ಕನ್ನಡ ಉಳಿಸಲು ಒಟ್ಟಾಗಿ ಶ್ರಮಿಸೋಣ: ರೂಪೇಶ್ ರಾಜಣ್ಣ
-ರಾಜ್ಯೋತ್ಸವ ಪ್ರಶಸ್ತಿ, ಸಾಧಕರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ
ಬೆAಗಳೂರು: ಕನ್ನಡದ ಅಸ್ಮಿತೆ ಉಳಿವಿಗೆ ಕಂಕಣಬದ್ಧವಾಗಿ ನಿಂತಿರುವ ಕನ್ನಡ ಶಿಕ್ಷಕರ ಪರವಾಗಿ ನೂರಾರು ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವ ಕರುನಾಡ ಕನ್ನಡ ಕಲಾಸಿರಿ ಬಳಗದ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬರೂ ಕನ್ನಡ ನೆಲ, ಜಲ, ಭಾಷೆ ಉಳಿಸಿ ಬೆಳೆಸಲು ಕನ್ನಡ ಪರ ಸಂಘಟನೆಗಳೆಲ್ಲ ಒಟ್ಟಾಗಿ ಶ್ರಮಿಸೋಣ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹೇಳಿದರು.
ನಗರದ ಕೆಂಗೇರಿ ಬಳಿಯ ದರ್ಶನ್ ಕಾಲೇಜಿನಲ್ಲಿ ಕರುನಾಡ ಕನ್ನಡ ಕಲಾ ಸಿರಿ ಬಳಗದಿಂದ ಹಮ್ಮಿಕೊಂಡ ಕನ್ನಡ ಶಿಕ್ಷಕರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಾಧಕರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಉಳಿವಿಗಾಗಿ ಸಾಕಷ್ಟು ಜನ ಕನ್ನಡಿಗರು ತಮ್ಮದೇ ಆದ ರೀತಿಯಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ವಿಭಿನ್ನವಾಗಿ ಅಂಬರೀಶ್ ಅವರು ಕನ್ನಡ ಶಿಕ್ಷಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಉತ್ತಮ ನಡೆ, ಕನ್ನಡ ಶಿಕ್ಷಕರ ಪ್ರಶಂಸಿಸುವುದು ಪ್ರತಿಯೊಬ್ಬರ ಜವಾಬ್ಬಾರಿ ಎಂದರು.
ಈ ಸಂದರ್ಭದಲ್ಲಿ ಕಲಾ ಸಿರಿ ಬಳಗದ ಗೌರವಾಧ್ಯಕ್ಷ ಡಾ.ಟಿ.ಯಲ್ಲಪ್ಪ ಕೆ.ಕೆ.ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕೆ.ಕುಂಬಣ್ಣ, ಸಮಾಜ ಸೇವಕರಾದ ಸಿ.ಟಿ.ಜಯರಂಗ, ಗೋ ಸಂರಕ್ಷಕರಾದ ಮಹೇಂದ್ರ ಮನೋತ್, ಸಂತ ಅಂತೋಣಿ ಪದವಿ ಪೂರ್ವ ಕಾಲೇಜಿನ ರೋಷನ್ ರೋಝರಿಯೋ ಹಾಗೂ ಕರುನಾಡ ಕಲಾ ಸಿರಿ ಬಳಗದ ಎಲ್ಲಾ ಪದಾಧಿಕಾರಿಗಳಿದ್ದರು.
ಕೋಟ್..
ವಿದ್ಯಾರ್ಥಿಗಳಲ್ಲಿ ಕನ್ನಡದ ಭಾಷಾಭಿಮಾನ ಹೆಚ್ಚಿಸುತ್ತಿರುವ ನೂರಾರು ಕನ್ನಡ ಶಿಕ್ಷಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಿರುವುದು ಅತ್ಯಂತ ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ನಮ್ಮ ಬಳಗದಿಂದ ಕನ್ನಡ ಭಾಷೆ ಬೆಳೆಸಲು ನಾನಾ ಚಟುವಟಿಕೆಗಳು ನಡೆಸಲಾಗುವುದು.
-ಡಾ.ಅಂಬರೀಶ್ ಸಿ.ಎಂ, ಕರುನಾಡ ಕನ್ನಡ ಕಲಾ ಸಿರಿ ಬಳಗದ ಸಂಸ್ಥಾಪಕ ಅಧ್ಯಕ್ಷ
ಬಾಕ್ಸ್
೧೦ ಸಾಧಕರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ
ಕರುನಾಡ ಕಲಾ ಸಿರಿ ಬಳಗದಿಂದ ಶಾಲಾ ಕಾಲೇಜುಗಳಲ್ಲಿ ಕರುನಾಡ ಕನ್ನಡ ಪ್ರತಿಭಾ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ವಿಜೇತರಾದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಪದಕಗಳು ಹಾಗೂ ೨೦೦ ಜನ ಕನ್ನಡ ಶಿಕ್ಷಕರಿಗೆ ಹಾಗೂ ಶಾಲಾ ಕಾಲೇಜಿನ ಪ್ರಾಂಶುಪಾಲರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಕನ್ನಡ ಭಾಷೆ ಉಳಿವಿಗೆ ಶ್ರಮಿಸುತ್ತಿರುವ ೧೦ ಜನ ಸಾಧಕರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೋಟೋ:
ನಗರದ ಕೆಂಗೇರಿ ಬಳಿಯ ದರ್ಶನ್ ಕಾಲೇಜಿನಲ್ಲಿ ಕರುನಾಡ ಕನ್ನಡ ಕಲಾ ಸಿರಿ ಬಳಗದಿಂದ ಹಮ್ಮಿಕೊಂಡ ಕನ್ನಡ ಶಿಕ್ಷಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಉದ್ಘಾಟಿಸಿದರು.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments