆಲ್ಲರು ಒಂದೇ ಎಂಬ ಮಾತುಗಲಾಡಿದರು. ಉನ್ನತಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾದ ಡಾ.ಶಿವಕುಮಾರ್ ಕೆ.ರವರು ಮಾತನಾಡಿ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಅಂಬೇಡ್ಕರ್ ರವರ ಕೊನೆಯ ಕಾಲಘಟ್ಟದಲ್ಲಿ 1956ರಲ್ಲಿ ತಮ್ಮ 5 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅನುಯಾಯಿಗಳೊಂದಿಗೆ ಧಮ್ಮ ದೀಕ್ಷೆಯೆನ್ನು ಪಡೆದು ಭೌದ್ಧ ಧರ್ಮದವನ್ನು ಸೇರಿದರು ಅದರಂತೆ ಮುಂದಿನ ಭವಿಷ್ಯದಲ್ಲಿ ನಮಗೆಲ್ಲ ಒಂದು ಸಮಾನತೆಯ ಬದುಕನ್ನು ಕಟ್ಟಿಕೊಡುವಲ್ಲಿ ಅಂಬೇಡ್ಕರ್ ರವರ ಪಾತ್ರ ಮಹತ್ತರವಾದದ್ದು ಅವರ ಸಂದೇಶ ನಮಗೆಲ್ಲ ದಾರಿದೀಪವಾಗಿದೆ ಎಂದು ನೆರೆದಿರುವ ಎಲ್ಲರಿಗೂ ತಿಳಿಸಿಕೊಟ್ಟರು.ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಸಿ.ಎಂ. ಕೃಷ್ಣಮೂರ್ತಿ ರವರು ಮಾತನಾಡಿ ದಲಿತರು ಹಿಂದುಳಿದವರು ಈ ದೇಶದಲ್ಲಿ ಅತಿ ಹೆಚ್ಚಿನವರೆ ಆಗಿದ್ದು ನಾವೆಲ್ಲ ಒಂದಾಗಿ ಸೇರದೆ ಕುಲ ಜಾತಿ ಧರ್ಮ ಎಂಬ ಕಾರಣಕ್ಕೆ ಒಡೆದು ಚಿದ್ರವಾಗಿದ್ದೇವೆ ಇಂದು ನಾವೆಲ್ಲ ಮೌಢ್ಯದ ವ್ಯಸನಕ್ಕೆ ಬಲಿಯಾಗಿರುವುದು ಒಂದಾಗದಿರಲು ಕಾರಣವಾಗಿದೆ ಎಂದರು.
ಭೌದ್ಧ ಉಪಸಕರಾದ ಮಹೇಶ್ ರವರು ಮತ್ತು ಸಿದ್ದರಾಜು ಸೋಮವಾರಪೇಟೆ ರವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಮಹಾ ನಾಯಕ ಡಾ ಬಿಐ ಆರ್ ಅಂಬೇಡ್ಕರ್ ಯುವಕರ ಸಂಘದ ಕಾರ್ಯದರ್ಶಿಯಾದ ಮಹದೇವಸ್ವಾಮಿ.ಎಸ್.ಎಂ. [ಮಾದು] ರವರು ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರುಗಳಾದ ಪಾಪಣ್ಣರವರು ಬಸವಯ್ಯರವರು ಗ್ರಾಮಪಂಚಾಯಿತಿಯ ಸದಸ್ಯರಾದ ಸೋಮಣ್ಣರವರು, ಮಹದೇವಮ್ಮ ಸಿದ್ದರಾಜುರವರು, ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷರಾದ ಚಂದ್ರಕಾಂತ್ ಎಸ್.ಬಿ.ರವರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಈಶ್ವರರವರು, ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಎಸ್.ಆರ್.ಗೋವಿಂದರಾಜುರವರು, ಹಾಗೂ ಸಂಘದ ಪದಾಧಿಕಾರಿಗಳು ಗ್ರಾಮದ ಹಿರಿಯರು ಕಿರಿಯರು ರೈತ ಮುಖಂಡರುಗಳು ಯುವಕರು ವಿದ್ಯಾರ್ಥಿ ಮಿತ್ರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments