*ಅಂಡ್ರಾಯ್ಡ್ ಪೋನ್ ನಮ್ಮ* *ಬದುಕಿಗೆ ಎಷ್ಟು? ಅವಶ್ಯಕ*
======================
ಸಮಾಹ ಮಾಧ್ಯಮಗಳು ಅಂದರೆ ರೇಡಿಯೋ ದೂರದರ್ಶನ ಕಂಪ್ಯೂಟರ್ ಲ್ಯಾಪ್‌ಟಾಪ್ ವೃತ್ತ ಪತ್ರಿಕೆಗಳು ಹಾಗೂ ಮನೆಯ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಜಂಗಮವಾಣಿ .
ಕೈಯಲ್ಲಿ ಓಡಾಡುವ ಮನೆಯಲ್ಲಿಯೇ ಕುಳಿತು ಇಡೀ ಜಗತ್ತಿನಾದ್ಯಂತ ನಡೆಯುವ ಎಲ್ಲಾ ಆಗುಹೋಗುಗಳ ಬಗ್ಗೆ ಕುಳಿತಲ್ಲಿಯೇ ನೋಡುವ ಒಂದು ಪುಟ್ಟ ಪ್ರಪಂಚವೇ ಈ ಅಂಡ್ರಾಯ್ಡ್ ಪೋನ್ .
ಈ ಪುಟ್ಟ ಫ್ರಪಂಚದಲ್ಲಿ ಹೊಕ್ಕರೆ ಸಾಕು ಊಟ ಬೇಡ ನಿದ್ರೆ ಬೇಡ ಹಸಿವು ಬೇಡವೇ ಬೇಡ ಈ ಪುಟ್ಟ ಪ್ರಪಂಚದಲ್ಲಿ ಒಳ ಹೋದರೆ ಸಾಕು
ಸಮುದ್ರದಲ್ಲಿ ಜೀಗಿದ ಹಾಗೆ ಈಜಿ ಮೇಲೆ ಬರಬೇಕು .ಇಲ್ಲ ಅಂದ್ರೆ ಅದರಲ್ಲೇ ಮುಳುಗಿ ಸಾಯಬೇಕು ಅಂತಾ ಒಂದು ಮಾಯಾ ಪುಟ್ಟ ಪ್ರಪಂಚವೇ ಈ ಎಂಡ್ರಾಯ್ಡ್ ಪೋನ್ ಆಗಿದೆ
ಈ ಎಡ್ವರ್ಡ್ ಪೋನ್ ದಿಂದ ಅನೇಕ ಲಾಭ ಹಾಗೂ ಹಾನಿಗಳು ಇವೆ .
ಒಬ್ಬ ವ್ಯಕ್ತಿಯಲ್ಲಿರುವ ಗುಣ ಮತ್ತು ಅವಗುಣಗಳು ಇದ್ದಂತೆ .
ಹೇಗೆ ಒಬ್ಬ ವ್ಯಕ್ತಿಯಲ್ಲಿ ಬರೀ ಗುಣಗಳೇ ಇರಲಾರವೋ ,ಬರೀ ಅವಗುಣಗಳು ಇರಲಾರವೋ ಹಾಗೇಯೇ ಈ ಎಂಡ್ರಾಯ್ಢ್ ಪೋನ್ ಆಗಿದೆ ..
ಗಂಡು ಮಕ್ಕಳಿಗೆ ಎರಡನೇಯ ಹೆಂಡತಿ .
ಹೆಣ್ಣು ಮಕ್ಕಳಿಗೆ ಎರಡನೇಯ ಗಂಡ ಇದ್ದ ಹಾಗೆ ಅಂದರೂ ತಪ್ಪಿಲ್ಲ.
ಅಷ್ಟೊಂದು ಸಂಬಂಧವನ್ನು ಈ ಎಂಡ್ರಾಯ್ಢ್ ಪೋನ್ ಬೆಸೆದು ಕೊಂಡು ಬಿಟ್ಟಿದೆ
ಇದರ ಜೊತೆಗೆ ನಾವು ಅತಿಯಾದ ಸಲುಗೆಯನ್ನು ಇಟ್ಟುಕೊಂಡರೆ ಖಂಡಿತ ಹಾಳು ಆಗುತ್ತೇವೆ .
ನಮಗೆ ಎಷ್ಟು ಬೇಕೋ ಅಷ್ಟೇ ಇದರ ಉಪಯೋಗ ಇರಬೇಕು .
*ಉಪಯೋಗಗಳು*
ನಾನು ಮೇಲೆ ಹೇಳಿದ ಹಾಗೆ ಇದರಿಂದ ಉಪಯೋಗವೂ ಇದೆ ಮತ್ತು ಅಷ್ಟೇ ಹಾನಿಯೂ ಇದೆ ಎಂದು ಮೊದಲು ಉಪಯೋಗ ತಿಳಿದುಕೊಂಡು ಮುಂದೆ ಸಾಗೋಣ .
1 ಗೊತ್ತಿಲ್ಲದ ಯಾವುದೇ ವಿಷಯವನ್ನು ತಿಳಿದುಕೊಂಡು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ .
2 ಪ್ರಯಾಣದ ಬುಕ್ಕಿಂಗ್ ಮಾಡಬಹುದು .
3 ಹಣಕಾಸಿನ ವ್ಯವಹಾರ ಹಾಗೂ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಬಹುದು
4 ದೂರದೂರಕ್ಕೆ ಹೋಗಿ ಮಾತನಾಡದೇ ಈ ಎಂಡ್ರಾಯ್ಡ್ ಪೋನ್ದಲ್ಲೇ ಮಾತನಾಡಿ ಸಮಯವನ್ನು ಉಳಿಸಬಹುದು
5 ವಿದ್ಯಾಭ್ಯಾಸದ ಆನ್ ಲೈನ್ ಕ್ಲಾಸ್ ಗಳನ್ನು ಮಾಡಬಹುದು ಮತ್ತು ಕೇಳಬಹುದು .
6 ಸುಲಭವಾಗಿ ತಕ್ಷಣವೇ ಸಂದೇಶವನ್ನು ತಲುಪಿಸಲು ಮುಖ್ಯ ಸಹಾಯಕವಾಗಿದೆ .
ಇದರಿಂದ ತುರ್ತು ಸಂದರ್ಭದಲ್ಲಿ ಅಪಘಾತ ಅನಾರೋಗ್ಯ ವ್ಯವಹಾರ ಸಲಹೆ ಸೂಚನೆ ಸಮಸ್ಯೆಗಳನ್ನು ತತಕ್ಷಣವೇ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ .
6 ಅನೇಕ ಸಾಹಿತ್ಯ ಚಟುವಟಿಕೆಯ ಗಳನ್ನು ಗುಂಪುಗಳ ಮುಖಾಂತರ ವಿವಿಧ ಕಾರ್ಯಕ್ರಮ ಗಳನ್ನು ನಡೆಸಲು ಸಹಾಯಕವಾಗಿದೆ .
7 ನಮಗೆ ಬೇಕಾದ ಹಾಡುಗಳನ್ನು ಕೇಳಲು ಚಲನಚಿತ್ರಗಳನ್ನು ನೋಡಲು ,ಆನ್ ಲೈನ್ ಆಟಗಳನ್ನು ಆಡಲು ಲೆಕ್ಕ ಮಾಡಲು ಹೀಗೆ ಹತ್ತು ಹಲವು
ಉಪಯೋಗವಿದೆ ಇದು ಅಷ್ಟೇ ಅಲ್ಲದೇ ವಾರ ನಕ್ಷತ್ರ ತಿಥಿ ಭವಿಷ್ಯ
ಅಡುಗೆ ವಿಜ್ಞಾನ ತಂತ್ರಜ್ಞಾನ ಪೋಟೋ ಶೆಲ್ಪಿ.
ಆರೋಗ್ಯ ವಿಷಯ ಸಸ್ಯ ಪ್ರಾಣಿ ಸಂಕುಲ ಒಟ್ಟಿನಲ್ಲಿ
ರಾಜಕೀಯ ,ಆರ್ಥಿಕ ,ಸಾಂಸ್ಕೃತಿಕ, ಸಾಮಾಜಿಕ ಸುದ್ದಿ ಸಮಾಚಾರ ಆಫೀಸಿನ ಕಾರ್ಯಚಟುವಟಿಕೆ
ಎಲ್ಲವನ್ನೂ ನಾವು ಈ ಪುಟ್ಟ ಪ್ರಪಂಚದಿಂದ ತಿಳಿಯಬಹುದಾಗಿದೆ. ಮತ್ತು ತಿಳಿಯುತ್ತಾ ಇದ್ದೇವು ಕೂಡಾ.
ಒಟ್ಟಿನಲ್ಲಿ ಇಂದಿನ ಪ್ರಚಲಿತ ಸಂದರ್ಭದಲ್ಲಿ ಬಹು ಮುಖ್ಯವಾದ ಪಾತ್ರವನ್ನು ಈ ಮೊಬೈಲ್ ಪೋನ್ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಬಹುದಾಗಿದೆ .
*ಅಪಾಯಗಳು / ಅವಗುಣಗಳು*
ಅಂಡ್ರಾಯ್ಡ್ ಮೊಬೈಲ್ ಎಷ್ಟು ಉಪಯುಕ್ತವೋ ಅಷ್ಟೇ ಹಾನಿಯೂ ಕೂಡಾ ಎನ್ನುವ ಸತ್ಯವನ್ನು ನಾವಿಂದು ತಿಳಿಯಲೇ ಬೇಕಾಗಿದೆ .
1 ಮೊದಲನೆಯದಾಗಿ ಇದು ಆರೋಗ್ಯದ ಮೇಲೆ ತುಂಬಾ ಹಾನಿಯನ್ನು ಉಂಟು ಮಾಡುತ್ತದೆ ಎಂದು ಹೇಳಬಹುದು .
ಟಗರುಗಳು ಹೊರ ಸೂಸುವ ವಿಕಿರಣಗಳು ನಮ್ಮ ದೇಹದ ಮೇಲೆ ತುಂಬಾ ಹಾನಿಕಾರಕವಾಗಿದೆ .
2 ಓದುವ ಆಸಕ್ತಿ ಕಡಿಮೆ ಆಗುವುದು .
3 ಜೀವನ ಶೈಲಿಯ ಮೇಲೆ ಬದುಕಿನ ಮೇಲೆ ಗಾಢ ಪರಿಣಾಮ ಬೀರಿದೆ .
4 ಪಕ್ಷಿ ಸಂಕುಲ ಅಳಿದು ಹೋಗುವ ದುಸ್ಥಿತಿ ಬಂದೊದಗಿದೆ .
5 ವಾಹನ ಅಪಘಾತಕ್ಕೆ ಕಾರಣವಾಗಿದೆ
6 ನಿದ್ರಾಹೀನತೆ ಉಂಟಾಗುತ್ತದೆ ಇದರಿಂದ ಕಣ್ಣಿನ ಮೇಲೆ ತುಂಬಾ ಪರಿಣಾಮ ಬೀರಿ ಕಣ್ಣು ವಾಸಿಯಾಗದೇ ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ .
7 ಬೇಡವಾದ ದೃಶ್ಯಗಳನ್ನು ನೋಡುವುದರಿಂದ ಕೇಳುವುದರಿಂದ ನೈತಿಕ ಮೌಲ್ಯಕ್ಕೆ ತುಂಬಾ ಕುತ್ತು ತಂದುಕೊಟ್ಟಂತಾಗುತ್ತದೆ .
8 ಅತೀ ಅಮೂಲ್ಯವಾದ ಸಮಯ ತುಂಬಾ ವ್ಯರ್ಥ ಹಾಗೂ ಹಾಳಾಗುತ್ತದೆ .ಇದರಿಂದ ಮಾಡಬೇಕಾದ ಕೆಲಸ ಕಾರ್ಯ ಗಳು ನಿಧಾನ ಹಾಗೂ ಪೂರ್ಣ ಗೊಳ್ಳದೇ ಹೋಗುತ್ತದೆ .
9 ಕುಟುಂಬದ ಸದಸ್ಯರೊಂದಿಗೆ ಬೆರೆಯಲು ಮಾತನಾಡಲು ಆಗದೇ ಸಂಬಂಧಕ್ಕೆ ದಕ್ಕೆ ತರುತ್ತದೆ .
ಒಟ್ಟಿನಲ್ಲಿ ನಮಗೆ ಎಷ್ಟು ಅವಶ್ಯಕವೋ ಅಷ್ಟೇ ಉಪಯೋಗಿಸಿ ಸುಮಾರು ದೂರ ಇಟ್ಟು ಮಲಗಬೇಕು .
ಚಿಕ್ಕ ಮಕ್ಕಳ ಕೈಯಲ್ಲಿ ಖಂಡಿತ ಕೊಡಬಾರದು .
ಅಂಡ್ರಾಯ್ಡ್ ಪೋನ್ ಬಳಕೆ ಯಿಂದ ಲಾಭವೂ ಇವೆ ಮತ್ತು ಅಷ್ಟೇ ಹಾನಿಗಳು ಇದ್ದು ಅದನ್ನು ಉಪಯೋಗಿಸುವ ರೀತಿಯನ್ನು ನಾವು ಬದಲಾಯಿಸಿ ಕೊಂಡು ಸಮಾಜದ ನೈತಿಕತೆಗೆ ಹಾಗೂ ಹೊಣೆಗಾರಿಕೆಗೆ ಧಕ್ಕೆ ಆಗದಂತೆ ಉಪಯೋಗಿಸಿಕೊಂಡು ಹೋಗಬೇಕು ಎನ್ನುವ ಅಭಿಪ್ರಾಯ ನನ್ನದಾಗಿದೆ .
-----------------'
*ಡಾ ಸಾವಿತ್ರಿ ಕಮಲಾಪೂರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments