ಪ್ರಕಟಣಾ ಕೃಪೆಗಾಗಿ
*ಅಕ್ಷರಮಾತೆ ಸಾವಿತ್ರಿ ಬಾಯಿ ಫುಲೆ ಕವಿಗೋಷ್ಟಿಗೆ ಕವನಗಳ ಆಹ್ವಾನ*
ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಹುಬ್ಬಳ್ಳಿ ಶಹರ ವಲಯ ಘಟಕದಿಂದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ನಿಮಿತ್ತ ಶೈಕ್ಷಣಿಕ ಕಾರ್ಯಾಗಾರ ಹಾಗೂ ಕವಿಗೋಷ್ಟಿಯನ್ನು ಆಯೋಜಿಸಲಾಗಿದೆ. ಹಾಗಾಗಿ ಆಸಕ್ತ ಕವಿ ಕವಯತ್ರಿಯರು ಸಾವಿತ್ರಿಬಾಯಿ ಫುಲೆ ಶೈಕ್ಷಣಿಕ ಚಿಂತನೆ, ಮಹಾತ್ಮ ಜ್ಯೋತಿ ಬಾ ಫುಲೆ ಸಾಮಾಜಿಕ ಸುಧಾರಣೆ, ಅಂಬೇಡ್ಕರ್ ಸಮತಾವಾದ ಚಿಂತನೆ ಆದರ್ಶ ಮೌಲ್ಯಗಳುಳ್ಳ ಒಂದು ಸ್ವರಚಿತ ಕವಿತೆಗಳನ್ನು ತಮ್ಮ ಭಾವಚಿತ್ರ ಮತ್ತು ವಿಳಸದೊಂದಿಗೆ ಸಂಘಟನಾ ಕಾರ್ಯದರ್ಶಿ ಶಿಕ್ಷಕ ಸಾಹಿತಿ ಸುಭಾಷ್ ಹೇಮಣ್ಣಾ ಚವ್ಹಾಣ ಇವರ 7975೦26724 ವಾಟ್ಸಾಪ್ ಸಂಖ್ಯೆಗೆ ಜನವರಿ 27 ರ ಬೆಳಿಗ್ಗೆ 11 ಗಂಟೆಯೊಳಗೆ ಕಳುಹಿಸಬೇಕೆಂದು ಅಧ್ಯಕ್ಷರಾದ ಮೋತಿಲಾಲ್ ರಾಠೋಡ, ಕಾರ್ಯದರ್ಶಿ ರಾಜೇಂದ್ರ ಬಿದರಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ. ಆಯ್ಕೆಯಾದ ಕವನಗಳ ಕವಿತೆಗಳನ್ನು ಆಹ್ವಾನಿಸಿ ಕವಿತಾ ವಾಚನಕ್ಕೆ ಅವಕಾಶ ನೀಡಲಾಗುವುದು. ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಭಾಭವನದಲ್ಲಿ 29 ಜನವರಿ 2೦24ರಂದು ನಡೆಯುವ ಮಾತೆ ಸಾವಿತ್ರಿಬಾಯಿ ಫುಲೆಯವರ ಜಯಂತಿ ಕಾರ್ಯಕ್ರಮದ ಕವಿಗೋಷ್ಟಿಯಲ್ಲಿ ಪ್ರಮಾಣಪತ್ರ ಪುಸ್ತಕ ಗೌರವ ನೀಡಿ ಗೌರವುಸಲಾಗುವುದೆಂದು ಹೇಮಂತ ಕುಂದರಗಿ, ಕುಬಿಹಾಳರವರು ತಿಳಿಸಿದ್ದಾರೆ.
ವರದಿ :ಡಾ.ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments