*ಡಾ. ವಾಣಿಶ್ರೀ ಕಾಸರಗೋಡು*
*ಗಡಿನಾಡ ಕನ್ನಡತಿ*
ಮುಂಜಾನೆಯ ಮಂಜು
ಮುಂಜಾನೆ ಸುರಿವ ಮಂಜಿನ ಬಿಂದು
ನೇಸರನ ಕಿರಣವು ಬೀಳಲು ಬಂದು
ಹೊಳೆಯುತಿಹುದು ಪ್ರಖರದಿ ಇಂದು
ಸೂಚಸಿತು ಚಳಿಗಾಲವು ಬಂದಿತೆಂದು
ಮುತ್ತ ಮಣಿಯಂತೆ ಹೊಳೆವ ಸಾಲು
ಗಿಡಮರದ ಎಲೆಗಳಿಗೆ ಸರ್ವಪಾಲು
ವರ್ಣಿಸಲು ಪದಗಳೆ ಸಿಗದು ನೋಡು
ಕಾವ್ಯದಾ ಬರಹದಿ ಅಂದದ ಸೊಗಡು
ನಡುರಾತ್ರಿಯ ಬಳಿಕ ಸುರಿಯುವುದು
ದಟ್ಟವಾದoತ ಮಬ್ಬನು ಹರಡುವುದು
ಹೊಗೆಯಂತೆ ಹನಿಗಳು ಬೀಳುವುದು
ಅಂದದಿ ಪ್ರಕೃತಿಯು ಮಿನುಗುವುದು
ಎಷ್ಟೊಂದು ಭೂರಮೆಯ ಸೊಬಗು
ಕಾಲ ಕಾಲಕ್ಕೂ ವ್ಯತ್ಯಾಸದ ಬೆರಗು
ಬಿಸಿಲಿನ ಬೇಗೆಗೆ ಹನಿಯೆಲ್ಲಾ ಕರಗು
ನೇಸರನ ಕಿರಣವು ಧರೆಯನು ಬೆಳಗು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments