*ನಿರ್ಭಿತಿ ಕನ್ನಡ ಸಾಹಿತ್ಯ ವೇದಿಕೆ*
*ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ*
ಶೀರ್ಷಿಕೆ : *ಸ್ತ್ರೀ ಕುಲದ ಮಾನಿನಿ ಮಾಣಿಕ್ಯಳು*
ಹೆಣ್ಣು ಮಗು ಹಡೆದರೆ
ಗಂಡು ಬೇಕಿತ್ತು ಎನ್ನುವರೆ
ತಾಯಿ ಹೆಣ್ಣೆoಬುದ ಮರೆತರೆ
ಏಕೆ ಚಚ್ಚು ಮಾತಿನ ಬರೆ
ಹೆಣ್ಣಿಂದಲ್ಲವೇ ಹುಟ್ಟು
ಗಂಡು ನಾಮಕರ್ತನು ಗೊತ್ತು
ಮಗುವಿಗೆ ತಿಳಿಸುವಳು ರಟ್ಟು
ಹೆಣ್ಣಾದರೆಂನಂತೆ ಮಮತೆ ಯಿಂದ ಮುಟ್ಟು
ನಮ್ಮನ್ನು ಹೊತ್ತ ಧರಿತ್ರಿ ಹೆಣ್ಣಲ್ಲವೇ
ವಿದ್ಯೆ ನೀಡುವಳು ಶಾರದಾ ದೇವಿಯಲ್ಲವೇ
ಹಣದ ಅಧಿಪತಿಯು ಮಹಾ ಲಕ್ಷ್ಮಿಯಲ್ಲವೇ
ದವಾಖಾನೆಯ ದಾಧಿಯರು ಹೆಣ್ಣಲ್ಲವೇ
ಇದಲ್ಲದೇ ವಾಹನ ಚಾಲಕಳು
ಸಂಸ್ತೆ ನಡೆಸುವ ಅಧಿಕಾರಿಣಿಳು
ಹೆಣ್ಣು ಕಾರ್ಯ ನಿರ್ವಹಿಸದ ರಂಗವಿಲ್ಲದಳು
ಸ್ತ್ರೀ ಕುಲದ ಮಾನಿನಿ ಮಾಣಿಕ್ಯಳು
✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments