*ಮಳೆ -ಇಳೆ*

 ಮಳೆ -ಇಳೆ



ಅಪರೂಪಕ್ಕೆ ಬಂತೊಂದು ಮಳೆ,

ನಿಜಕ್ಕೂ ತಂಪಾಯಿತು ಇಳೆ.


ಗುಡುಗು ಸಿಡಿಲಿನ ಆರ್ಭಟದ ಮಳೆ,

ಬಳಲಿ ಬೆಂಡಾಗಿದ್ದ ಇಳೆ.


ದಿಟ್ಟಿಸಿ ನೋಡುತ್ತಿದ್ದ ರೈತ ಆಗಸ,

ಮಳೆಯ ನೋಡಿ ಪಟ್ಟ ಸಂತಸ.


ಸುತ್ತಾಡಿ ಸುತ್ತಾಡಿ ಬಳಲಿದ್ದವು ಕುರಿ ಮೇಕೆ,

ಇಂದು ಯೋಚಿಸದವು ನಿಸರ್ಗ ಹೀಗೇಕೆ.


ಅಂತೂ ಆಯಿತು  ಬರದ ಬೀಡು,

ಸಂತಸದಿ ಮಲೆನಾಡು..


-ಸುಬ್ರಹ್ಮಣ್ಯ ಡಿ.ಕೆ

ಪ್ರಾಂಶುಪಾಲರು,

ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜು,

ಶಿರಾ.

Image Description

Post a Comment

0 Comments