ಸೌದತ್ತಿ :ಇಂದು ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಮುನವಳ್ಳಿ ತಾಲೂಕ ಸೌದತ್ತಿಯಲ್ಲಿ
8ನೇ ತರಗತಿಯ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 15 ವಿದ್ಯಾರ್ಥಿಗಳು ಭಾಗವಹಿಸಿ ತಾವು ಬರೆದ ಕವನಗಳನ್ನು ವಾಚನ ಮಾಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿಕ್ಷಕರಾದ ಶ್ರೀ ವಾಯ್.ಟಿ. ತಂಗೋಜಿ ಅವರು ಮಾತನಾಡಿ ಕವಿತೆಗಳು ಮನುಷ್ಯನ ಭಾವನೆಗಳನ್ನು ಹೊರಹಾಕಲು ಇರುವಂತ ಒಂದು ಸಾಧನ. ಇಲ್ಲಿ ನಮ್ಮ ಭಾವನೆಗಳನ್ನು ಮತ್ತು ವಿಚಾರಗಳನ್ನು ಅಭಿವ್ಯಕ್ತಿ ಕಳಿಸಲು ಕವಿಗೋಷ್ಠಿಯು ಉತ್ತಮವಾದ ವೇದಿಕೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವರ್ಗ ಶಿಕ್ಷಕರಾದ ಡಾ. ನಾಗೇಂದ್ರ ಆರ್ ಚಲವಾದಿ ಅವರು ಉಪಸ್ಥಿತರಿದ್ದರು.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments